ವಿಜಯಪುರ:ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ನಿತ್ರಾಣವಾಗಿದ್ದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.ಶ್ರೀಗಳ ಇಚ್ಚೆಯಂತೆ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ.
ಜ್ಞಾನಯೋಗಾಶ್ರಮದ ಅವರಣದಲ್ಲಿ ನಾಳೆ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಪ್ರಕಟಿಸಿದರು.
ಶ್ರೀಗಳು ಕಳೆದ 2014 ರಲ್ಲಿ ಉಯಿಲು ಪತ್ರ ಬರೆದಿದ್ದು,ಅದರಲ್ಲಿ ತಮ್ಮ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಬೇಕು,ಯಾವುದೇ ಆರಾಧನೆ ,ಶ್ರಾದ್ಧ, ಸ್ಮಾರಕ ನಿರ್ಮಾಣ ಮಾಡದಂತೆ ತಿಳಿಸಿದ್ದಾರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ರಮದಲ್ಲಿದ್ದ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಶ್ರೀ ಗಳು ತಿಳಿಸಿದರು.
ಕೆಲವು ದಿನಗಳಿಂದ ಶ್ರೀ ಗಳು ಅನಾರೋಗ್ಯ ಪೀಡಿತರಾಗಿದ್ದು,ಅವರು ಯಾವುದೇ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು.ಇದರಿಂದಾಗಿ ಅವರ
ಆರೋಗ್ಯ ಕ್ಷಣ, ಕ್ಷಣಕ್ಕೂ ಕ್ಷೀಣಿಸತೊಡಗಿತ್ತು.
ಶ್ರೀ ಗಳ ಚೇತರಿಕೆಗೆ ಪ್ರಾರ್ಥನೆ ಮುಂದುವರಿದಿದ್ದವು. ಆದರೆ ಈ ಪ್ರಾರ್ಥನೆ ಫಲಕಾರಿಯಾಗದೆ ಶ್ರೀ ಗಳು ಇಹಲೋಕದ ಯಾತ್ರೆ ಮುಗಿಸಿದರು. ಜ್ಞಾನಯೋಗಾಶ್ರಮಕ್ಕೆ ವಿವಿಧ ಮಠಾಧೀಶರು ಭೇಟಿ ನೀಡಿದರೆ ವಿಜಯಪುರ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಜ್ಞಾನಯೋಗಾಶ್ರಮದಲ್ಲೇ ಬೀಡು ಬಿಟ್ಟಿದ್ದಾರೆ.
ಸೋಮವಾರ ಬೆಳಿಗ್ಗೆ ಗಂಜಿ ಸೇವಿಸಿದ್ದ ಶ್ರೀಗಳು ಬಳಿಕ ಏನನ್ನೂ ಸೇವಿಸಿಲ್ಲ. ಅವರ ನಾಡಿಮಿಡಿತ, ರಕ್ತದೊತ್ತಡ ನಿಧಾನವಾಗಿ ಕಡಿಮೆಯಾಗತೊಡಗಿತ್ತು ಅವರಿಗೆ ಆಕ್ಸಿಜನ್‌ನಲ್ಲಿ ಸೌಲಭ್ಯ ಕಲ್ಪಿಸಲಾಯಿತು. ಆದರೆ ಇದು ಫಲಕಾರಿಯಾಗಲಿಲ್ಲ. ರಾತ್ರಿ ಹತ್ತು ಗಂಟೆ ಸುಮಾರಿಗೆ ಅವರು ಇಹಲೋಕ ಯಾತ್ರೆ ಮುಗಿಸಿದರು.
ವಿಷಯ ತಿಳಿಯ ಹತ್ತಿರದ ದಂತ
ಶ್ರೀಗಳ ಪಾರ್ಥಿವ ಶರೀರದ ದರ್ಶನಕ್ಕಾಗಿ ಆಶ್ರಮಕ್ಕೆ ಭಕ್ತರ ಸಾಗರವೇ ಹರಿದುಬಂದಿದೆ.
ಆಶ್ರಮ ಸೇರಿದಂತೆ ಸುತ್ತಮುತ್ತ ಭಕ್ತರ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
Previous Articleಅರವಿಂದ ಲಿಂಬಾವಳಿ ವಿರುದ್ಧ FIR
Next Article ಪ್ರಿಯಾಂಕ್ ಖರ್ಗೆ ಕಟ್ಟಿಹಾಕಲು ರಣತಂತ್ರ