ಬೆಂಗಳೂರು – ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ ಎಂದೇ ಖ್ಯಾತಿ ಪಡೆದಿರುವ ನಟಿ ರಮ್ಯಾ (Ramya) ರಾಜಕೀಯದಲ್ಲೂ ಒಂದು ಕೈ ನೋಡಿ ಯಶಸ್ಸಿನ ಸಿಹಿ ಉಂಡಿದ್ದರು. ಒಮ್ಮೆ ಕಾಂಗ್ರೆಸ್ಸಿನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಮೋಹಕ ದಾರಿ ರಮ್ಯಾ ಆನಂತರ ಅಖಿಲ ಭಾರತ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ದೇಶದ ಗಮನ ಸೆಳೆದಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ರಾಜಕೀಯದಲ್ಲಿ ಹೆಚ್ಚಿನ ಸಾಧನೆ ಮಾಡಿದ ರಮ್ಯಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರು ಅಖಿಲ ಭಾರತ ಕಾಂಗ್ರೆಸ್ ನ ಸಾಮಾಜಿ ಜಾಲತಾಣ ಮುಖ್ಯಸ್ಥರಾಗಿ ಹಲವು ವಿವಾದಗಳಲ್ಲೂ ಸಿಲುಕಿದ್ದರು. ನುರಿತ ರಾಜಕಾರಣಿಯಂತೆ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದರು.
ಹೀಗಿದ್ದ ಅವರು ಏಕಾಏಕಿ ಹುದ್ದೆಯಿಂದ ಬಿಡುಗಡೆ ಪಡೆದಿದ್ದು ಅಲ್ಲದೆ ಸಕ್ರಿಯ ರಾಜಕಾರಣದಿಂದಲೇ ದೂರವಾಗಿದ್ದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. ಕೆಲ ದಿನಗಳ ವಿರಾಮದ ನಂತರ ಮತ್ತೆ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿದ್ದರು.
ಸಿನಿಮಾ ಕ್ಷೇತ್ರದಲ್ಲಿ ಕೇವಲ ನಟನೆ ಮಾತ್ರವಲ್ಲ ನಿರ್ಮಾಣದಲ್ಲೂ ಕೈಹಾಕಿ ಯಶಸ್ಸು ಕಾಣುತ್ತಿರುವ ರಮ್ಯಾ ಅವರು ದಿಢೀರ್ ಎಂದು ಮತ್ತೆ ಸಕ್ರಿಯ ರಾಜಕಾರಣದ ಅಖಾಡಕ್ಕೆ ಧುಮುಕಿದ್ದಾರೆ.
ಮುಂಬರುವ ಲೋಕಸಭಾ Electionಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಲ್ಪ ಕಾಲಾವಧಿಗೆ ಸಂಸದರಾಗಿ ಆಯ್ಕೆಯಾಗಿದ್ದ ರಮ್ಯಾ ಆನಂತರ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಇದಾದ ಬಳಿಕ ಮತ್ತೊಮ್ಮೆ ಚುನಾವಣೆಯ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದ ಅವರಿಗೆ ಕರ್ನಾಟಕದಲ್ಲಿ ಏರ್ಪಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಡ್ಡಿಯಾಗಿತ್ತು.
ಅಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಮೂಲಕ ರಮ್ಯಾ ತೆರೆಮರೆಗೆ ಸರಿದಿದ್ದರು.
ಇದಾದ ಬಳಿಕ ಕೆಲಕಾಲ ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗಿದ್ದ ಅವರು ಆನಂತರ ಅಲ್ಲಿಂದಲೂ ನಿರ್ಗಮಿಸುವ ಮೂಲಕ ಇನ್ನು ಅವರು ರಾಜಕೀಯಕ್ಕೆ ಬರುವುದಿಲ್ಲ ಎಂಬ ವಿಶ್ಲೇಷಣೆಗೆ ಕಾರಣರಾಗಿದ್ದರು ಆದರೆ ಇದೀಗ ಅವರು ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಮತ್ತೊಮ್ಮೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಬೆನ್ನಲ್ಲೇ ರಮ್ಯಾ ಅವರ ಪ್ರವೇಶ ಗಮನ ಸೆಳೆದಿದೆ. ದಿಡೀರ್ ಸಕ್ರಿಯವಾಗಿರುವ ಅವರು,ಈಗಾಗಲೇ ಕ್ಷೇತ್ರದ ಹಲವು ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ಶಾಸಕರಾದ ನರೇಂದ್ರಸ್ವಾಮಿ ರವಿಕುಮಾರ್ ಗಣಿಗ ಉದಯ್ ಗೌಡ ಹಾಗೂ ಸಚಿವ ಚೆಲುವರಾಯಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿ ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಇಪ್ಪತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ನಾಯಕರು ಮಂಡ್ಯದಿಂದಬಸಚಿವ ಚೆಲುವರಾಯ ಸ್ವಾಮಿ ಅವರನ್ನು ಕಣಕ್ಕಿಳಿಸಲು ಚರ್ಚೆ ನಡಲೆಕ್ಕಾಚಾರ
ಇದಲ್ಲದೆ ಅವರ ಪತ್ನಿ ಧನಲಕ್ಷ್ಮಿ ಚೆಲುವರಾಯಸ್ವಾಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಅವರನ್ನು ಕಣಕ್ಕಿಳಿಸುವ ಕುರಿತಂತೆ ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ ರಮ್ಯಾ ಅವರು ರಂಗ ಪ್ತವೇಶ ಮಾಡಿದ್ದು ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿವೆ.