ಕೊಪ್ಪಳ, ಅ.14 – ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕಾಮುಕರ ತಂಡವೊಂದು ಕಾಲೇಜಿನಿಂದಲೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಭಯಾನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿಯ ಕಾಲೇಜು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಅಪಹರಿಸಿ ಕೊಪ್ಪಳಕ್ಕೆ ಕರೆ ತಂದು ಅಲ್ಲಿ ಬಿಯರ್ ಕುಡಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ.
ಕೊಪ್ಪಳ ಜಿಲ್ಲೆಯ ಸಣಾಪುರ ಎಂಬ ಊರಿನ ಹೋಟೆಲ್‌ನಲ್ಲಿ ಅತ್ಯಾಚಾರ ನಡೆದಿದ್ದು, ನವೀನ್, ಸಾಕೀಬ್, ತನು ಸೇರಿ ನಾಲ್ವರು ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ದೂರಿನಲ್ಲಿ ಆಪಾದಿಸಲಾಗಿದೆ.
ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಕಾಲೇಜಿನಲ್ಲಿ ಪರೀಕ್ಷೆಯಿದ್ದು, ಪರೀಕ್ಷೆ ಬರೆಯುತ್ತಿದ್ದಾಗ ಯಾರೋ ಬಂದು ಆಕೆಯನ್ನು ಕರೆದು ಅಣ್ಣ ಹೊರಗೆ ಕಾಯುತ್ತಿದ್ದಾನೆ ಎಂದು ಹೇಳಿದ್ದರು. ಆಕೆ ಅಣ್ಣ ಬಂದಿದ್ದಾನೆ ಎಂದು ಹೊರಗೆ ಬಂದು ನೋಡಿದರೆ ಕಾಯುತ್ತಿದ್ದು ಆಕೆಯ ಒಬ್ಬ ಸ್ನೇಹಿತ ಮತ್ತು ಇತರ ಮೂವರು. ಅವರು ಆಕೆಯನ್ನು ಮನೆಗೆ ಕರೆದೊಯ್ಯುವುದಾಗಿ ಹೇಳಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಆಕೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳುತ್ತಿರುವಂತೆಯೇ ಆಟೋ ಬಳ್ಳಾರಿಯಿಂದ ಕೊಪ್ಪಳದತ್ತ ಹೊರಟಿತ್ತು. ಆರೋಪಿಗಳು ಆಕೆಯನ್ನು ಕರೆದುಕೊಂಡು ಹೋಗಿದ್ದು ಕೊಪ್ಪಳ ಜಿಲ್ಲೆಯ ಸಣಾಪುರಕ್ಕೆ. ಅಲ್ಲಿನ ಅಂತರಾಳ ಕೆಫೆ ಹೋಟೆಲ್ಗೆ ಕರೆದೊಯ್ದು ಅಲ್ಲಿ ಆಕೆಗೆ ಬಿಯರ್ ಕುಡಿಸಿ ಮತ್ತು ಬರಿಸಿದ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಆಕೆಯ ಸ್ನೇಹಿತನೇ ಮುಂದೆ ನಿಂತು ಇತರ ಮೂವರ ಜತೆ ಸೇರಿ ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲಿಂದ ಆಕೆ ಮರಳಿ ಬಳ್ಳಾರಿ ತಲುಪಿ ಆರೋಪಿಗಳ ಮೇಲೆ ಕೇಸು ದಾಖಲಿಸಿದ್ದಾರೆ. ಬಳ್ಳಾರಿ ನಗರದ ಕೌಲ್ ಬಜಾರ್ನ ನವೀನ್, ಸಾಕೀಬ್, ತನು ಸೇರಿದಂತೆ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಇವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.


2 ಪ್ರತಿಕ್ರಿಯೆಗಳು
Big bonuses, bigger wins at Betano https://betanogame.org/mobile-app/. New players get up to €500 plus free spins on slots. Enjoy secure banking and 24/7 customer support. Betano – the smart choice for serious players.
Mostbet: onde o primeiro depГіsito vira uma experiГЄncia inesquecГvel – https://mostbetpt.pro/ , Descubra o Mostbet: bГґnus de 200% + 325 rodadas grГЎtis para novos jogadores .