ಬೆಂಗಳೂರು,ಮೇ.13-
ಕ್ಷುಲ್ಲಕ ಕಾರಣಗಳಿಗಾಗಿ ತಗಾದೆ ತೆಗೆದ ಯುವಕರ ಗುಂಪೊಂದು ಸ್ಯಾಂಡಲ್ವುಡ್ ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದೆ.
ನಟ ಚೇತನ್ ಚಂದ್ರ ಕನಕಪುರದ ಬಳಿಯ ದೇವಸ್ಥಾನವೊಂದಕ್ಕೆ ಹೋಗಿ ಕಾರಿನಲ್ಲಿ ಬರುತ್ತಿದ್ದಾಗ ಯುವಕನೊಬ್ಬ ವೀಲ್ಹಿಂಗ್ ಮಾಡಿಕೊಂಡು ಬಂದು ನಟನನ್ನು ಸತಾಯಿಸಿದ್ದಾನೆ.
ಕಗ್ಗಲಿಪುರದ ಬೇಕರಿಯೊಂದರ ಬಳಿ ಕಾರಿನಿಂದ ಇಳಿದು ಪ್ರತಿಕ್ರಿಯೆಗೆ ನಟ ಮುಂದಾಗಿದ್ದಾರೆ. ಆಗ
ಆಗ ಯುವಕ ರಸ್ತೆಗೆ ಅಡ್ಡಗಟ್ಟಿ ನಿಂತು ಕಾರಿಗೆ ಹಾನಿ ಮಾಡಿದ್ದಲ್ಲದೇ ಚೇತನ್ ಮೇಲೆ ಕಬ್ಬಿಣದ ಪೈಪ್ ನಿಂದ ಹಲ್ಲೆ ಮಾಡಿದ್ದಾನೆ.
ಈ ವೇಳೆ ನಟ ಪ್ರತಿದಾಳಿಗೆ ಮುಂದಾಗುತ್ತಿದ್ದಂತೆ
ಯುವಕನ ಜೊತೆಗಿದ್ದ ಯುವತಿ ಅವನಿಗೆ ಏನು ಮಾಡಬೇಡಿ, ಅವನು ಮದ್ಯಪಾನ ಮಾಡಿದ್ದಾನೆ ಎಂದಿದ್ದಾಳೆ. ಹೀಗಾಗಿ ನಟ ಏನು ಮಾಡಿಲ್ಲ. ಬಳಿಕ ಅದೇ ಸ್ಥಳಕ್ಕೆ ಬಂದ 15-20 ಯುವಕರು ಚೇತನ್ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಟನ ಬಳಿಯಿದ್ದ ಚೈನ್, ಸ್ವಲ್ಪ ಹಣ ಮತ್ತು ವಿಡಿಯೋ ಮಾಡುತ್ತಿದ್ದ ಮೊಬೈಲ್ ಅನ್ನು ಕಸಿದುಕೊಂಡು ಪರಾರಿದ್ದಾರೆ.
ಪುಂಡರ ದಾಳಿಯಿಂದ ಚೇತನ್ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು ಹೆಚ್ಚು ರಕ್ತಸ್ರಾವವಾಗಿದೆ. ಸದ್ಯ ನಟನನ್ನು ಕಗ್ಗಲಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಫ್ಟ್ ಮಾಡಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ನಟ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

1 Comment
betmgm IA betmgm-play betmgm Rhode Island