ಬೆಂಗಳೂರು,ಜೂ.26-ಕೋಳಿ ಮಾಂಸದ ತುಂಡಿನ ವಿಚಾರವಾಗಿ ಉಂಟಾದ ಜಗಳದಲ್ಲಿ ಊಟಕ್ಕೆ ಬಂದ ಮೂವರ ಮೇಲೆ
ಹೋಟೆಲ್ನ ಮ್ಯಾನೇಜರ್ ಹಾಗೂ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನವರಂಗ ಬಳಿಯ ಎಂಪೈರ್ ಹೋಟೆಲ್ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಹಲ್ಲೆಯಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಅಭಿಷೇಕ್, ಅನೀಶ್, ಜಾನ್ಸನ್ ಸೇರಿ ಮೂವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂಪೈರ್ ಹೋಟೆಲ್ನ ಮ್ಯಾನೇಜರ್ ಹಾಗೂ ಸಿಬ್ಬಂದಿ ಸ್ಟೀಲ್ ಜಗ್ ಹಾಗೂ ರಾಡ್ಗಳಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕೋಳಿ ಮಾಂಸ ಕಡಿಮೆ ಹಾಕಿ, ಬಿಲ್ ಜಾಸ್ತಿ ಕೊಟ್ಟಿದ್ದೀರಾ ಅಂತ ಜಾನ್ಸನ್ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ಉಂಟಾದ ವಿವಾದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಎಂಪೈರ್ ಹೋಟೆಲ್ನ ಸಿಬ್ಬಂದಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.