ಬೆಂಗಳೂರು,ಡಿ.18- ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಒಳ್ಳೆಯವನಂತೆ ನಟಿಸಿ ಕಳ್ಳತನ ಮಾಡಿದ ನೌಕರ ಸೇರಿದಂತೆ ಇಬ್ಬರನ್ನು ಸುದ್ದಗುಂಟೆ ಪಾಳ್ಯ
ಪೊಲೀಸರು ಬಂಧಿಸಿದ್ದಾರೆ.
ನಂದನ್ ಹಾಗೂ ವಿನಯ್ ಬಂಧಿತ ಆರೋಪಿಗಳಾಗಿದ್ದು ಅವರಿಂದ 55 ಲಕ್ಷ ಮೌಲ್ಯದ ವೋಗೊ ಕಂಪನಿಗೆ ಸೇರಿದ 61
ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ
ವಿನಯ್ ಎಂಬಾತ ವೋಗೋ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು,ಬೈಕ್ನ ಜಿಪಿಎಸ್ ಸಿಸ್ಟಂ ಸೇರಿ ಕಂಪನಿ ವ್ಯವಸ್ಥೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಈತ 8 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ನೆಲೆಸಿದ್ದನು.
ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ ತನಗೆ ಅನ್ನ ಕೊಟ್ಟ ಕಂಪನಿಯ ಮೇಲೆ ಕಣ್ಣು ಹಾಕಿ
ವೋಗೋ ಕಂಪನಿಯ ಆಕ್ಟಿವಾಗಳನ್ನು ಕಳ್ಳತನ ಮಾಡಲು ತುಮಕೂರಿನ ಗೆಳೆಯ ನಂದನ್ ಸಂಪರ್ಕಿಸಿದ್ದಾನೆ. ಅದರಂತೆ ಇಬ್ಬರು ಜೊತೆಗೂಡಿ ಸಂಚು ರೂಪಿಸಿ ವೋಗೋ ಕಂಪನಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಬೈಕ್ನಲ್ಲಿದ್ದ ಜಿಪಿಎಸ್ ಸಿಸ್ಟಮ್ ಡಿಸ್ ಕನೆಕ್ಟ್ ಮಾಡುತ್ತಿದ್ದರು.
ಸಿಸಿಟಿವಿ ಇಲ್ಲದಿರುವುದನ್ನ ಗಮನಿಸಿ ಡೈರೆಕ್ಸ್ ಕನೆಕ್ಟ್ ಮಾಡಿ ಆ್ಯಕ್ಟೀವ್ 5 ಜಿ ವಾಹನಗಳನ್ನು ಕಳವು ಮಾಡಿ ಸ್ನೇಹಿತನಿಗೆ ಕೊಟ್ಟು ಮಾರಾಟ ಮಾಡಿಸುತ್ತಿದ್ದನು. ತುಮಕೂರಿನ ಗ್ರಾಮಾಂತರ ಸ್ಥಳಗಳಿಗೆ ಬೈಕ್ಗಳನ್ನ ತೆಗೆದುಕೊಂಡು ಹೋಗಿ ನಂದನ್ ಮಾರಾಟ ಮಾಡುತ್ತಿದ್ದನು.
ವೋಗೋ ಕಂಪನಿ ನಷ್ಟವುಂಟಾಗಿ ಬೈಕ್ಗಳನ್ನ ಮಾರಾಟ ಮಾಡುತ್ತಿದ್ದಾರೆ. ಹರಾಜಿನಲ್ಲಿ ಬೈಕ್ಗಳನ್ನ ಖರೀದಿಸಿ ನಾವು ಮಾರಾಟ ಮಾಡುತ್ತಿದ್ದೇವೆ ಅಂತ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದನು.
ಬಂಧಿತ ಆರೋಪಿಗಳು ದಾಖಲೆಗಳನ್ನು ಕೊಡುತ್ತೇವೆ ಎಂದು ಹೇಳಿ ಹಣ ಪಡೆದು ಯಾಮಾರಿಸಿ ಬೈಕ್ ಬಿಟ್ಟು ನಂದನ್ ಬರುತ್ತಿದ್ದನು. ಬಂದ ಹಣದಲ್ಲಿ ಇಬ್ಬರೂ ಆರೋಪಿಗಳು ಮೋಜುಮಸ್ತಿ ಮಾಡಿಕೊಂಡಿದ್ದರು.
ಪ್ರತಿನಿತ್ಯ ಬೈಕ್ಗಳು ಕಾಣೆಯಾಗುತ್ತಿದ್ದದ್ದನ್ನು ಗಮನಿಸಿದ ಕಂಪನಿ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.
Previous ArticleNew Year ಆಚರಣೆಗೆ Full Tough Rules
Next Article ಸುವರ್ಣಸೌಧದ ಮೆಟ್ಟಿಲ ಮೇಲೆ ಕುಳಿತ ಕಾಂಗ್ರೆಸ್ಸಿಗರು