ಬಾಗಲಕೋಟೆ, ಮೇ.22 -ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ವೊಬ್ಬರು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವನಗರದಲ್ಲಿ ನಡೆದಿದೆ. ನ್ಯಾಯಮೂರ್ತಿ ಮಾನಪ್ಪ ತಳವಾರ(53)ಆತ್ಮಹತ್ಯೆ ಮಾಡಿಕೊಂಡವರು. ನವನಗರದ ಸೆಕ್ಟರ್ ನಂ.16 ರಲ್ಲಿರುವ ಮನೆಯಲ್ಲಿ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು. ಮೃತ ಜಡ್ಜ್ಗೆ ಇಬ್ಬರು ಪತ್ನಿಯರು ಇದ್ದು, ಮೊದಲ ಪತ್ನಿ ಬೆಂಗಳೂರಲ್ಲಿ ಜಡ್ಜ್ ಆಗಿದ್ದಾರೆ. ಎರಡನೇ ಪತ್ನಿ ಜೊತೆ ನವನಗರದಲ್ಲಿ ಮಾನಪ್ಪ ತಳವಾರ ನೆಲೆಸಿದ್ದರು.
ಮೂಲತಃ ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದವರಾಗಿದ್ದಾರೆ. ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಟಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
Previous Articleಫ್ಲೈಓವರ್‌ನಿಂದ ಬಿದ್ದು ಬೈಕ್ ಸವಾರ ಸಾವು
Next Article ಕಾರು ಮರಕ್ಕೆ ಡಿಕ್ಕಿ: ಗೋವಾದಲ್ಲಿ ಬೆಳಗಾವಿಯ ಮೂವರ ಸಾವು