ಬೆಂಗಳೂರು – ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ರಂಗು ಬಂದಿದೆ ಪ್ರಚಾರದ ಅಖಾಡದಲ್ಲಿ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರಾಟೆ ಪ್ರಚಾರ ನಡೆಸುವ ಮೂಲಕ ಮತ ಬೇಟೆಯಲ್ಲಿ ನಿರತರಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ 28 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿನ ಗೆಲುವು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಹೀಗಾಗಿ ಬಹುತೇಕ ಎಲ್ಲ ಪಕ್ಷಗಳ ನಾಯಕರು ಕೊನೆಯ ಕ್ಷಣಗಳಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. (BJP)
ಈ ನಡುವೆ ಬಹಿರಂಗ ಪ್ರಚಾರ ಅಂತ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಸಮಯದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಪ್ರಚಾರ ನಡೆಸಲು ಅವಕಾಶವಿಲ್ಲದಂತಹ ಸ್ಥಿತಿ ನಿರ್ಮಿಸಲು ವ್ಯವಸ್ಥಿತ ತಂತ್ರ ರೂಪುಗೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಅದು ಹೇಗಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿನಲ್ಲಿ ಸುಮಾರು 35 ಕಿಲೋಮೀಟರ್ ಉದ್ದದ ರೋಡ್ ಶೋ ನಡೆಸಲಿದ್ದಾರೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ನಗರದ 23 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ರೋಡ್ ಶೋ ನಡೆಯಲಿದೆ. (BJP)
![]()
ಶನಿವಾರ ಬೆಳಿಗ್ಗೆ ಸಿ.ವಿ.ರಾಮನ್ನಗರದಿಂದ ಆರಂಭವಾಗಲಿರುವ ರೋಡ್ ಶೋ ಬ್ರಿಗೇಡ್ ರಸ್ತೆವರೆಗೆ ಸಾಗಲಿದೆ. ಸಂಜೆ ರೋಡ್ ಶೋ ಕೋಣನಕುಂಟೆಯಿಂದ ಆರಂಭವಾಗಿ ಮಲ್ಲೇಶ್ವರಂ ನ ಹದಿನೆಂಟನೇ ಅಡ್ಡರಸ್ತೆಯಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದ ಸಮೀಪ ಅಂತ್ಯವಾಗುವ ಸಾಧ್ಯತೆ ಇದೆ.
ಸಿ.ವಿ. ರಾಮನ್ ನಗರ, ಮಹದೇವಪುರ, ಕೆ. ಆರ್. ಪುರಂ, ಶಿವಾಜಿನಗರ, ಗಾಂಧಿನಗ,ರ ಶಾಂತಿನಗರ ಚಿಕ್ಕಪೇಟೆ ಚಾಮರಾಜಪೇಟೆ,ಜಯನಗರ, ವಿಜಯನಗರ ಗೋವಿಂದರಾಜನಗರ ಮಹಾಲಕ್ಷ್ಮಿ ಲೇಔಟ್ ರಾಜಾಜಿನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಧಾನಿ ಅವರ ರೋಡ್ ಶೋ ನಡೆಯಲಿದೆ. (BJP)
ಹೀಗಾಗಿ ಅಂದು ಇಡೀ ದಿನ ಬೆಂಗಳೂರಿನಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಜನ ಸಂಚಾರದ ಮೇಲೂ ಕೆಲವು ಮಿತಿಗಳು ಹೇರಲ್ಪಡುತ್ತವೆ. ಪ್ರಧಾನಿ ಅವರಿಗೆ ಅತಿ ಹೆಚ್ಚಿನ ಭದ್ರತೆ ಇರುವ ಹಿನ್ನೆಲೆಯಲ್ಲಿ ಅವರ ರೋಡ್ ಸಾಗುವ ಪ್ರದೇಶಗಳಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಇದರಿಂದ ಅಂದು ಈ ಎಲ್ಲಾ ಪ್ರದೇಶಗಳಲ್ಲಿ ಬಿಜೆಪಿ ಹೊರತುಪಡಿಸಿ ಇತರೆ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ನಿರ್ಬಂಧ ಬೀಳುವ ಸಾಧ್ಯತೆ ಇದೆ.. (BJP)
Also read.

