ನಟಿ, ನಿರೂಪಕಿ “ಶೀತಲ್ ಶೆಟ್ಟಿ” ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ “ವಿಂಡೋಸೀಟ್” ಈವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಮತ್ತೇ ತನ್ನೂರಿಗೆ ಹೊರಟ ನಾಯಕ ಸಿಕ್ಕಾಪಟ್ಟೆ ಮೂಡಿ ಸ್ವಭಾವದವನು. ಅವನಿಗೆ ಬೇಕಾದವರೊಬ್ಬರ ಕೊಲೆಯಾದಾಗ ಆ ಕೊಲೆಗಾರರನ್ನು ನಾಯಕ ಹಿಡಿದನೆ? ಹೇಗೆ ಕೊಲೆ ರಹಸ್ಯ ಪತ್ತೆಯಾಯ್ತು ತಿಳಿಯೋಕೆ ಸಿನಿಮಾ ವೀಕ್ಷಿಸಬೇಕು.
ಈ ಚಿತ್ರವನ್ನು ಶಾಲಿನಿ ಆರ್ಟ್ಸ್ ಮೂಲಕ ಶಾಲಿನಿ ಮಂಜುನಾಥ್ ಅವರು ನಿರ್ಮಿಸಿದ್ದಾರೆ.
ಚಿತ್ರದ ನಾಯಕನಾಗಿ “ನಿರೂಪ್ ಭಂಡಾರಿ” ಜೊತೆಗೆ “ಸಂಜನಾ ಆನಂದ್ ಹಾಗು”ಅಮೃತಾ ಅಯ್ಯಂಗಾರ್” ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ.
ನಾಯಕ, ನಾಯಕಿ ನಟಿ ಅಭಿನಯ ಜೊತೆಗೆ ಪೋಲೀಸ್ ಪಾತ್ರದ ಶೀಲಾ, ಸೈಕಿಯಾಟ್ರಿಸ್ಟ್ ಆಗಿರೋ ರವಿಶಂಕರ್ ಪಾತ್ರಗಳು ಗಮನ ಸೆಳೆಯುತ್ತದೆ.
ಅರ್ಜುನ್ ಜನ್ಯಾ ಸಂಗೀತ ವಿಜಯ್ ಪ್ರಕಾಶ್ ಹಾಡು ಚಿತ್ರದ ಪ್ಲಸ್ ಪಾಯಿಂಟ್. ಶೀತಲ್ ಶೆಟ್ಟಿ, ನಿರ್ದೇಶನದ ಅತೀ ದೊಡ್ಡ ಜವಾಬ್ದಾರಿಯನ್ನ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಸಿನಿಮಾಟೋಗ್ರಫಿ ಯಲ್ಲಿ ಮಲೆನಾಡಿನ ಸೌಂದರ್ಯ ಬಹಳ ಚೆನ್ನಾಗಿ ಚಿತ್ರಿತವಾಗಿದೆ.
ವಿಂಡೋ ಸೀಟ್ ಸಿನಿಮಾ ಪ್ರೇಕ್ಷಕರನ್ನು ಸೀಟಿನ ತುದಿಗೆ ಬಂದು ಕೂರುವಂತೆ ಮಾಡತ್ತೆ ನೀವೂ ಒಮ್ಮೆ ವಿಂಡೋ ಸೀಟಲ್ಲಿ ಕೂತು ನೋಡಿ.