ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ನಾಣ್ಣುಡಿಗೆ ಅನ್ವರ್ಥಕ ಈ ಸುದ್ದಿ.ತಾನು ಹೇಳಿದಂತೆ ಕೇಳಲಿಲ್ಲ ಎಂದು ಅಣ್ಣನ ಮೇಲೆ ಕೋಪಗೊಂಡು ಆತನ ಇಡೀ ಕುಟುಂಬ ಮುಗಿಸಲು ಹೊಂಚುಹಾಕಿ
ಮಧ್ಯರಾತ್ರಿಯಲ್ಲಿ ಆತನ ಮನೆ ಸುಡಲು ಹೋಗಿ ಆ ಬೆಂಕಿಯಲ್ಲಿ ತಾನೇ ಸುಟ್ಟು ಸಾವು ಬದುಕಿನೊಂದಿಗೆ
ಆಸ್ಪತ್ರೆಯಲ್ಲಿ ನೆರವಾಗುತ್ತಿದ್ದಾರೆ
ಬೆಂಗಳೂರು ಹೊರವಲಯದ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದ ರಾಮಕೃಷ್ಣ ಮತ್ತು ಮುನಿರಾಜು ಅಣ್ಣ ತಮ್ಮಂದಿರು.ಇಬ್ಬರೂ ಕೃಷಿಕರು.ಇದರ ಜೊತೆಗೆ ಮುನಿರಾಜು ಚೀಟಿ ವ್ಯವಹಾರ ಮಾಡಿಕೊಂಡಿದ್ದರು
ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದನು, ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ ಕಾರಣ ತನ್ನ ಪಾಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ಸ್ವಲ್ಪ ಜಮೀನು ಮಾರಿ ಕುಟುಂಬಸ್ಥರು ಹಣ ನೀಡಿದ್ದರು. ಆದರೆ ಆ ಹಣ ಸಾಕಾಗದ ಕಾರಣ ಉಳಿದ ಜಮೀನು ಸಹ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಮುನಿರಾಜು ತನ್ನ ಅಣ್ಣನನ್ನು ಕೇಳಿದ್ದ. ಆದರೆ ಇರುವ ಅಲ್ಪ ಸ್ವಲ್ಪ ಜಮೀನು ಮಾರಲ್ಲ ಎಂದು ಅಣ್ಣ ಸ್ಪಷ್ಟವಾಗಿ ಹೇಳಿದ್ದ.
ಹೀಗಾಗಿ ಸಹೋದರ ರಾಮಕೃಷ್ಣ ಕುಟುಂಬವನ್ನೇ ಮುಗಿಸುವ ಸಂಚುಮಾಡಿದ್ದ ಮುನಿರಾಜು, ಕಳೆದ ರಾತ್ರಿ ತನ್ನ ಅಣ್ಣನ ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ರೂಂನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು.
ಆದರೆ ಅಣ್ಣನ ಕುಟುಂಬವನ್ನೇ ನಿರ್ನಾಮ ಮಾಡಲು ಹೋದ ಮುನಿರಾಜುವಿಗೆ ದೇವರು ಅಲ್ಲೇ ಶಿಕ್ಷೆ ಕೊಟ್ಟಿದ್ದಾನೆ. ಬೆಂಕಿ ಹಚ್ಚುವ ವೇಳೆ ಈತನ ಕೈನಲ್ಲಿ ಪೆಟ್ರೋಲ್ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನು ಆವರಿಸಿದೆ. ತನ್ನ ದೇಹಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾಪಾಡಿ ಕಾಪಾಡಿ ಎಂದು ಮುನಿರಾಜು ಕಿರುಚಾಡಿದ್ದಾನೆ.
ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಾಯಾಳುವಿಗೆ ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.ಮನೆಗೆ ಬೆಂಕಿ ಹಚ್ಚಲು ಹೋಗಿ ತಾನೇ ಸುಟ್ಟುಕೊಂಡ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ದೃಶ್ಯ ಭಯಾನಕವಾಗಿದೆ.


17 Comments
п»їcanadian pharmacy uk delivery: SteadyMeds pharmacy – best canadian pharmacy
AccessBridge: AccessBridge Pharmacy – order medicine from mexico
SteadyMeds: best canadian pharmacy – SteadyMeds pharmacy
canadian pharmacy king reviews: canadian online pharmacy reviews – SteadyMeds
AccessBridge Pharmacy: AccessBridge Pharmacy – AccessBridge Pharmacy
metoprolol succinate online pharmacy international online pharmacy reputable indian pharmacies
tadalafil dosage for erectile dysfunction tadalafil 5mg daily difference between tadalafil and sildenafil
п»їinternational drug mart: pharmacy website india – worldwide pharmacy
AccessBridge: buying prescription drugs in mexico – AccessBridge Pharmacy
mexico city pharmacy: buy drugs online – AccessBridge
AccessBridge Pharmacy: mexican meds – AccessBridge Pharmacy
worldwide pharmacy: FormuLine Pharmacy – us pharmacy no prescription
AccessBridge Pharmacy: mexico prescription online – AccessBridge
online pharmacy no rx: mail order pharmacy india – overseas pharmacy no prescription
AccessBridge Pharmacy: AccessBridge Pharmacy – tijuana pharmacy online
ed prescriptions online: cheap ed pills online – legal online pharmacy
online pet pharmacy: Pet Canada Direct – п»їdog medication online