ಉಕ್ರೇನ್: ಉಕ್ರೇನಿಯನ್ ನಾಗರಿಕರನ್ನು ಹೊಡೆದುರುಳಿಸಲು ರಷ್ಯಾದ ಸೈನಿಕರು ಅತ್ಯಂತ ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ರಷ್ಯಾದ ಸೈನಿಕರು ಶ್ವಾನಕ್ಕೆ ಅಮಾನುಷವಾಗಿ ಹೊಡೆದು ಅದಕ್ಕೆ ಬಾಂಬ್ ಕಟ್ಟಿದ್ದಾರೆ. ಶ್ವಾನದ ರಕ್ಷಣೆಗೆ ಬಂದ ಉಕ್ರೇನಿಯನ್ ಜನತೆಯನ್ನು ಕೊಲ್ಲಲು ರಷ್ಯಾದ ಸೈನಿಕರು ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಕೈವ್ನ ವಾಯವ್ಯ ಭಾಗದಲ್ಲಿ ಬರುವ ಮಕರಿವ್ನಲ್ಲಿ ನಿವಾಸಿಗಳು ಶ್ವಾನವನ್ನು ರಕ್ಷಿಸಲು ಉಕ್ರೇನ್ ಬಾಂಬ್ ವಿಲೇವಾರಿ ತಜ್ಞರನ್ನು ಸಂಪರ್ಕಿಸಿದ್ದಾರೆ. ನಾಯಿಯನ್ನು ರಕ್ಷಿಸಲಾಗಿದ್ದು ಇದಕ್ಕೆ ಫಾಕ್ಸ್ ಎಂದು ನಾಮಕರಣ ಮಾಡಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.
ಉಕ್ರೇನಿಯನ್ನರ ಉಸಿರು ನಿಲ್ಲಿಸಲು ನಾಯಿಗೆ ಬಾಂಬ್ ಕಟ್ಟಿದ ರಷ್ಯಾ ಸೈನಿಕರು!
Previous Articleನಟಿಯಂತಾಗಲು 40 ಬಾರಿ ಶಸ್ತ್ರಚಿಕಿತ್ಸೆ, ಈಗ ತಾನಾಗುವ ಬಯಕೆ ಈ ಮಾಡೆಲ್‌ಗೆ!
Next Article ಬೀದಿ ಬದಿ ಪಾನಿಪುರಿ ಉಣಬಡಿಸಿದ ಸಿಎಂ ಮಮತಾ!