ಬೆಂಗಳೂರು – ರಾಜಧಾನಿ ಬೆಂಗಳೂರಿನಲ್ಲಿ ಐ.ಟಿ.ಉದ್ಯೋಗಿಗಳು ಹೆಚ್ಚಾಗಿರುವ ಪ್ರದೇಶದಲ್ಲಿನ ಮಹಿಳೆಯರು
ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಪದೇ ಪದೇ ಲ್ಯಾಪ್‌ಟಾಪ್ ಕಳ್ಳತನವಾಗುತಿತ್ತು.ಅತಿ ಭದ್ರತೆಯುಳ್ಳ ಇಂತಹ ಕಟ್ಟಡಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.
ಲ್ಯಾಪ್‌ಟಾಪ್ ಕಳ್ಳತನದ ಕುರಿತು ದಾಖಲಾಗುತ್ತಿದ್ದ ಹಲವಾರು ಪ್ರಕರಣಗಳನ್ನು ಬೆನ್ನು ಹತ್ತಿದ ಪೊಲೀಸರಿಗೆ ಕೊನೆಗೂ ಕಳ್ಳ ಅಲ್ಲಾ ಕಳ್ಳಿ ಸಿಕ್ಕಿಬಿದ್ದರು.ಆಕೆಯ ಕಥಾನಕ ಕೇಳಿದ ಪೊಲೀಸರು ಕ್ಷಣಕಾಲ ಅವಕ್ಕಾದರು.
ಈಕೆ ರಾಜಸ್ಥಾನ ಮೂಲದ ಜಶು, ಎಂಜಿನಿಯರಿಂಗ್ ಪದವೀಧರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ನೋಯ್ಡಾದ ಬ್ಯಾಂಕ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ವೇತನ ಕಡಿಮೆ ಇದ್ದಿದ್ದರಿಂದ, ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಬೆಂಗಳೂರಿನ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಹಲವು ಕಡೆ ಸಂದರ್ಶನ ನೀಡಿದರೂ ಕೆಲಸ ಸಿಕ್ಕಿರಲಿಲ್ಲ
ಈ ನಡುವೆ ಬೆಂಗಳೂರಿಗೆ ಒಮ್ಮೆ ಸಂದರ್ಶನಕ್ಕೆ ಬಂದ ಆಕೆ,ಪಿಜಿಯೊಂದರಲ್ಲಿ ತಂಗಿದ್ದರು. ಈ ವೇಳೆ ಕಟ್ಟಡದಲ್ಲಿ ತಂಗಿದ್ದ ಮಹಿಳೆಯೊಬ್ಬರು ಊಟಕ್ಕೆ ಬಂದರು. ಅದನ್ನು ಗಮನಿಸಿದ ಈಕೆ ಆ ಮಹಿಳೆಯ ಕೊಠಡಿಗೆ ಹೋಗಿ ನೋಡಿದರು.ಅಲ್ಲಿ ಬೆಲೆಬಾಳುವ ಲ್ಯಾಪ್‌ಟಾಪ್ ಇವರ ಕಣ್ಣಿಗೆ ಬಿದ್ದಿದೆ.ಮೊದಲ ಬಾರಿಗೆ ಅದನ್ನು ಕಳ್ಳತನ ಮಾಡಿದ ಆಕೆ ಬಳಿಕ ಅದನ್ನು ಮಾರಾಟ ಮಾಡಿ ಹಣ ಪಡೆದಿದ್ದರು.
ಹಣ ಗಳಿಸಲು ಇದೊಂದು ಸುಲಭದ ಮಾರ್ಗ ಎಂದುಕೊಂಡ ಆಕೆ ಸಂದರ್ಶನಕ್ಕೆಂದು ವಿಮಾನದಲ್ಲಿ ಆಗಾಗ ಬರುತ್ತಿದ್ದರು. ಬೆಳ್ಳಂದೂರು, ವೈಟ್‌ಫೀಲ್ಡ್ ಸಿಲ್ಕ್ ಬೋರ್ಡ್, ಮಹದೇವಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು.ಅಲ್ಲಿ ತಂಗಿರುತ್ತಿದ್ದ ಇತರೆ ಯುವತಿಯರು ಊಟಕ್ಕೆ ಅಥವಾ ತಿಂಡಿ ಇಲ್ಲವೇ ಕಾಫಿಗೆಂದು ಹೊರಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೊಠಡಿಗೆ ಹೋಗಿ ಲ್ಯಾಪ್‌ಟಾಪ್ ಕದಿಯುತ್ತಿದ್ದರು.’
‘ಕದ್ದ ಲ್ಯಾಪ್‌ಟಾಪ್‌ಗಳನ್ನು ಸ್ಥಳೀಯ ಮಳಿಗೆಗಳಲ್ಲಿ ಮಾರುತ್ತಿದ್ದರು. ಅದರಿಂದ ಬಂದ ಹಣವನ್ನು ತಮ್ಮ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಹೀಗಾಗಿ ಆಕೆ ಕೆಲಸಕ್ಕೆ ಸೇರುವುದನ್ನೇ ಮರೆತಿದ್ದರು.
ಆರೋಪಿ ಇತ್ತೀಚೆಗೆ ನಗರಕ್ಕೆ ಪುನಃ ಬಂದಿದ್ದರು. ಹುಣಸಮಾರನಹಳ್ಳಿ ಬಳಿ ಅವರನ್ನು ಬಂಧಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’
3 ಪ್ರತಿಕ್ರಿಯೆಗಳು
вывод из запоя в санкт-петербурге вывод из запоя в санкт-петербурге .
саженцы с доставкой http://rodnoisad.ru/ .
семена купить недорого семена купить недорого .