ಬೆಂಗಳೂರು,
ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ ವಿದೇಶದಿಂದ ಕಳ್ಳ ಸಾಗಾಣೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್‌ಗೆ ಡಿಆರ್‌ಐ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ರಾಸಲೀಲೆ ಪ್ರಕರಣದ ಬೆನ್ನಲ್ಲೇ ರನ್ಯಾರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್‌ಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಸರ್ಕಾರಿ ವಾಹನ ದುರ್ಬಳಕೆ ಮಾಡಿರುವುದಾಗಿ ಚಾರ್ಜ್ ಮೆಮೋ ನೀಡಲಾಗಿತ್ತು. ರಾಮಚಂದ್ರರಾವ್ ಮಗಳು ರನ್ಯಾರಾವ್ ಕಾರನ್ನು ದುರ್ಬಳಕೆ ಮಾಡಿದ್ದರು.
ಇನ್ನೂ ಈಗಾಗಲೇ ರಾಸಲೀಲೆ ಪ್ರಕರಣವನ್ನು ಇಲಾಖಾ ತನಿಖೆಗೆ ಆದೇಶಿಸಿ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ರಾಮಚಂದ್ರರಾವ್ ಅವರಿಗೆ ನೋಟಿಸ್ ಮಾಡಿದ್ದ ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಮ್ಯಾರಥಾನ್ ವಿಚಾರಣೆ ಮಾಡಿದ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ಗೆ ಮತ್ತು ರಾಮಚಂದ್ರರಾವ್‌ಗೆ ಇರೋ ಸಂಬಂಧ, ಚಿನ್ನ ಸಾಗಾಟ ಮಾಡೋ ಸಂದರ್ಭದಲ್ಲಿ ಸಹಾಯ ಮಾಡಲಾಗಿತ್ತಾ? ಪ್ರೋಟೋ ಕಾಲ್ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ, ಜೊತೆಗೆ ಎರಡೇ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದ ವಿಚಾರವನ್ನು ಸವಿವರವಾಗಿ ವಿಚಾರಣೆ ನಡೆಸಿದ್ದರು.

