ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇನ್ನಿಲ್ಲ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗಷ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಬುಲೆಟಿನ್ ತಿಳಿಸಿದೆ.
ಪಾಕಿಸ್ತಾನ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರಫ್ ಚುನಾಯಿತ ಸರ್ಕಾರ ಪದಚ್ಯತಗೊಳಸಿ 1999 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.2007ರಲ್ಲಿ ಸಂವಿಧಾನವನ್ನು ಅಮಾನತು ಮಾಡಿದ ಆರೋಪದಲ್ಲಿ ದೇಶದ್ರೋಹ ಪ್ರಕರಣ ಅವರ ಮೇಲಿತ್ತು. ಈ ಸಂಬಂಧ 2019 ರಲ್ಲಿ ಮರಣ ದಂಡನೆಯನ್ನು ವಿಧಿಸಲಾಗಿತ್ತು. ಆ ಬಳಿಕ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಪಾಕಿಸ್ತಾನದಲ್ಲಿ ಪ್ರಾಣ ಬೆದರಿಕೆ ಎದುರಿಸುತ್ತಿದ್ದ ಅವರು ತಮ್ಮ ಕುಟುಂಬ ಸಮೇತ 2016 ರಿಂದ ಮುಷರಫ್ ದುಬೈನಲ್ಲಿ ವಾಸಿಸುತ್ತಿದ್ದರು.
ಭಾರತದ ವಿರುದ್ಧ ಕಾರ್ಗಿಲ್ ಯುದ್ಧವನ್ನು ಮಾಡಿ ಭಾರೀ ಮುಖಭಂಗವನ್ನು ಅನುಭವಿಸಿದ್ದರು.ನಂತರ ಈ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿದ್ದ ದಿವಂಗತ ವಾಜಪೇಯಿ ಅವರೊಂದಿಗೆ ಸ್ನೇಹ ಹಸ್ತ ಚಾಚಿದ್ದರು ಪರಿಣಾಮ ದೆಹಲಿ- ಲಾಹೋರ್ ನಡುವೆ ಬಸ್ ಸಂಚಾರ ಆರಂಭವಾಗಿತ್ತು.
1 ಟಿಪ್ಪಣಿ
Релокация в Испанию Релокация в Испанию .