ರಾಮನಗರ ಅ 29: ಬೆಂಗಳೂರು ಹೊರವಲಯದ ರಾಮನಗರ ಸುತ್ತಮುತ್ತ ಭಾರಿ ಮಳೆ ಸಾಕಷ್ಟು ಅವಾಂತರವನ್ನೆ ಸೃಷ್ಟಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರವಂತೂ ಅತ್ಯಂತ ದುಸ್ತರವಾದ ಓಡಾಟವೆನಿಸಿದೆ.
ಈ ನಡುವೆ ರಾಮನಗರ ಜಿಲ್ಲೆಯ ನಾಗರೀಕರ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ. ಮದ್ದೂರಿನಿಂದ ಬೈ ಪಾಸ್ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯರಂಗ ಎಂಬ ಖಾಸಗಿ ಬಸ್ ಇಲ್ಲಿನ ಬಿಳಗುಂಬ ರಸ್ತೆಯ ಬಳಿ ಅಂಡರ್ಪಾಸ್ನಲ್ಲಿ ತುಂಬಿದ್ದ ನೀರಿನಲ್ಲಿ ಸಿಲುಕಿದೆ.
ನೀರಿನ ಮಟ್ಟದ ಬಗ್ಗೆ ಮಾಹಿತಿಯಿಲ್ಲದ ಚಾಲಕ ಬಸ್ ಅನ್ನು ನೀರಿನೊಳಗೆ ಚಲಾಯಿಸಿದ ಪರಿಣಾಮ ಬಸ್ ನೊಳಗೆ ನೀರು ತುಂಬಿ ನೋಡ ನೋಡುತ್ತಿದ್ದಂತೆ ಬಸ್ನಲ್ಲಿ ಎದೆಯ ಮಟ್ಟಕ್ಕೆ ನೀರು ತುಂಬಿದ ಪರಿಣಾಮ ಎಲ್ಲರು ಆತಂತಕ್ಕೆ ಒಳಗಾಗಿದ್ದರು.
ಈ ವೇಳೆ ತಕ್ಷಣವೇ ಸ್ಪಂದಿಸಿದ ಸ್ಥಳೀಯ ಯುವಕರು ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಕರೆತರುವಲ್ಲಿ ಯಶಸ್ವಿ ಆಗಿದ್ದಾರೆ. ಇದರಿಂದಾಗಿ ಮಳೆಯಿಂದಾಗಿ ಸಂಭವಿಸುತ್ತಿದ್ದ ಭಾರೀ ಅನಾಹುತ ತಪ್ಪಿದೆ.
ಇನ್ನು ಬೆಂಗಳೂರು – ಮೈಸೂರು ಹೆದ್ದಾರಿಯ ಬಸವನಪುರ ಬಳಿಯ ಅಂಡರ್ಪಾಸ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು, ಈ ನೀರಿನಲ್ಲಿ 3 ಕಾರುಗಳು ಮುಳಗಡೆಯಾಗಿವೆ
Previous Articleಕೊಡಗಿನಲ್ಲಿ ವರುಣನ ರೌದ್ರ
Next Article ಹನಿಟ್ರ್ಯಾಪ್, ಆನೆಗಳ ಖೆಡ್ಡಾಕ್ಕೂ ಬೀಳದ ಚಾಲಾಕಿ ಚಿರತೆ