Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಶಾಲಾ ಮಕ್ಕಳನ್ನು ಒಕ್ಕಲೆಬ್ಬಿಸಿ ಈಜುಕೊಳ ನಿರ್ಮಿಸಲು ಮುಂದಾದ ಬಾಲಭವನ!
    ಸುದ್ದಿ

    ಶಾಲಾ ಮಕ್ಕಳನ್ನು ಒಕ್ಕಲೆಬ್ಬಿಸಿ ಈಜುಕೊಳ ನಿರ್ಮಿಸಲು ಮುಂದಾದ ಬಾಲಭವನ!

    vartha chakraBy vartha chakraJune 28, 2022Updated:June 28, 2022No Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ತುಮಕೂರು: ನಗರದ ಹೃದಯ ಭಾಗ ಎಂ.ಜಿ.ರಸ್ತೆಗೆ ಹೊಂದಿಕೊಂಡಂತೆ ಬಾಲಭವನದ ಆವರಣದಲ್ಲಿ ಇರುವ ಕೃಷ್ಣರಾಜೇಂದ್ರ ಬಾಲಕಿಯರ ಮಾಧ್ಯಮಿಕ ಶಾಲೆ (ಕೆಆರ್‌ಜಿಎಂಎಸ್) ಪ್ರಸ್ತುತ ಎಂಪ್ರೆಸ್ ಕೆಪಿಎಸ್ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಬಾಲಭವನ ಸಮಿತಿಯವರು ಒತ್ತಡ ಹಾಕುತ್ತಿದ್ದು, ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕಿದ್ದಾರೆ.

    ಶಾಲಾ ಮಕ್ಕಳನ್ನು ಒಕ್ಕಲೆಬ್ಬಿಸಿ ಅದೇ ಸ್ಥಳದಲ್ಲಿ ಈಜುಕೊಳ ನಿರ್ಮಿಸಲು ಬಾಲಭವನ ಸಮಿತಿ ಮುಂದಾಗಿದ್ದು, ಮಕ್ಕಳ ಮುಂದಿನ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪಿದೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಮ್ಮದಲ್ಲದ ಜಾಗವನ್ನು ಬಾಲಭವನದ ಕಾರ್ಯದರ್ಶಿ ಹೆಸರಿಗೆ ಖಾತೆ ಮಾಡಿಸಿಕೊಂಡು ಮಕ್ಕಳನ್ನು ಅಲ್ಲಿಂದ ಖಾಲಿ ಮಾಡಿಸಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕಟ್ಟಡ ಕಟ್ಟುವುದು ಮುಖ್ಯವೇ? ನೂರಾರು ಮಕ್ಕಳಿಗೆ ಅಕ್ಷರ ಕಲಿಸುವುದು ಮುಖ್ಯವೇ? ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

    ಹಿನ್ನೆಲೆ: ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ 4.20 ಎಕರೆ ಜಾಗವನ್ನು ನೀಡಿ 1946ರಲ್ಲಿ ಶಾಲೆಯನ್ನು ಆರಂಭಿಸಿದ್ದಾರೆ. ಈ ಜಾಗ ಅಂದಿನಿಂದ 2001ರ ವರೆಗೂ ಶಾಲೆಯ ಹೆಸರಿನಲ್ಲೇ ಖಾತೆ ಇರುತ್ತದೆ. 2001–2002ರಲ್ಲಿ ಶಾಲೆ ಹೆಸರನ್ನು ತೆಗೆದು ಬಾಲಭವನದ ಕಾರ್ಯದರ್ಶಿ ಹೆಸರಿಗೆ ಅಂದಿನ ನಗರಸಭೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ. ಯಾವ ದಾಖಲೆ ಆಧಾರದ ಮೇಲೆ ಶಾಲೆಯ ಹೆಸರಿನಲ್ಲಿದ್ದ ಖಾತೆಯನ್ನು ಬಾಲಭವನದ ಹೆಸರಿಗೆ ವರ್ಗಾಯಿಸಲಾಗಿದೆ ಎಂಬುದಕ್ಕೆ ಮಹಾನಗರ ಪಾಲಿಕೆಯಲ್ಲಿ ಯಾವುದೇ ದಾಖಲೆಗಳು ಲಭ್ಯವಾಗುವುದಿಲ್ಲ.

    ಏತನ್ಮಧ್ಯೆ ಬಾಲಭವನದ ಆವರಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುತ್ತಿದ್ದು, ಈ ಜಾಗವನ್ನು ನಮಗೆ ಕೊಡಬೇಕು ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಜಾಗವನ್ನು ಶಾಲೆಗೆ ಉಳಿಸುವಂತೆ 2004ರಲ್ಲಿ ಆದೇಶಿಸಿದೆ. ಆದರೆ ಶಾಲೆ ಹೆಸರಿಗೆ ಖಾತೆ ವರ್ಗಾವಣೆ ಮಾಡಿಲ್ಲ. ಅದರ ಬದಲಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡ ನಿರ್ಮಿಸುತ್ತದೆ. ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿಸಿಕೊಂಡು ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸಿ, ಈಗ ನಮ್ಮನ್ನೇ ಇಲ್ಲಿಂದ ಖಾಲಿ ಮಾಡಿಸಲು ಇಲಾಖೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಶಾಲೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ ಎಂಬುದು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಆರೋಪವಾಗಿದೆ.

    2020 ಡಿಸೆಂಬರ್ 23ರಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಮಿಸಿರುವ ಕಟ್ಟಡದ ಜಾಗವನ್ನು ಹೊರತುಪಡಿಸಿ, ಉಳಿದಿರುವ ಜಾಗವನ್ನು ಶಾಲೆ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಈವರೆಗೂ ಇದು ಜಾರಿಗೆ ಬಂದಿಲ್ಲ. ಸಭೆ ನಂತರ ಶಾಸಕರೂ ಸಹ ಗಮನ ಹರಿಸಿಲ್ಲ.

    ಆದರೆ ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಾಗ ಖಾಲಿ ಮಾಡುವಂತೆ ಒತ್ತಡ ಹಾಕುತ್ತಲೇ ಇದ್ದಾರೆ. ಅಕ್ಷರ ಕಲಿಯುತ್ತಿರುವ ಬಡ ಮಕ್ಕಳು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲವಾಗಿದೆ.

    ಬಡ ಮಕ್ಕಳಿಗೆ ಆಸರೆ

    ಈ ಶಾಲೆಯಲ್ಲಿ ಬಡ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದು, ಪ್ರಸ್ತುತ 200ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಈ ಬಾರಿ ಪ್ರವೇಶ ನೀಡಲು ಸಾಧ್ಯವಾಗದೆ ನೂರಾರು ಮಕ್ಕಳನ್ನು ವಾಪಸ್ ಕಳುಹಿಸಲಾಗಿದೆ. ಕೊಠಡಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಇರುವ ಎರಡು ಕೊಠಡಿಯಲ್ಲೇ ಎಲ್ಲಾ ಮಕ್ಕಳಿಗೂ ಪಾಠ ಮಾಡಬೇಕಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸಕ್ಕೆ ಬಾರದ ಹಲವು ಕಾಮಗಾರಿ ಮಾಡಲಾಗಿದೆ. ಇದೇ ಯೋಜನೆಯಲ್ಲಿ ಶಾಲಾ ಕೊಠಡಿ ನಿರ್ಮಿಸಿ ಕೊಟ್ಟಿದ್ದರೆ ಇನ್ನೂ ನೂರಾರು ಮಕ್ಕಳ ಶಿಕ್ಷಣಕ್ಕೆ ಆಶ್ರಯ ಕಲ್ಪಿಸಬಹುದಿತ್ತು. ಇಚ್ಛಾಶಕ್ತಿ, ದೂರಾಲೋಚನೆಯ ಕೊರತೆಯಿಂದಾಗಿ ಮರದ ಕೆಳಗೆ ಮಕ್ಕಳು ಪಾಠ ಕೇಳುವಂತಾಗಿದೆ. ಪ್ರವೇಶ ಸಿಗದ ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

    ಖಾತೆ ಮಾಡಿಕೊಡಲಿ

    ಶಾಲೆ ಹೆಸರಿನಲ್ಲಿದ್ದ ಖಾತೆಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದು, 4.20 ಎಕರೆ ಪ್ರದೇಶವನ್ನು ಪೂರ್ಣವಾಗಿ ಶಾಲೆ ಹೆಸರಿಗೆ ಖಾತೆ ಮಾಡಿಕೊಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಸಂಪೂರ್ಣವಾಗಿ ಸ್ಥಳ ಬಿಟ್ಟುಕೊಡಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಖಾತೆ ಮಾಡಿಸಬೇಕು ಎಂದು ಎಸ್‌ಡಿಎಂಸಿ ಸದಸ್ಯ ಆರ್.ನವೀನ್ ಕುಮಾರ್ ಒತ್ತಾಯಿಸಿದರು.

    ಆಗಿರುವ ಲೋಪವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟಕ್ಕೂ ಸಿದ್ಧ. ಅದಕ್ಕೆ ಅವಕಾಶ ಮಾಡಿಕೊಡದೆ ಎಲ್ಲವನ್ನೂ ಸರಿಪಡಿಸಬೇಕು ಎಂದು ಆಗ್ರಹಿಸಿದರು.

    ದಾಖಲೆ ಇಲ್ಲದೆ ಖಾತೆ

    ಯಾವುದೇ ದಾಖಲೆ ಇಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಾಲೆಯ ಜಾಗವನ್ನು ಮಹಾನಗರ ಪಾಲಿಕೆಯವರು ಖಾತೆ ಮಾಡಿಕೊಟ್ಟಿದ್ದಾರೆ. ಮತ್ತೆ ಶಾಲೆ ಹೆಸರಿಗೆ ವಾಪಸ್ ನೀಡುವಂತೆ ಪಾಲಿಕೆಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಜಾಗವನ್ನು ಅಳತೆ ಮಾಡಿಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಅದರಂತೆ ಅಳತೆ ಮಾಡಿಸಿ ವರದಿ ಸಲ್ಲಿಸಲಾಗುವುದು. ಶಾಲೆ ಹೆಸರಿಗೆ ಖಾತೆ ಮಾಡಿಸಲು ಪ್ರಯತ್ನ ಮುಂದುವರಿಸಲಾಗಿದೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು.

    Government ಕಲೆ
    Share. Facebook Twitter Pinterest LinkedIn Tumblr Email WhatsApp
    Previous ArticleDCP ವಿರುದ್ಧ ತಿರುಗಿಬಿದ್ದ PC
    Next Article ಅನುಶ್ರೀಗೆ ಜಾಕೆಟ್ ಗಿಫ್ಟ್ ಮಾಡಿದ ಶಿವಣ್ಣ !
    vartha chakra
    • Website

    Related Posts

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    September 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    September 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    September 1, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಬಿಜೆಪಿ ಚಾಮುಂಡಿ ಯಾತ್ರೆ !

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • BryanSax on ಕಾಫಿ ಡೇ ಸಿದ್ದಾರ್ಥ ಸಾವಿನ ರಹಸ್ಯ ಬಯಲು.?
    • kashpo napolnoe _immn on ದೇವಸ್ಥಾನಗಳ ತಸ್ತೀಕ್ ಹಣ ಬಿಡುಗಡೆ | Temples
    • kashpo napolnoe _unmn on ಕುಮಾರಸ್ವಾಮಿ ಗೆ ಐಸಿಯು ನಲ್ಲಿ ಚಿಕಿತ್ಸೆ | HD Kumaraswamy
    Latest Kannada News

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    September 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    September 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    September 1, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    PORN ವೆಬ್ ಸೈಟ್ ನಲ್ಲಿ ಇಟಲಿ ಪ್ರಧಾನಿ ಅಸಭ್ಯ ಫೋಟೋ
    Subscribe