Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಖೆಡ್ಡಾಗೆ ಬಿದ್ದು ಒದ್ದಾಡಿದ್ದ ಬಂಡೇಮಠದ ಬಸವಲಿಂಗ ಶ್ರೀ
    ಅಪರಾಧ

    ಖೆಡ್ಡಾಗೆ ಬಿದ್ದು ಒದ್ದಾಡಿದ್ದ ಬಂಡೇಮಠದ ಬಸವಲಿಂಗ ಶ್ರೀ

    vartha chakraBy vartha chakraOctober 27, 2022Updated:October 27, 20223 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಅ.26-ನೆಲಮಂಗಲ ತಾಲ್ಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕುದೂರು ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಆರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
    ಇವರಿಬ್ಬರೂ ಸ್ವಾಮೀಜಿಗೆ ಹೆಚ್ಚು ಆಪ್ತರಾಗಿದ್ದು ಅವರ ಮೊಬೈಲ್ ಗಳನ್ನು ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಳ್ಳ ತೊಡಗಿದ್ದಾರೆ.
    ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಡಿಯೊ ಕಾಲ್ ಮಾಡಿದ ಯುವತಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
    ಈ ನಡುವೆ ಸ್ವಾಮೀಜಿ ಸಾವಿನ ಪ್ರಕರಣವು ಮುಖ್ಯಮಂತ್ರಿ ಕಚೇರಿ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ವೀರಶೈವ ‌ಸಮಾಜದ ಮುಖಂಡ ಪರಶಿವಯ್ಯ ನೇತೃತ್ವದ ತಂಡವೊಂದು ‌ಭೇಟಿ ಮಾಡಲು ಸಿದ್ಧತೆ ನಡೆಸಿದೆ. ಸ್ವಾಮೀಜಿ ‌ಆತ್ಮಹತ್ಯೆಗೆ ಸಂಬಂಧಿಸಿದ ಹಲವು ಬೆಳವಣಿಗೆಗಳ ಬಗ್ಗೆ ಈ ತಂಡವು ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ವಿವರಿಸಲಿದ್ದಾರೆ.
    ಸಿಡಿಗೆ ಹೆದರಿ ಆತ್ಮಹತ್ಯೆ:
    ಕಂಚುಗಲ್ ಬಂಡೇಮಠದ ಬಸವಲಿಂಗಶ್ರೀ ‌ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಸ್ವಾಮೀಜಿ ಬರೆದಿಟ್ಟಿರುವ ಡೆತ್ ಡೆತ್​ನೋಟ್​ನ ಐದು ಪುಟಗಳು ನಾಪತ್ತೆಯಾಗಿವೆ. ಪ್ರಕರಣ ಸಂಬಂಧ ರಾಮನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು‌ ಮಾತನಾಡಿ ಆತ್ಮಹತ್ಯೆ ಸ್ಥಳದಲ್ಲಿ 3 ಪುಟಗಳ ಡೆತ್​ನೋಟ್​​ ಪತ್ತೆಯಾಗಿದೆ. ಡೆತ್​ನೋಟ್​ನಲ್ಲಿ ಕೆಲವು ವ್ಯಕ್ತಿಗಳ ಹೆಸರು ಉಲ್ಲೇಖ ಆಗಿದೆ. ತನಿಖೆಯ ದೃಷ್ಟಿಯಿಂದ ಅವರ ಹೆಸರನ್ನು ಬಹಿರಂಗಪಡಿಸಲ್ಲ. ಶ್ರೀಗಳು ಬಳಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆಯಲಾಗಿದ್ದು ಅವರೆಡೂ ಲಾಕ್ ಆಗಿದ್ದು ಅವುಗಳ ಕಾಲ್ ವಿವರ ಪಡೆಯಲಾಗುತ್ತಿದೆ.
    ಎಫ್ಎಸ್ಎಲ್ ಗೆ ಮೊಬೈಲ್:
    ನಮಗೆ ಸಿಕ್ಕ ಡೆತ್​ನೋಟ್, ವೈರಲ್​ ಆದ ಫೋಟೋಗೂ ವ್ಯತ್ಯಾಸವಿದೆ. ಡೆತ್​ನೋಟ್​ ಸಿಕ್ಕಿ ನಮ್ಮ ಗಮನಕ್ಕೆ ತರದಿದ್ದರೆ ಕೇಸ್​ ಹಾಕ್ತೇವೆ. ಡೆತ್​ನೋಟ್​, ಮೊಬೈಲ್ ಫೋನ್​ ಎಫ್ ಎಸ್ ಎಲ್ ಗೆ ಕಳುಹಿಸಲಾಗುವುದು. ಮಠದ ಮೇಲೆ ಯಾರೂ ಸಂಶಯ ವ್ಯಕ್ತಪಡಿಸುತ್ತಿಲ್ಲ’ ಹೇಳಿದ್ದಾರೆ.
    ಶ್ರೀಗಳಿಗೆ ಇದ್ದ ಬೆದರಿಕೆ ಕರೆಗಳ ಬಗ್ಗೆ ಜನರು ಮಾತಾಡುತ್ತಿರುವುದು ಗಮನಕ್ಕೆ ಬಂದಿದ್ದು ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಸ್ವಾಮೀಜಿ ವಿಡಿಯೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಸಂತೋಷ್ ಬಾಬು ಹೇಳಿದರು.
    ವೀಡಿಯೋ ವೈರಲ್ :
    ಈ‌ ನಡುವೆ ಶ್ರೀಗಳು ಬರೆದಿದ್ದಾರೆ ಎನ್ನಲಾದ ಡೆತ್‍ನೋತ್‍ನ ಒಂದು ಪುಟ ವೈರಲ್ ಆದ ಬೆನ್ನಲ್ಲೆ, ನಿನ್ನೆ ಶ್ರೀಗಳ ವೀಡಿಯೋ ಕಾಲ್ ತುಣುಕೊಂದು ವೈರಲ್ ಆಗಿದ್ದು ಅನುಮಾನ ಹುಟ್ಟುಕೊಂಡಿದೆ.
    ಮಹಿಳೆಯೊಬ್ಬಳ ಜೊತೆ ಸ್ವಾಮೀಜಿ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿರುವ ವೀಡಿಯೋ ದೊರೆತಿದ್ದು, ಇದರ ಹಿಂದಿರುವ ಕಾಣದ ಕೈಗಳ ಹುಡುಕಾಟ ಶುರುವಾಗಿದೆ.
    ಸ್ವಾಮೀಜಿ ಮೊಬೈಲ್‍ಗೆ:
    ಬಸವಲಿಂಗ ಸ್ವಾಮೀಜಿ ಮಹಿಳೆ ಜೊತೆಗೆ ಮಾತನಾಡಿದ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ನಂತರ ವೀಡಿಯೋವನ್ನು ಸ್ವಾಮೀಜಿ ಮೊಬೈಲ್‍ಗೆ ಕಳುಹಿಸಿ ಮಹಿಳೆಯ ಗ್ಯಾಂಗ್ ಬೆದರಿಕೆ ಹಾಕಿತ್ತಾ? ಹತ್ತು ದಿನದ ಹಿಂದೆ ಬಸವಲಿಂಗ ಸ್ವಾಮೀಜಿ ಮೊಬೈಲ್‍ಗೆ ದುಷ್ಕರ್ಮಿಗಳು ವೀಡಿಯೋ ಕಳುಹಿಸಿದ್ದು, ಈ ಬಗ್ಗೆ ಯಾರ ಬಳಿನೂ ಹೇಳಿಕೊಳ್ಳಲಾಗದೇ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ.
    ವೀಡಿಯೋ ಮಾಡಿದ ಮಹಿಳೆ ಮತ್ತಾಕೆಯ ಗ್ಯಾಂಗ್ ಬಸವಲಿಂಗ ಸ್ವಾಮೀಜಿಗೆ ಬರೋಬ್ಬರಿ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿತ್ತಾ? ತಂಡದಲ್ಲಿದ್ದ ಮುಖಂಡನೇ ಸ್ವಾಮೀಜಿ ಬಳಿ ಡೀಲ್ ನೆಪದಲ್ಲಿ ಬಂದಿದ್ದನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
    ಸ್ವಾಮೀಜಿ ವಿಫಲ:
    ಸ್ವಾಮೀಜಿ ಮಠದ ಅಭಿವೃದ್ಧಿ ಜೊತೆಗೆ ಅಂತಹ ದೊಡ್ಡ ಮೊತ್ತದ ಹಣ ಕೂಡ ಇರಲಿಲ್ಲ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಹೊಂದಿಸುವಲ್ಲಿ ಸ್ವಾಮೀಜಿ ವಿಫಲರಾಗಿದರು ಎಂಬ ಮಾಹಿತಿ ತಿಳಿದುಬಂದಿದೆ.
    ನಾಲ್ವರು ಹೆಣೆದ ಖೆಡ್ಡಾಗೆ ಸ್ವಾಮೀಜಿ ಬಿದ್ದ ಸ್ವಾಮೀಜಿ ಬರೆದಿರುವ ಮೂರು ಪುಟಗಳ ಡೆತ್‍ನೋಟ್‍ನಲ್ಲಿ ಎಲ್ಲವೂ ಅಡಗಿದೆಯೇ ಇಲ್ಲವೇ ಎನ್ಬುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

    Verbattle
    Verbattle
    Verbattle
    ಕಾರು ಬೊಮ್ಮಾಯಿ ವೈರಲ್
    Share. Facebook Twitter Pinterest LinkedIn Tumblr Email WhatsApp
    Previous Articleಶಾಸಕರ ಖರೀದಿಗೆ ಬಂದವರು ಅಂದರ್
    Next Article ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
    vartha chakra
    • Website

    Related Posts

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ನುಡಿದಂತೆ ನಡೆದ 1000 ದಿನ: ಕನ್ನಡಿಗರ ‘ಕೈ’ಹಿಡಿದ ಕಾಂಗ್ರೆಸ್ ಸರ್ಕಾರ!

    February 11, 2026

    ಜೋರಾಗಿ ಕೆಮ್ಮೋದು ತಪ್ಪಾ..?

    February 11, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah on CM ಮತ್ತು DCM ಬದಲಾವಣೆ ಚರ್ಚೆಯಲ್ಲಿ ಇವರಿಲ್ಲವಂತೆ.
    • LeonardReawn on Crypto ವಂಚಕ Arrest.
    • Edsdgp on ಕೊನೆಗೂ ಪತ್ತೆಯಾಯಿತು ಕದ್ದ ಚಿನ್ನ
    Latest Kannada News

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.