ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ Electionಯ ಕಾವು ತೀವ್ರವಾಗಿ ಏರುತ್ತಾ ಸಾಗಿದೆ. ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಪರ, ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಸ್ವತಃ ಅಭ್ಯರ್ಥಿಗಳೇ ಪಾದಯಾತ್ರೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದಾರೆ.
ಹಲವಡೆ ರೋಡ್ ಶೋ, ಬಹಿರಂಗ ಸಭೆ, ಕಾರ್ಯಕರ್ತರೊಂದಿಗೆ ಸಮಾಲೋಚನೆ ಸೇರಿದಂತೆ ಹಲವು ರೀತಿಯಲ್ಲಿ ಮತದಾರರನ್ನು ತಲುಪಲು ಪ್ರಯತ್ನ ನಡೆಸಿದ್ದಾರೆ.
ಈ ನಡುವೆ ಕೆಲವು ಮಾಧ್ಯಮಗಳಲ್ಲಿ, ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಅಭ್ಯರ್ಥಿಗಳು ಇದು ಸಾರ್ವತ್ರಿಕ ಚುನಾವಣೆ ಎಂದು ಘೋಷಿಸುತ್ತಿದ್ದಾರೆ. ಆದರೆ ಇದು ಸಾರ್ವತ್ರಿಕ ಚುನಾವಣೆ ಅಲ್ಲ .ಇದು ಒಂದು ರಾಜ್ಯದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಮಾತ್ರ. ಕೆಲವು ದೃಶ್ಯ ಮಾಧ್ಯಮಗಳ ನಿರೂಪಕರು, ಆಂಕರ್ ಗಳು ಇದನ್ನು ಸಾರ್ವತ್ರಿಕ ಚುನಾವಣೆ ಎಂದು ಹೇಳುತ್ತಿದ್ದಾರೆ. ಇದನ್ನೇ ,ಹಿಂಬಾಲಿಸುತ್ತಿರುವ ಕೆಲವು ರಾಜಕಾರಣಿಗಳು ಕೂಡ ತಾವು ಸಾರ್ವರ್ತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ ಎಂದು ಹೇಳುತ್ತಿದ್ದಾರೆ.
ಹಾಗಾದರೆ,ಸಾರ್ವತ್ರಿಕ ಚುನಾವಣೆ ಎಂದರೇನು ಎಂಬುದನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಸರ್ವ ಕಡೆಯಲ್ಲೂ ನಡೆಯುವ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆ ಎಂದು ಕರೆಯುತ್ತಾರೆ .ಇದು ರೂಢಿಗತವಾಗಿ ಬಂದಿರುವ ಮಾತು. ಇದರ ಅರ್ಥವೆಂದರೆ ಲೋಕಸಭಾ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆ ಎಂದು ಕರೆಯುತ್ತಾರೆ ಒಂದು ವೇಳೆ ಲೋಕಸಭೆ ಜೊತೆಗೆ ರಾಜ್ಯ ವಿಧಾನಸಭೆಗೂ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದರೆ ಅದನ್ನೂ ಸಾರ್ವತ್ರಿಕ ಚುನಾವಣೆ ಎಂದು ಕರೆಯುತ್ತಾರೆ. ಇದನ್ನು ಹೊರತುಪಡಿಸಿ ಒಂದು ರಾಜ್ಯದಲ್ಲಿ ನಡೆಯುವ ಚುನಾವಣೆ ಕೇವಲ ಆ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು ಅದನ್ನು ವಿಧಾನಸಭೆ ಚುನಾವಣೆ ಎಂದು ಕರೆಯಬೇಕು. ಇಂತಹ ಸರಳ ವ್ಯಾಖ್ಯಾನವೂ ಗೊತ್ತಿಲ್ಲದ ಕೆಲವು ನಿರೂಪಕರು ಮತ್ತು ಆಂಕರ್ ಗಳು ಟಿವಿಗಳಲ್ಲಿ ಕುಳಿತು ಸಾರ್ವತ್ರಿಕ ಚುನಾವಣೆ ಎಂದು ಹೇಳಿದರೆ, ಕೆಲವು ಸರಿಯಾದ ತಿಳುವಳಿಕೆ ಇಲ್ಲದ ದೊಡ್ಡ ದೊಡ್ಡ ನಾಯಕರು ಹಾಗೆ ಅನೇಕ ಅಭ್ಯರ್ಥಿಗಳು ಇದನ್ನು ಸಾರ್ವತ್ರಿಕ ಚುನಾವಣೆ ಎಂದೇ ಹೇಳುತ್ತಿರುವುದು ಹಾಸ್ಯಾಸ್ಪದವಲ್ಲದೆ ಇನ್ನೇನು ಅಲ್ಲವೆ?
6 Comments
вывод из запоя ростов и область http://vyvod-iz-zapoya-rostov11.ru/ .
вывод из запоя воронеж (вывод из запоя в воронеже) http://vyvod-iz-zapoya-v-stacionare-voronezh11.ru/ .
наркология вывод из запоя в стационаре http://www.vyvod-iz-zapoya-sochi11.ru/ .
снятие ломок https://snyatie-lomki-narkolog.ru .
снятие ломки на дому снятие ломки на дому .
проститутки проверенные москва проститутки проверенные москва .