Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಅವತಾರ ಪುರುಷ ಮಾಡಿದ್ದು ಅನಾಚಾರ
    ಸುದ್ದಿ

    ಅವತಾರ ಪುರುಷ ಮಾಡಿದ್ದು ಅನಾಚಾರ

    vartha chakraBy vartha chakraSeptember 3, 2022Updated:September 3, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Premsai
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಸೆ.3-ಸಾಯಿಬಾಬಾನ 3ನೇ ಅವತಾರ ಪ್ರೇಮಸಾಯಿ ದೇವಮಾನವ. ಜನರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ತಂಡದ ವಿರುದ್ಧ ಚನ್ನಪಟ್ಟಣ ನಗರ ಪೂರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ಪ್ರೇಮ ಸಾಯಿಬಾಬಾ ಎಂದು ಹೇಳಿಕೊಂಡು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದು ವಂಚನೆ ನಡೆಸಿರಿವ ಆರೋಪಿಗಳು ನಾಪತ್ತೆಯಾಗಿದ್ದಾರೆ.
    ಚನ್ನಪಟ್ಟಣದ ಎಂ.ಜಿ. ರಸ್ತೆಯ ಯಶೋದಮ್ಮ ಎಂಬುವರ ಮನೆಯಲ್ಲಿ 8 ತಿಂಗಳಿಂದ ಸಚಿನ್​ ಅಕಾರಾಂ ಸರ್​ಗರ್​ ಎಂಬಾತ ಜನರ ಸಮಸ್ಯೆ ಪರಿಹರಿಸುತ್ತೇನೆ ಎಂದು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಈ ಬಗ್ಗೆ ತಿಳಿದ ಹಲವರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಪೈಕಿ ಮಂಗಳವಾರ ಪೇಟೆಯ ಮರಳು ಹೊಲದ ಸಿಂಧು ಎನ್ನುವವರೂ ಒಬ್ಬರು.
    ಒಂದು ದಿನ ಖದೀಮ ಯಶೋದಮ್ಮನ ಮನೆ ಚಿಕ್ಕದಾಗಿದೆ. ಪ್ರತಿ ಗುರುವಾರ ಭಜನೆಗೆ ನಿಮ್ಮ ತೋಟದ ಮನೆಯಲ್ಲಿ ಅವಕಾಶ ಕೊಡುವಂತೆ ಸಿಂಧು ಅವರನ್ನು ಕೋರಿದ್ದಾನೆ. ಇದಕ್ಕೆ ಮನೆಯಿಂದಲೂ ಅನುಮತಿ ದೊರೆತಿದ್ದು, ಸುಮಾರು ಮೂರು ತಿಂಗಳು ಪ್ರತಿ ಗುರುವಾರ ಭಜನೆ ನಡೆಯುತ್ತಿತ್ತು. ನಂತರ, ಆತ ನಗರದ ಎಂ.ಜಿ. ರಸ್ತೆಯಲ್ಲಿರುವ ಯಶೋಧಮ್ಮ ಅವರ ಮನೆಗೆ ತೆರಳುತ್ತಿದ್ದ.
    ಒಂದು ದಿನ ನಿಮ್ಮ ತೋಟದ ಮನೆ ಬಹಳ ವಿಶಾಲವಾಗಿದೆ. ಅದನ್ನು ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಸಮಿತಿ ಟ್ರಸ್ಟ್​ಗೆ ದಾನವಾಗಿ ಕೊಡಿ ಎಂದು ಒತ್ತಾಯಿಸಿದ್ದಾನೆ. ಆದರೆ, ದಾನ ಮಾಡಲು ಸಿಂಧು ಪತಿ ನಿರಾಕರಿಸಿದ್ದಾರೆ.
    ಕಳೆದ ಜು.13ರಂದು ಡಾ.ಸಾಯಿಕುಮಾರಿ, ಕೃಷ್ಣಯ್ಯ ಮತ್ತು ಗಿರೀಶ್​ ವಿಜೇಂದ್ರ ಎನ್ನುವವರು ನಗರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮಾ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ಭಕ್ತರು ಸಚಿನ್​ ಅಕಾರಾಂ ಸರ್​ಗರ್​ನನ್ನು ನೋಡುತ್ತಿದ್ದಂತೆ ಈತ ಪ್ರೇಮಸಾಯಿ ಅಲ್ಲ ಎನ್ನುವುದನ್ನು ಖಾತ್ರಿಪಡಿಸಿದ್ದಾರೆ. ಇದಾದ ನಂತರ ಅನುಮಾನಗೊಂಡ ಕೆಲ ಭಕ್ತರು ಕೊಲ್ಲಾಪುರಕ್ಕೆ ತೆರಳಿ ಈತನ ಪೂರ್ವಾಪರ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
    ಆದರೆ, ಇಷ್ಟರಲ್ಲಾಗಲೇ ಹಲವರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಸ್ವತಃ ದೂರುದಾರರಾದ ಸಿಂಧು 1.5 ಲಕ್ಷ ರೂ., ವೆಂಕಟೇಶ್​, ಚನ್ನೇಗೌಡ ಎನ್ನುವವರು ತಲಾ 1 ಲಕ್ಷ ರೂ, ಎಚ್​.ಜೆ.ರಾಜೇಶ್​ ಎನ್ನುವವರು 2 ಲಕ್ಷ ರೂ.ಗಳನ್ನು ಕೊಟ್ಟು ಮೋಸ ಹೋಗಿದ್ದಾರೆ.
    ಸಚಿನ್​ ಅಕಾರಾಂ ಸರ್​ಗರ್​, ವಿನಾಯಕ ರಾಜ್​, ಸಾಯಿರಾಜ್​, ಜಯಂತ್​, ಯಶೋದಮ್ಮ, ಉಮಾಶಂಕರ್​, ಪ್ರಶಾಂತ್​ ಎನ್ನುವವರು ತಲೆಮರೆಸಿಕೊಂಡಿದ್ದಾರೆ.
    ಅವರ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

    Verbattle
    Verbattle
    Verbattle
    Share. Facebook Twitter Pinterest LinkedIn Tumblr Email WhatsApp
    Previous Articleಶುಶೃತಿ ಸಹಕಾರ ಬ್ಯಾಂಕ್ ವಂಚನೆ
    Next Article ಗುಂಡಿನ ಗಮ್ಮತ್ತಿನಲ್ಲಿ ಇನ್ಸ್ಪೆಕ್ಟರ್ ದಂಪತಿ ಮಾಡಿದ್ದೇನು ಗೊತ್ತಾ
    vartha chakra
    • Website

    Related Posts

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಹಿರಿಯ ಪತ್ರಕರ್ತ ಪಿ. ರಾಮಯ್ಯ ನಿಧನ: ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ

    February 11, 2026

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    February 10, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    ಡೆಡ್ಲಿ ಡೀಲ್: ಅಮೆರಿಕಾದ ಮುಂದೆ ಮಂಡಿ ಊರಲಿದೆಯೇ ಭಾರತ..?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • https://hautefragrancecompany.ru/ on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • Uwvlwe on ಸುಮ್ಮನಿರಬೇಕಾ ಅಂದ್ರು ದಿನೇಶ್ ಗುಂಡೂರಾವ್
    • анлим казино on ಕನ್ನಡದಲ್ಲಿ ಮಾತಾಡು ಅಂದಿದ್ದೇ ತಪ್ಪಾಯ್ತಾ?
    Latest Kannada News

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    February 12, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.