ಬೆಂಗಳೂರು,ಏ.15-
ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಕೊರಳಲ್ಲಿನ ಸಾರವನ್ನು ಹೇಗೆ ಕಸಿದುಕೊಂಡು ಪರಾರಿಯಾಗಬೇಕು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತುಕೊಂಡು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರಿನ ನಿತಿನ್ (24) ಹಾಗೂ ಭದ್ರಾವತಿ ಮೂಲದ ಪ್ರಭು (27) ಎಂದು ಗುರುತಿಸಲಾಗಿದೆ.
ಈ ಐನಾತಿ ಕಳ್ಳರು ಸರಗಳ್ಳತನಕ್ಕೆ ತಮ್ಮ ಸ್ವಂತ ಬೈಕ್ ಬಳಸಿದರೆ ಸಿಕ್ಕಿ ಬೀಳಬಹುದು ಎಂಬ ಆತಂಕದಿಂದ ಬಾಡಿಗೆ ಬೈಕ್ ಪಡೆಯುತ್ತಿದ್ದರು. ಬನಶಂಕರಿಯಲ್ಲಿನ ಖಾಸಗಿ ಸಂಸ್ಥೆಯಲ್ಲಿ ಬಾಡಿಗೆ ಬೈಕ್ ಪಡೆದು ಕಳ್ಳತನ ಮಾಡುತ್ತಿದ್ದರು.
ನಿತಿನ್ ಬೈಕ್ ಚಲಾಯಿಸಿದರೆ, ಪ್ರಭು ಹಿಂದೆ ಕುಳಿತು ಸರಗಳ್ಳತನ ಮಾಡುತ್ತಿದ್ದ. ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು.
ಕಳೆದ ಮಾ.14 ರಂದು ವೆಂಕಟೇಶ್ವರ ಲೇಔಟ್ ನಲ್ಲಿ ಮಹಿಳೆಯ ಸರಗಳ್ಳತನ ಮಾಡಿ ಪರಾರಿಯಾಗಿದ್ದರು. ಕೋಣಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸರಗಳ್ಳರ ಬಳಿ 2.8 ಲಕ್ಷ ಮೌಲ್ಯದ ಚಿನ್ನಾಭರಣ, 1.5 ಲಕ್ಷ ರೂ. ಮೌಲ್ಯದ ಪಲ್ಸರ್ ಬೈಕ್ ಜಪ್ತಿ ಮಾಡಲಾಗಿದೆ.
Previous Article‘ಬುರ್ಖಾ ತೆಗೆಯಲು ಹೇಳಿ ರೆಕಾರ್ಡ್ ಮಾಡಿದ
Next Article ಬೆಂಗಳೂರಿನಲ್ಲಿ ತಾಲಿಬಾನ್ ಶಿಕ್ಷೆ