ಮಧ್ಯಪ್ರದೇಶದ ಕೂನೊ ರಾಷ್ಟ್ರೀಯ ವನ್ಯಜೀವಿ ಉದ್ಯಾನವನದಲ್ಲಿ ಮೇ 9ರಂದು ಮತ್ತೊಂದು ಚಿರತೆ ಸಾವನ್ನಪ್ಪಿದೆ. ಈ ಬಾರಿ ಸತ್ತಿರುವುದು ಒಂದು ಹೆಣ್ಣು ಚಿರತೆ. ಈ ಚಿರತೆಯನ್ನು ಈ ವರ್ಷ ಮಾರ್ಚ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿತ್ತು. ಭಾರತದಲ್ಲಿ ಚಿರತೆಗಳ ಸಂತತಿ ಇಲ್ಲದಾಗಿದ್ದರಿಂದ ನಮೀಬಿಯ ಮತ್ತು ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು, ಮತ್ತು ಭಾರತದಲ್ಲಿ ಅವುಗಳನ್ನು ಒಗ್ಗಿಸುವ ಪ್ರಯತ್ನವಾಗಿ ಈ ಚಿರತೆಗಳನ್ನು ತರಲಾಗಿತ್ತು. ಈಗ ಸಾಯಲ್ಪಟ್ಟ ಹೆಣ್ಣು ಚಿರತೆಯನ್ನು ಎರಡು ಗಂಡು ಚಿರತೆಗಳೊಂದಿಗೆ ಸಂತಾನೋತ್ಪತ್ತಿಗಾಗಿ ಜೊತೆಯಾಗಿ ಸಲ್ಪಟ್ಟಾಗ ಆ ಎರಡು ಗಂಡು ಚಿರತೆಗಳು ಈ ಹೆಣ್ಣು ಚಿರತೆಯನ್ನು ಸಂತಾನೋತ್ಪತ್ತಿ ಕ್ರೀಡೆಯಲ್ಲಿ ಘಾಸಿಗೊಳಿಸಿದ್ದವು ಮತ್ತು ಆ ಗಾಯಗಳ ಕಾರಣದಿಂದಾಗಿ ಈ ಚಿರತೆ ಸಾಯಲ್ಪಟ್ಟಿದ್ದು ತಿಳಿದುಬಂದಿದೆ.
ವಿದೇಶದಿಂದ ತಂದ 20 ಚಿರತೆಗಳ ಪೈಕಿ ಒಂದು ವರ್ಷದ ಅವಧಿ ಪೂರ್ಣಗೊಳ್ಳುವ ಮೊದಲೇ ಮೂರು ಚಿರತೆಗಳು ಸಾವನ್ನಪ್ಪಿದ್ದು ವನ್ಯಜೀವಿ ಆಸಕ್ತರಿಗೆ ಆತಂಕವನ್ನುಂಟು ಮಾಡಿದೆ. ಈ ಚಿರತೆಗಳ ಪುನರ್ ಪರಿಚಯ ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಆಸಕ್ತಿಯನ್ನು ತೋರಿದ ಬಗ್ಗೆ ಇಲ್ಲಿ ನೆನಪಿಸಿಕೊಳ್ಳಬಹುದು