ಶ್ರೀನಗರ,ಜೂ.27- ಅಮರನಾಥ ಯಾತ್ರೆಗೆ ಕೆಲವು ದಿನಗಳ ಮುಂಚಿತವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತರ ಭದ್ರತಾ ಪಡೆಗಳೊಂದಿಗೆ ದೋಡಾದಲ್ಲಿ ಕಾರ್ಯಾಚರಣೆ ನಡೆಸಿ ಉಗ್ರನೊಬ್ಬನನ್ನು ಬಂಧಿಸಿದ್ದಾರೆ.
ಫರೀದ್ ಅಹ್ಮದ್ ಬಂಧಿತ ಉಗ್ರನಾಗಿದ್ದು, ಆತನಿಂದ ಚೈನೀಸ್ ಪಿಸ್ತೂಲ್, 2 ಮ್ಯಾಗಜೀನ್, 14 ಮದ್ದುಗುಂಡುಗಳು ಮತ್ತು ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಅರೋಪಿ ಫರೀದ್‍ನನ್ನು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಲು ನಿಯೋಜಿಸಲಾಗಿತ್ತು.
ಬಂಧಿತ ಉಗ್ರನ ಸಂಬಂಧಿಯೊಬ್ಬ ಪಾಕಿಸ್ತಾನದಲ್ಲಿದ್ದು,ಭಯೋತ್ಪಾದಕನಾದ ಆತ ದೋಡಾದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೇಲೆ ದಾಳಿ ನಡೆಸಲು ಅವನೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಅದಕ್ಕಾಗಿಯೇ ಅವನಿಗೆ ಮೂರು ತಿಂಗಳ ಹಿಂದೆ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದ ಎಂದು ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ಮುಂಚಿತವಾಗಿ ಬಂದಿದ್ದ ಗುಪ್ತಚರ ಮಾಹಿತಿ ಮತ್ತು ಭದ್ರತೆಯನ್ನು ಆಧರಿಸಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೋಡಾ ಪಟ್ಟಣದ ಹೊರವಲಯದಲ್ಲಿ ದಾಳಿ ನಡೆಸಿ, ಉಗ್ರ ಫರೀದ್‍ನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Previous Articleಚಿಕನ್ ಪೀಸ್ ಗಾಗಿ Fight.. !!
Next Article 15 ಬಂಡಾಯ ಶಾಸಕರಿಗೆ ಕೇಂದ್ರ ಸರ್ಕಾರದ ಭದ್ರತೆ