ಆರೋಗ್ಯಕರ ಮತ್ತು ತಾರುಣ್ಯಭರಿತ ತ್ವಚೆಯನ್ನು ಪಡೆಯುವುದು ನಲ್ಲಿಯನ್ನು ತಿರುಗಿಸಿದಷ್ಟೇ ಸುಲಭ. ದೇಹವು ತನ್ನ ತೂಕದ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ನೀರನ್ನು(water) ಹೊಂದಿರುತ್ತದೆ, ಮತ್ತು ಅದನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯದಿದ್ದರೆ, ಅದರ ಪರಿಣಾಮ ಚರ್ಮದಲ್ಲಿ ಗೋಚರಿಸುತ್ತದೆ. ಸಾಕಷ್ಟು ನೀರಿಲ್ಲದೆ, ಚರ್ಮವು ಶುಷ್ಕವಾಗಿ ಕಾಣುತ್ತದೆ ಮತ್ತು ಅಕಾಲಿಕವಾಗಿ ವಯಸ್ಸಾದಂತೆ(premature aging) ತೋರುತ್ತದೆ.
೧. ನೀವು ಬಹುತೇಕ ನೀರಿನಿಂದಲೇ ಮಾಡಲ್ಪಟ್ಟಿದ್ದೀರಿ
ನಿಮ್ಮ ದೇಹವು ಬಹುಶಃ ಎಲ್ಲಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ವ್ಯಕ್ತಿಯೊಬ್ಬನ ವಯಸ್ಸು ಮತ್ತು ದೇಹದ ಪ್ರಕಾರವನ್ನು ಆಧರಿಸಿ, ಮಾನವನ ದೇಹದಲ್ಲಿ ಸರಾಸರಿ 60 ಪ್ರತಿಶತದಷ್ಟು ನೀರಿರುತ್ತದೆ. ಕೆಲವು ದೇಹದ ಅಂಗಾಂಶಗಳಿಗೆ ಇತರರಿಗಿಂತ ಹೆಚ್ಚು ನೀರು ಬೇಕಾಗುತ್ತದೆ, ಮತ್ತು ವಿಶೇಷವಾಗಿ ಚರ್ಮವೇ ಕಡಿಮೆ ನೀರಿನ ಪ್ರಮಾಣದ ಪರಿಣಾಮಗಳಿಗೆ ಒಳಗಾಗುತ್ತದೆ. ನೀವು ನಿರ್ಜಲೀಕರಣಗೊಂಡಾಗ, ನಿಮ್ಮ ದೇಹವು ತನಗೆ ಅಗತ್ಯವಿರುವ ನೀರನ್ನು ತನ್ನೊಳಗೇ ಕಂಡುಕೊಳ್ಳುತ್ತದೆ. ಪ್ರಮುಖ ಅಂಗಗಳಿಗೆ ಅಗತ್ಯವಾದ ನೀರನ್ನು ಪೂರೈಸಲು ಯೌವನಭರಿತ ತ್ವಚೆಗೆ ಕಾರಣವಾದ ಚರ್ಮದ ತೇವಾಂಶವನ್ನು ಕಸಿದುಕೊಳ್ಳುತ್ತದೆ. ಪರಿಹಾರ: ನಿಮ್ಮ ಪ್ರತಿಯೊಂದು ಭಾಗವನ್ನೂ ಜಲೀಕರಣಗೊಳಿಸಲು ಮತ್ತು ಆರೋಗ್ಯಕರವಾಗಿರಿಸಲು ಸಾಕಷ್ಟು ನೀರು ಕುಡಿಯಿರಿ.
೨. ನೀರು ನಿಮ್ಮ ಹಲ್ಲುಗಳಿಗೆ ಒಳ್ಳೆಯದು
ನೀರು ಕುಡಿಯುವುದರಿಂದ ಹಲ್ಲುಗಳು ಆರೋಗ್ಯಪೂರ್ಣವಾಗುತ್ತವೆ. ಹೆಚ್ಚು ನೀರು ಕುಡಿದಾಗ, ಕಾಫಿ ಮತ್ತು ಕೋಲಾಗಳಂತಹ ನಗುವನ್ನು ಹಾಳುಮಾಡುವ ವಸ್ತುಗಳನ್ನು ಕುಡಿಯುವುದು ಕಡಿಮೆಯಾಗುವುದು. ಬಾಯಿಯ ಶುಷ್ಕತೆಯನ್ನು ತಡೆಯುವುದರ ಮೂಲಕ, ಹಲ್ಲುಗಳ ಮತ್ತು ವಸಡಿನ ಆರೋಗ್ಯವನ್ನೂ ಕಾಪಾಡಬಹುದು. ಸುಂದರವಾದ ನಗುವನ್ನು ಕಾಪಾಡಿಕೊಳ್ಳುವುದು ಆರೋಗ್ಯ ಮತ್ತು ಸೌಂದರ್ಯಕ್ಕೆ ಮುಖ್ಯವಾಗಿದೆ, ಆದ್ದರಿಂದ ಇತರ ಪೇಯಗಳ ಆಯ್ಕೆಗಳಿಗಿಂತ ನೀರನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ಬಾಯಿಗೆ ಸಹಾಯ ಮಾಡಿ.
೩. ನೀರು ಒಂದು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದೆ
ತೇವಾಂಶವನ್ನು ಕಾಪಾಡಿಕೊಳ್ಳುವಲ್ಲಿ ನೀರು ಅತ್ಯಂತ ಸಹಾಯಕಾರಿ. ನಿರ್ಜಲೀಕರಣಗೊಂಡ ಚರ್ಮವು ಒಣಗಿದಂತೆ ಕಾಣಿಸುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ, ಚರ್ಮವು ತನ್ನ ಹೊಳಪನ್ನು ಕಳೆದುಕೊಂಡು, ಒರಟಾಗಿ, ಪ್ರತಿ ಸೂಕ್ಷ್ಮ ರೇಖೆಯನ್ನೂ ತೋರುತ್ತದೆ. ಮಾಯಿಶ್ಚರೈಸರ್ ಗಳು ಈ ಒರಟುತನವನ್ನು ನೀಗಿಸುವಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಸಹಾಯವಾಗಬಲ್ಲವು. ಉತ್ತಮದಲ್ಲಿ ಉತ್ತಮವಾದ ಮಾಯಿಶ್ಚರೈಸರ್ ಕೂಡ ಚರ್ಮದ ಮೇಲಿನ ಪದರವನ್ನಷ್ಟೇ ಭೇದಿಸಬಲ್ಲದು ಮತ್ತು ಅದರ ಕೆಲಸವನ್ನು ಮಾಡಲು ಒಳಚರ್ಮದ ಆಳಕ್ಕೆ ತಲುಪಲು ಸಾಧ್ಯವಿಲ್ಲ. ಚರ್ಮದ ಕೋಶಗಳನ್ನು ಒಳಗಿನಿಂದ ಆರೋಗ್ಯಭರಿತ ಮತ್ತು ತಾರುಣ್ಯದಿಂದ ಇರಿಸಿಕೊಳ್ಳಲು, ಅವುಗಳ ನೀರಿನ ಪೂರೈಕೆಯನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಮರುಪೂರಣ ಮಾಡಬೇಕಾಗುತ್ತದೆ. ನಿಮ್ಮ ಮಾಯಿಶ್ಚರೈಸರ್‌ಗಳಿಗೆ ವಿರಾಮ ನೀಡಿ ಮತ್ತು ಚರ್ಮದ ಆಳವಾದ ಪದರಗಳನ್ನು ಹೈಡ್ರೇಟ್ ಮಾಡಲು ಸಾಕಷ್ಟು ನೀರು ಕುಡಿಯಿರಿ.
೪. ನೀರು ಚರ್ಮದ ಕಾಲಜನ್ ಗೂ ಸಹ ಸಹಕಾರಿಯಾಗಿದೆ.
ಕಾಲಜನ್ ಕೂಡ ನೀರನ್ನು ಹೊಂದಿರುತ್ತದೆ. ಯೌವನಭರಿತ ತ್ವಚೆಗೆ ಬೇಕಾದ ಬೌನ್ಸ್ ಮತ್ತು ಎಲಾಸ್ಟಿಸಿಟಿಯನ್ನು ನೀಡುವ ಅಂಗಾಂಶಗಳ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ಸ್ವ ಚೇತರಿಕೆಗೆ ನೀರಿನ ಅಗತ್ಯ ತುಂಬಾ ಇದೆ. ಗಂಭೀರವಾಗಿ ನಿರ್ಜಲೀಕರಣಗೊಂಡವರ ತ್ವಚೆ ಎಲಾಸ್ಟಿಸಿಟಿಯನ್ನು ಕಳೆದುಕೊಂಡಿರುತ್ತದೆ. ಊಟದ ಜೊತೆಗೆ ಮತ್ತು ಊಟದ ನಡುವೆ ರಿಫ್ರೆಶ್ ಆಗಲು ಇತರ ಪೇಯಗಳ ಆಯ್ಕೆಗಳ ಬದಲು ನೀರನ್ನು ಆರಿಸುವುದರಿಂದ, ಚರ್ಮದಲ್ಲಿರುವ ಕಾಲಜನ್ ತನ್ನ ಉದ್ದೇಶಿತ ಕೆಲಸವನ್ನು ಮಾಡಲು ಸಹಕಾರಿಯಾಗುತ್ತದೆ.