ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವಿಚಾರಕ್ಕೆ ಮಂಡ್ಯದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ ಗಲಭೆಗೆ ಯಾರು ಕಾರಣ ? ಇವರಿಬ್ಬರೇ ಕಾರಣ. ಅದರ ಬಗ್ಗೆ ನಾನು ಮಾತನಾಡಲ್ಲ. ನಾನು ಈದ್ಗಾ ಮೈದಾನ ವಿಚಾರ ಬಗೆಹರಿಸುವ ವೇಳೆ ಹೀಗೆ ಮಾಡಿದ್ರು. ಒಬ್ಬ ಮಾಜಿ ಮಂತ್ರಿ ಹುಬ್ಬಳಿಯವರೇ ವಿರೋಧ ಮಾಡಿದ್ರು. ನಮ್ಮ ಪಾರ್ಟಿಗೆ ಡ್ಯಾಮೆಜ್, ಅವರನ್ನ ಹೊರಗೆ ಹಾಕಿದೆ.. ಯಡಿಯೂರಪ್ಪ ಅವರು ಹೇಗೆ ಮಾಡ್ತಿರಿ ನೋಡ್ತಿನಿ ಅಂದ್ರು. ಸರ್ಕಾರಕ್ಕೆ ಶಕ್ತಿ ಇದೆ, ಏನು ಮಾಡಬೇಕು ಅಂತ ಗೊತ್ತಿದೆ. ನೀವು ಎಷ್ಟು ಕೂಗಿದ್ರು ನಾನು ಹೆದರುವುದಿಲ್ಲ ಅಂತ ಹೇಳಿ. ಎಲ್ಲೆಲ್ಲಿ ಯಾರನ್ನ ಅರೆಸ್ಟ್ ಮಾಡಿಸಿಬೇಕೊ ಮಾಡಿದೆ. ಮೂರು ಜನ ಮುಸ್ಲಿಂ ಗುರುಗಳು, ನಾನು ಬೆಂಗಳೂರಿನಲ್ಲಿ ರಿಪಬ್ಲಿಕ್ ಡೇ ದಿನ ಧ್ವಜಾರೋಹಣ ಮಾಡಿದೆ. ರಾಜ್ಯದಲ್ಲಿ ಕಾಂಗ್ರೇಸ್ ನಿಂದ ಮತ್ತೆ ಹಿಜಾಬ್ ಶುರುವಾಯ್ತು. ಆ ಮಕ್ಕಳು ಬಟ್ಟೆ ಹಾಕೊಂಡೊಗೋಕ್ಕೆ ಹೊಸದಾಗಿ ಶುರುಮಾಡಿದ್ದಾರಾ.? ಇದಕ್ಕೆ ಯಾರು ಕಾರಣ, ಈ ವಿಚಾರ ಬಗ್ಗೆ ಚರ್ಚೆ ಮಾಡಲ್ಲ, ನಾನು ಕಾವೇರಿ ಹೋರಾಟ ಮಾಡ್ತೇನೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಕಿಡಿಕಾರಿದ್ದಾರೆ.