ಬೆಂಗಳೂರು – ರಾಜ್ಯ ವಿಧಾನಸಭೆ Election ಸೋಲಿನ ಹೊಡೆತದಿಂದ ತತ್ತರಿಸಿರುವ ಬಿಜೆಪಿಯಲ್ಲಿ ಇದೀಗ ಭಿನ್ನಮತದ ಧಗೆ ಆವರಿಸಿದೆ.
ಅದರಲ್ಲೂ ಪಕ್ಷದ ಸಂಘಟನಾತ್ಮಕ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿದ್ದ ಹಿರಿಯ ನಾಯಕ ಹಾಗೂ ಸಂಘ ಪರಿವಾರದ ಮುಖಂಡ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ರಾಜ್ಯ ನಾಯಕರು ತಿರುಗಿ ಬಿದ್ದಿದ್ದಾರೆ.
ಕೆಲವು ದಿನಗಳ ಹಿಂದೆ ಸಂತೋಷ್ ಅವರ ಹೆಸರು ಹೇಳಿದರೆ ಸಾಕು ಬಿಜೆಪಿ ನಾಯಕರು ಬೆಚ್ಚುತ್ತಿದ್ದರು ಅವರ ಒಂದು ಫೋನ್ ಕರೆಗೆ ತಕ್ಷಣವೇ ಎಲ್ಲಾ ಕೆಲಸ ಆಗುತ್ತಿತ್ತು ಸಂತೋಷ್ ಮಾತಂದರೆ ವೇದ ವಾಕ್ಯ ಎಂದು ಪರಿಗಣಿಸಲಾಗಿತ್ತು.
ಸರ್ಕಾರದ ಮಟ್ಟದ ಕೆಲಸವಿರಲಿ, ಚುನಾವಣೆಯ ವಿಷಯವಿರಲಿ, ಪಕ್ಷ ಸಂಘಟನೆಯ ಮಾತೆ ಇರಲಿ, ಯಾವುದೇ ವಿಷಯದಲ್ಲಿ ಬಿ ಎಲ್ ಸಂತೋಷ್ ಹೇಳಿದರೆ ಸಾಕು ‘ಜೀ’ ಎಂದು ಅದನ್ನು ಶಿರಸಾವಹಿಸಿ ಮಾಡಲಾಗುತ್ತಿತ್ತು. ಚುನಾವಣೆ ಕಾರ್ಯತಂತ್ರ, ಸರ್ಕಾರದ ಆಡಳಿತ ಯಂತ್ರ, ಅಭ್ಯರ್ಥಿಗಳ ಆಯ್ಕೆಯ ರಣತಂತ್ರ ಎಲ್ಲ ವಿಷಯಗಳಲ್ಲೂ ಈ’ ಜೀ’ ಮಾತೆ ಅತ್ಯಂತ ಪ್ರಮುಖವಾಗಿತ್ತು.
ಆದರೆ ಇದೀಗ ಈ ‘ಜಿ’ ಎಂದರೆ ಯಾರು ಎಂದು ರಾಜ್ಯ ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಸಂತೋಷ್ ಅವರು ಕರೆ ಮಾಡಿದರು ಯಾರು ಕೇಳುತ್ತಿಲ್ಲ ಅವರ ದೂರವಾಣಿ ಕರೆಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಪಕ್ಷದ ವಿಷಯದಲ್ಲಿ ಅವರು ನೀಡುವ ಸೂಚನೆ ಪಾಲಿಸುತ್ತಿಲ್ಲ ಅವರ ಪಕ್ಷ ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎನ್ನುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು.
“ವಿಧಾನಸಭೆ ಚುನಾವಣೆ ಎನ್ನುವ ಕಹಿ ಅನುಭವ ಮುಗಿದಿದೆ ರಾಜಕೀಯ ಪಕ್ಷಗಳಿಗೆ ಸೋಲು- ಗೆಲುವು ಎನ್ನುವುದು ಒಂದು ಭಾಗ ಗೆಲುವಿನಿಂದ ಬೀಗಬಾರದು ಸೋತಿದ್ದೇವೆ ಎಂದು ಧೃತಿಗೆಡಬಾರದು ಮುಂದಿನ ಹೋರಾಟಕ್ಕೆ ಅಣಿಯಾಗಬೇಕು” ಇದು ಸಂತೋಷ್ ಅವರ ಮಾತು ಆದರೆ ಈ ಮಾತು ರಾಜ್ಯದ ಬಿಜೆಪಿ ನಾಯಕರುಗಳಿಗೆ ರುಚಿಸುತ್ತಿಲ್ಲ.
ವಿಧಾನಸಭೆ ಚುನಾವಣೆ ಮುಗಿದಿದೆ ನಮ್ಮ ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲೋಕಸಭೆ ಸೇರಿದಂತೆ ಹಲವು ಚುನಾವಣೆಗಳು ಇವೆ ಈ ಚುನಾವಣೆಗಳು ನಮಗೆ ಸವಾಲು ಅವುಗಳಿಗೆ ಈಗಿಂದಲೇ ತಯಾರಿ ಆರಂಭಿಸಬೇಕು ಎಂಬ ಸಂತೋಷ್ ಅವರ ಕರೆ ಯಾವ ನಾಯಕರಿಗೂ ಕೇಳುತ್ತಿಲ್ಲ.
ಈ ಹಿಂದೆ ಸಂತೋಷ ಅವರ ಒಂದು ಕರೆಗೆ ಈ ಎಲ್ಲ ಬಿಜೆಪಿ ನಾಯಕರು ಓಡಿ ಬರುತ್ತಿದ್ದರು ಆದರೆ ಈಗ ಅವರಿಗೆ ಕ್ಯಾರೆ ಅನ್ನುತ್ತಿಲ್ಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ ಕಾರ್ಯತಂತ್ರ ಕುರಿತು ಚರ್ಚಿಸಲು ಸಂತೋಷ್ ಅವರು ಬೆಂಗಳೂರಿನಲ್ಲಿ ನಗರದ ಬಿಜೆಪಿ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ಕರೆದಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಈ ಸಭೆಗೆ ಸಮಯಕ್ಕೆ ಸರಿಯಾಗಿ ಸಂತೋಷ್ ಅವರು ಕಚೇರಿಯ ಸಿಬ್ಬಂದಿ ಜೊತೆಗೆ ಹಾಜರಾಗಿ ಕುಳಿತಿದ್ದಾರೆ ಆದರೆ ಯಾವೊಬ್ಬ ನಾಯಕರು ಈ ಸಭೆಗೆ ಬರಲಿಲ್ಲ ಅದು ಹೋಗಲಿ ತಾವು ಬರುವುದಿಲ್ಲ ಎಂದು ಕೂಡ ಹೇಳಲಿಲ್ಲ ಪಕ್ಷದ ರಾಜ್ಯ ಕಚೇರಿಯಿಂದ ಈ ನಾಯಕರಿಗೆ ಕರೆ ಮಾಡಿದರೆ ಯಾವ ಸಭೆ ಯಾವ ಸಂತೋಷ್ ಎಂದು ಪ್ರಶ್ನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಭೆಯ ಕುರಿತು ಮಾಹಿತಿ ನೀಡುವಲ್ಲಿ ಏನೋ ಗೊಂದಲ ಉಂಟಾಗಿರಬಹುದು ಎಂದು ಭಾವಿಸಿದ ಸಂತೋಷ್ ಒಂದು ಸಭೆಯನ್ನು ರದ್ದುಗೊಳಿಸಿ ಎರಡು ದಿನ ಬಿಟ್ಟು ಮತ್ತೊಂದು ಸಭೆಯನ್ನು ಕರೆದಿದ್ದಾರೆ ಈ ಸಭೆಗೆ ತಪ್ಪದೆ ಹಾಜರಾಗುವಂತೆ ಪಕ್ಷದ ಕಚೇರಿಯಿಂದ ಅಧಿಕೃತ ಜ್ಞಾಪನಾ ಪತ್ರ ರವಾನಿಸಿದ್ದಾರೆ ಅಷ್ಟೇ ಅಲ್ಲ ಕಚೇರಿ ಸಿಬ್ಬಂದಿ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಇದಕ್ಕೆ ಯಾರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೆಯೇ ಎರಡನೇ ಸಭೆಗೂ ಯಾರೊಬ್ಬರೂ ಹಾಜರಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಕುರಿತಂತೆ, ಬೆಂಗಳೂರಿನ ಬಿಜೆಪಿ ನಾಯಕರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡಿದ್ದು ಪಕ್ಷದ ಈ ಎಲ್ಲ ವಿದ್ಯಮಾನಗಳಿಗೆ ಗೊಂದಲಗಳಿಗೆ ಮತ್ತು ದಯನೀಯ ಸೋಲಿಗೆ ಸಂತೋಷ್ ಅವರ ಅತಿಯಾದ ಹಸ್ತಕ್ಷೇಪ ಹಿರಿಯ ನಾಯಕರ ಕಡೆಗಣನೆ ಪಕ್ಷದ ಮುಖಂಡರ ಅಭಿಪ್ರಾಯಗಳಿಗೆ ಅವಕಾಶವೇ ನೀಡದೆ ಏಕ ಪಕ್ಷಿಯವಾಗಿ ಕೈಗೊಂಡ ತೀರ್ಮಾನಗಳೇ ಪ್ರಮುಖ ಕಾರಣ. ಇದನ್ನು ಹೀಗೆ ಮುಂದುವರೆಯಲು ಬಿಟ್ಟರೆ ನಮಗೆ ಇನ್ನಷ್ಟು ಹಿನ್ನಡೆ ಆಗಲಿದೆ ಪಕ್ಷಕ್ಕೆ ಹೊಸ ರೂಪ ನೀಡುವವರೆಗೆ ಯಾವುದೇ ಸಭೆ ಗಳಿಗೆ ಹಾಜರಾಗಬಾರದು ಹಾಗೂ ಸಂತೋಷ್ ಅವರು ದೈನಂದಿನ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದು ನಿಲ್ಲುವವರೆಗೆ ನಾವು ಹೀಗೆ ಇರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Previous Articleಗೌಡ ಸಂಪ್ರದಾಯದಂತೆ ಅಭಿಷೇಕ್-ಅವೀವಾ ಮದುವೆ
Next Article ನೈತಿಕ ಪೊಲೀಸ್ ಗಿರಿ ವಿರುದ್ಧ ಸಮರ ಸಾರಿದ ಖಾಕಿ ಪಡೆ
5 Comments
наркологическая скорая бесплатная наркологическая скорая бесплатная .
наркологическая скорая наркологическая скорая .
Вывод из запоя Вывод из запоя .
малый бизнес примеры малый бизнес примеры .
stories viewer [url=anonstoriesview.com]stories viewer[/url] .