ಬೆಂಗಳೂರು,ಫೆ.20-
ಪ್ರೀತಿ ಅರಸಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ವಾಸ್ತವ್ಯ ಹೊಡಿದ್ದ Pak ಮಹಿಳೆಯನ್ನು ಪೊಲೀಸರು ಮತ್ತೆ ಅಟರಿ ಬಾರ್ಡರ್ ಮೂಲಕ ವಾಪಸ್ ಕಳುಹಿಸಿದ್ದಾರೆ. ಪಾಕ್ ಯುವತಿ ಇಕ್ರಾ ಜೀವನಿ ಎಂಬ ಯುವತಿ ಆನ್‌ಲೈನ್‌ನಲ್ಲಿ ಲುಡೋ ಗೇಮ್ ಆಡುವ ಚಟ ಬೆಳೆಸಿಕೊಂಡಿದ್ದು, ಈ ಆಟ ಆಡುತ್ತಲೇ ಆಕೆಗೆ ಭಾರತದ ಉತ್ತರ ಪ್ರದೇಶ ಮೂಲದ 26 ವರ್ಷದ ಮುಲಾಯಂ ಸಿಂಗ್ ಎಂಬಾತನ ಪರಿಚಯವಾಗಿದೆ.
ಪರಿಚಯ ಪ್ರೇಮಕ್ಕೆ ತಿರುಗಿ ಆತನನ್ನು ಬಿಟ್ಟಿರಲಾರದಷ್ಟರ ಮಟ್ಟಿಗೆ ಹಚ್ಚಿಕೊಂಡ ಆಕೆ ಅದಕ್ಕಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರುವುದಕ್ಕೆ ಮುಂದಾಗಿದ್ದಳು. ಆದರೆ ಬರುವುದು ಹೇಗೆ ಈಕೆಯ ಬಳಿ ಭಾರತ VISA ಇಲ್ಲ.
ಹೀಗಿರುವಾಗ ಗೆಳೆಯ ಮುಲಾಯಂ ಆಕೆಗೆ ನೇಪಾಳ (Nepal) ಕ್ಕೆ ಹೋಗಿ ಅಲ್ಲಿಂದ ಸನೋಲಿ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸುವಂತೆ ಸಲಹೆ ನೀಡಿದ್ದಾನೆ. ಪ್ರಿಯಕರನ ಮಾತು ಕೇಳಿದ ಆಕೆ ಅದರಂತೆ ಪಾಕಿಸ್ತಾನದಿಂದ ನೇಪಾಳಕ್ಕೆ ತೆರಳಿದ್ದಾಳೆ. ಕಳೆದ ಸೆಪ್ಟೆಂಬರ್ 19 ರಂದು ನೇಪಾಳದ ರಾಜಧಾನಿ ಕಠ್ಮಂಡು (Katmandu) ವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಇಕ್ರಾ ಜೀವನಿಯನ್ನು ಅಲ್ಲಿ ಮುಲಾಯಂ ಸ್ವಾಗತಿಸಿದ್ದಾನೆ.
ಅಲ್ಲಿ ಇಬ್ಬರು ಮದುವೆಯಾಗಿದ್ದು, ಒಂದು ವಾರಗಳ ಕಾಲ ಇಬ್ಬರೂ ಅಲ್ಲೇ ಕಳೆದಿದ್ದಾರೆ. ನಂತರ ಇಬ್ಬರು ಇಂಡೋ ನೇಪಾಳ್ ಸನೋಲಿ ಬಾರ್ಡರ್ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ನಂತರ ಬೆಂಗಳೂರಿಗೆ ಬಂದ ಈ ಜೋಡಿ ಇಲ್ಲಿ ವಾಸ ಮಾಡಲು ಶುರು ಮಾಡಿದ್ದಾರೆ. ಇಕ್ರಾ ರವಾ ಎಂಬ ಹಿಂದೂ ಹೆಸರನ್ನು ಇರಿಸಿಕೊಂಡಿದ್ದು ಇಬ್ಬರು ಜೊತೆಯಾಗಿ ವಾಸ ಮಾಡಲು ಶುರು ಮಾಡಿದ್ದಾರೆ.
ಈ ಮಧ್ಯೆ ಹಿಂದೂಗಳೆಂದು ಹೇಳಿಕೊಂಡು ಮನೆಯಲ್ಲಿ ನಮಾಜ್ ಮಾಡುತ್ತಿರುವುದ್ದನ್ನು ನೋಡಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇವರು ವಾಸವಿದ್ದ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದಾಗ ಅಲ್ಲಿ ಇಕ್ರಾ ಹಾಗೂ ಆಕೆಯ ಪಾಕಿಸ್ಥಾನಿ ಪಾಸ್‌ಪೋರ್ಟ್ ಪೊಲೀಸರಿಗೆ ಸಿಕ್ಕಿದೆ.
ನಂತರ ಆಕೆಯನ್ನು ಬಂಧಿಸಿ ಕರೆತಂದ ಪೊಲೀಸರು, ಅಮೃತಸರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯನ್ನು ಅಟರಿ ಬಾರ್ಡರ್ ಮೂಲಕ ವಾಪಸ್ ಪಾಕಿಸ್ಥಾನಕ್ಕೆ ಕಳುಹಿಸಿ ಕೊಟ್ಟಿದ್ದಾರೆ.
ಇವರು ನೇಪಾಳದಿಂದ ಸೀದಾ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ದರು. ಈ ಮಧ್ಯೆ ತಾಯಿಯನ್ನು ಸಂಪರ್ಕ ಮಾಡಲು ಇಕ್ರಾ ಜೀವನಿ ಯತ್ನಿಸಿದ್ದು, ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್‌ನನ್ನು ಜ. 23 ರಂದು ಪೊಲೀಸರು ಬಂಧಿಸಿದ್ದರು. ನಂತರ ಯುವತಿಯನ್ನು ವಿಚಾರಣೆ ನಡೆಸಿದಾಗ ರಾವಾ ಯಾದವ್ ಎಂಬ ಹೆಸರು ಬದಲಾಯಿಸಿಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಸಂಗತಿ ತಿಳಿದಿತ್ತು. ಇನ್ನು ಬಂಧಿತ ಯುವತಿಯ ಬಗ್ಗೆ FRRO ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದರು.
ಒಟ್ಟಿನಲ್ಲಿ ಪ್ರೀತಿ ಅರಸಿ ಗಡಿ ದಾಟಿ ಬಂದ ಯುವತಿ ಮತ್ತೆ ತನ್ನ ತಾಯ್ನಾಡಿಗೆ ಹೋಗುವಂತಾಗಿದೆ.ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ವಾಪಸ್ ಕಳುಹಿಸಿರೋದಕ್ಕೆ ಜನ ಬೇಸರ ವ್ಯಕ್ತಪಡಿಸಿದ್ದಾರೆ, ಅಲ್ಲಿ ಆಕೆಯ ಸ್ಥಿತಿ ಹೇಗಿರುವುದೋ ಏನೋ? ಅದು ಆಕೆ ಭಾರತದ ಅದರಲ್ಲೂ ಹಿಂದೂ ಯುವಕನ ಜೊತೆ ಓಡಿ ಬಂದಿದ್ದಾಳೆ ಎಂದು ತಿಳಿದರೆ ಅವರು ಆಕೆಯನ್ನು ಹತ್ಯೆ ಮಾಡುವುದು ಪಕ್ಕಾ. ಆಕೆಯ ಬಗ್ಗೆ ಮಾನವೀಯ ನೆಲೆಯಲ್ಲಿ ಯೋಚಿಸಿ ಇಲ್ಲಿ ಉಳಿಯಲು ಆಕೆಗೆ ಆಶ್ರಯ ನೀಡಬೇಕಿತ್ತು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
11 Comments
Паркетная доска – это тип напольного покрытия, состоящий из деревянных планок, которые укладываются в виде палубной доски. Она отличается высокой долговечностью и прочностью, а также придает интерьеру теплую и уютную атмосферу. Паркетная доска может быть изготовлена из различных пород дерева и иметь различные оттенки и текстуры, что позволяет подобрать подходящий вариант под любой стиль помещения. https://kvarcvinil3.ru/
Магазин напольных покрытий и кварцвинилового ламината – это идеальное решение для тех, кто ищет красивое, практичное и долговечное покрытие для пола. Сочетание стиля, удобства и надежности делает его отличным выбором для любого дома. https://ламинат1.рф/
Denk je aan de goede oude tijd toen er home buttons en bubble icons waren? Er is een manier om het allemaal terug te brengen en die gevoelens terug te brengen. Een app genaamd OldOS (via the Verge) herstelt iOS 4 naar de nieuwe iPhone. Ontdek meer – https://mashable.com/article/iphone-3g-oldos
משותף הגוף המושלם. גוף שעושה לך חשק רק לגעת ולקבל ממנו עוד ועוד. אם זה הישבן העסיסי החזה השופע או שניהם ביחד – תהיה בטוח שם, גברים מביאות איתן ניסיון רב בעינוג לבלות עם נערות ליווי באילת בכל שעה ובכל יום ניתן לבלות עם נערות ליווי באילת. וניתן גם לעשות read
Descubra o horario de brasilia e tenha a certeza de estar sempre no fuso horário correto. Perfeito para quem vive ou trabalha na capital e precisa de pontualidade!
https://armatura4u.ru/
Клининг квартиры пожилого человека https://ochistka-gryaznyh-kvartir-msk.ru/
Selector
Обработка помещений после пожара https://spec-uborka-posle-pozhara.ru/
Наши сауны — это идеальное решение для тех, кто хочет расслабиться после тяжёлого дня. Здесь вы сможете насладиться паром, поплавать в бассейне и получить массу удовольствия, подробнее https://dai-zharu.ru/
работа в 14