ಬೆಂಗಳೂರು,ಅ.26-
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಇತ್ತೀಚೆಗೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಆಮ್ಲಜನಕ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದೆ.
ಇದಕ್ಕೆ ಹೆಚ್ಚಿನ ಪಾಲು ಸಾರಿಗೆ ಕ್ಷೇತ್ರದ್ದಾಗಿದೆ, ನಗರದಲ್ಲಿ ಓಡಾಡುವ ಟ್ರಕ್‌ಗಳು ಮತ್ತು ವಾಣಿಜ್ಯ ವಾಹನಗಳು ಅತಿ ಹೆಚ್ಚು ವಾಯು ಮಾಲಿನ್ಯಕಾರಕಗಳಾಗಿವೆ ಎಂದು ಅಧ್ಯಯನ ವರದಿ ತಿಳಿಸಿದೆ
ಈ ವಾಹನಗಳಿಂದ ನಗರ ಜಿಲ್ಲೆಯಲ್ಲಿ ಶೇ 39 ರಷ್ಟು ಪಿಎಂ 2.5 ಕಣಗಳ ಹೊರಸೂಸುವಿಕೆ ಆಗುತ್ತಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 48 ರಷ್ಟು ಮಾಲಿನ್ಯವಾಗುತ್ತಿದೆ.
ಕಡಿಮೆ ಮಾಲಿನ್ಯಕಾರಕ ಪರ್ಯಾಯ ಇಂಧನಗಳ ಲಭ್ಯತೆಯ ಹೊರತಾಗಿಯೂ ಮರ ಮತ್ತು ಕಲ್ಲಿದ್ದಲನ್ನು ಸುಡುವ ಮೂಲಕ ಕೈಗಾರಿಕೆಗಳು ಕೂಡ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂಬುದು
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊ. ಗುಫ್ರಾನ್ ಬೀಗ್ ನೇತೃತ್ವದ ತಂಡ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಈ ತಂಡ ಮೊದಲ ಬಾರಿಗೆ, ಅಲ್ಟ್ರಾ ಫೈನ್ ರೆಸಲ್ಯೂಶನ್ನ (200 ಚದರ ಮೀಟರ್ ಗ್ರಿಡ್‌ಗಳು) 80 ಮಾಲಿನ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.ನಂತರ ಈ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮುಖ ಮೂಲಗಳ ಪತ್ತೆ ಮಾಡಲಾಗಿದೆ. ಇದರಿಂದ ಸಾರಿಗೆ ವಲಯವು ಅತಿದೊಡ್ಡ ಮಾಲಿನ್ಯಕಾರಕವಾಗಿದೆ ಎಂಬುದು ಪತ್ತೆಯಾಗಿದೆ.
ಮಾಲಿನ್ಯಕಾರಕ ಅಂಶಗಳ ಬಗ್ಗೆ ಸಿಸಿಟಿವಿ ಕ್ಯಾಮರಾ ದೃಶ್ಯಗಳು, ಡ್ರೋನ್‌ಗಳ ಫೋಟೋ, ವೀಡಿಯೊ ಕ್ಲಿಪ್‌ಗಳನ್ನು ಬಳಸಿಕೊಂಡು ಅವುಗಳನ್ನು ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ಸಾಧನಗಳೊಂದಿಗೆ ವಿಶ್ಲೇಷಿಸಲಾಗಿದೆ. ಫಲಿತಾಂಶಗಳು ಬೆಂಗಳೂರಿನ ಗಾಳಿಯ ಗುಣಮಟ್ಟದ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡಿವೆ ಎಂದು ವರದಿ ಉಲ್ಲೇಖಿಸಿದೆ.
ಕಳಪೆ ನಿರ್ವಹಣೆ ಕಾರಣ:
ಒಟ್ಟು ವಾಯು ಮಾಲಿನ್ಯದ ಅರ್ಧದಷ್ಟು ಸಾರಿಗೆ ವಲಯದ ಪಿಎಂ 2.5 ಹೊರಸೂಸುವಿಕೆಯಿಂದಲೇ ಆಗುತ್ತಿದೆ. ಇದಕ್ಕೆ ವಾಹನಗಳ ಕಳಪೆ ನಿರ್ವಹಣೆ ಅಥವಾ ಅವಧಿ ಮೀರಿದ ವಾಹನಗಳ ಬಳಕೆಯೂ ಕಾರಣದಿಂದಾಗಿರಬಹುದು. ಕಾರುಗಳು ಮತ್ತು ಎಸ್ ಯು ವಿಗಳಿಂದ ಹೆಚ್ಚು ಮಾಲಿನ್ಯ ಸಂಭವಿಸುತ್ತಿದೆ. ಇದರ ಜೊತೆಗೆ ಶೇ 22 ರಷ್ಟು ಪಾಲು ದ್ವಿಚಕ್ರ ವಾಹನಗಳದ್ದಾಗಿದೆ. ಇದಲ್ಲದೆ ಕೈಗಾರಿಕೆಗ
ಬಾಯ್ಲರ್ ಗಳಲ್ಲಿನ ಇಂಧನದ ಆಯ್ಕೆಯಿಂದ ಕೈಗಾರಿಕಾ ಮಾಲಿನ್ಯ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿದೆ.