ಇಸ್ರೇಲ್ ದೇಶದ ಮೇಲೆ ಹಮಾಸ್ ದಾಳಿಮಾಡಿದ ಬಳಿಕ ಹಮಾಸ್ ಮೇಲೆ ಯುದ್ಧ ಸಾರಿದ ಇಸ್ರೇಲ್ ಈಗಾಗಲೇ ಗಾಝ ಪಟ್ಟಿಯನ್ನು ಬಹುತೇಕ ಆಕ್ರಮಿಸಿಕೊಂಡಿದೆ. ಗಾಝ ಪಟ್ಟಿಯಲ್ಲಿಯಲ್ಲಿದ್ದ ಬಹುತೇಕ ಪೆಲೆಸ್ತೀನಿಯರು ಪಲಾಯನಗೈದಿದ್ದರೆ. ಇನ್ನೂ ಕೂಡ ಅನೇಕ ಮಂದಿ ಹಮಾಸ್ ಉಗ್ರವಾದಿಗಳು ಗಾಝದಲ್ಲಿ ಇದ್ದಾರೆ ಎನ್ನುವ ಆರೋಪ ಮಾಡುತ್ತಾ ಪ್ರತಿನಿತ್ಯ ಗಾಝ ಮೇಲೆ ಇಸ್ರೇಲ್ ದಾಳಿ ಮಾಡುತ್ತಿದೆ. ಇಲ್ಲಿಯವರೆಗೆ ಹತ್ತಾರು ಸಾವಿರ ಪೆಲೆಸ್ತೀನಿಯರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಆದರೆ ಇನ್ನೂ ಇಸ್ರೇಲ್ ಗೆ ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಾಗಿಲ್ಲ.
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ ಇಸ್ರೇಲ್ ಅನೇಕ ನಿರಾಯುಧ ಪೆಲೆಸ್ತೀನಿಯರನ್ನು ಗುಂಡಿಟ್ಟು ಸಾಯಿಸಿದೆ. ಕೊಲ್ಲಲ್ಪಟ್ಟವರ ಪೈಕಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರೂ ಸೇರಿದ್ದಾರೆ. ಇಸ್ರೇಲ್ ತನ್ನ ದಾಳಿಯಲ್ಲಿ ಆಸ್ಪತ್ರೆ ಸ್ಮಶಾನ ಉದ್ಯಾನವನ ಯಾವುದನ್ನೂ ಬಿಡದೆ ಸತತವಾಗಿ ದಾಳಿ ಮಾಡಿ ಧ್ವಂಸ ಮಾಡುತ್ತಿದೆ. ಅದಲ್ಲದೆ ಇತ್ತೀಚಿಗೆ ಗಾಝ ಪಟ್ಟಿಯಲ್ಲಿ ಉಳಿದುಕೊಂಡಿರುವ ಪೆಲೆಸ್ಟೀನಿಯರಿಗೆ ಪರಿಹಾರ ಒದಗಿಸುವ ವಿಶ್ವಸಂಸ್ಥೆಯ ಅಂಗ ಸಂಸ್ಥೆಯ ಮೇಲೆ ಆರೋಪ ಮಾಡಿದ ಇಸ್ರೇಲ್ ಆ ಸಂಸ್ಥೆ ಕೂಡ ಸಂಪೂರ್ಣವಾಗಿ ನಿಷ್ಕ್ರಿಯವಾಗುವಂತೆ ನೋಡಿಕೊಂಡಿದೆ. ಇದೆಲ್ಲದರಿಂದ ಗಾಝ ಪಟ್ಟಿ ಸಂಪೂರ್ಣವಾಗಿ ಪೆಲೆಸ್ತೀನಿಯನ್ ರಹಿತವಾಗಿ ಆ ಪ್ರದೇಶ ಇಂಚಿಂಚೂ ಇಸ್ರೇಲ್ಗೆ ಒಳಪಡಬೇಕು ಎನ್ನುವುದು ಇಸ್ರೇಲ್ ದೇಶದ ಹುನ್ನಾರವಾಗಿದೆ ಎಂದು ಆರೋಪಿಸಲಾಗಿದೆ. ಇಸ್ರೇಲ್ ಪ್ರತಿನಿತ್ಯ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಇದರಿಂದ ಈಗ ಗಾಝ ಪಟ್ಟಿಯಲ್ಲಿ ಉಳಿದಿರುವ ಫೆಲೆಸ್ತೀನಿಯನ್ ಜನಕ್ಕೆ ಊಟ ನೀರು ಇಲ್ಲದಾಗಿ ಅವರು ಹುಲ್ಲು ತಿಂದು ಕೊಳಚೆ ನೀರು ಕುಡಿದು ಜೀವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರತಿನಿತ್ಯ ಈ ಕಾರಣದಿಂದಾಗಿ ಹೆಚ್ಚು ಹೆಚ್ಚು ಮಂದಿ ವಿವಿಧ ಕಾಯಿಲೆ ಮತ್ತು ಸಾಂಕ್ರಾಮಿಕಗಳಿಂದಾಗಿ ಸಾಯುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಇನ್ನೂ ಸಹಸ್ರಾರು ಮಂದಿ ಪೆಲೆಸ್ತೀನಿಯನ್ನರು ಮುಂದಿನ ಕೆಲವೇ ದಿನಗಳಲ್ಲಿ ಸಾವನ್ನಪ್ಪಿ ಗಾಝ ಪಟ್ಟಿ ಸಂಪೂರ್ಣವಾಗಿ ಪೆಲೆಸ್ತೀನಿಯರಿಂದ ಮುಕ್ತವಾಗುತ್ತದೆ ಎಂದು ಇಸ್ರೇಲ್ ಆಶಿಸುತ್ತಿದೆ ಎಂದು ಆರೋಪಿಸಲಾಗಿದೆ
4 Comments
This post will assist the internet visitors for setting up new
blog or even a blog from start to end.
What’s Taking place i am new to this, I stumbled upon this I’ve found It
positively helpful and it has helped me out loads.
I’m hoping to contribute & assist different users
like its helped me. Great job.
электрокарнизы электрокарнизы .
снятие ломок https://www.snyatie-lomki-narkolog.ru .