ಬೆಳಗಾವಿ, ಡಿ.13- ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ (Sugarcane) ತೂಕದಲ್ಲಿ ರೈತರಿಗೆ ಆಗುತ್ತಿರುವ ಮೋಸವನ್ನು ನಿಯಂತ್ರಿಸಲು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿನ ತೂಕದ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಸೂಚನೆ ನೀಡಿದ್ದು, ಇದನ್ನು ಅಳವಡಿಸಲು ಕಾರ್ಖಾನೆಗಳಿಗೆ ಹದಿನೈದು ದಿನಗಳ ಗಡುವು ನೀಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಈ ಕುರಿತಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳ ಜನಪ್ರತಿನಿಗಳು, ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸಕ್ತ ಹಂಗಾಮಿನಲ್ಲಿ 78 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದು, 24 ಕಾರ್ಖಾನೆಗಳು ಮಾತ್ರ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿವೆ. ಉಳಿದ 54 ಕಾರ್ಖಾನೆಗಳು ಮುಂದಿನ ಹದಿನೈದು ದಿನಗಳಲ್ಲಿ ಡಿಜಿಟಲ್‍ಗೆ ಪರಿವರ್ತನೆ ಆಗಬೇಕು ಎಂದರು.
ರೈತರು, ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು. ರೈತರ ಗದ್ದೆಗಳಿಂದ ಲಾರಿಯಲ್ಲಿ ಎಷ್ಟು ಕಬ್ಬು ಬಂದಿರುತ್ತದೆಯೋ ಅಷ್ಟೇ ತೂಕದ ಕಬ್ಬು ಕಾರ್ಖಾನೆಗಳಲ್ಲಿ ತೂಕ ಮಾಡಿದಾಗಲೂ ಬರಬೇಕು. ಸರಿಯಾಗಿ ತೂಕ ಮಾಡದಿದ್ದರೆ, ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
ಡಿಜಿಟಲ್ ತೂಕ ಯಂತ್ರಗಳ ಅಳವಡಿಕೆಗೆ ಸಂಬಂಸಿದಂತೆ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಮಾಪನಶಾಸ್ತ್ರ ಇಲಾಖೆಯ ಜಂಟಿ ನಿರ್ದೇಶಕರು, ಉಪನಿರ್ದೇಶಕರು, ನಿಯಂತ್ರಕರು ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬರ ಪರಿಹಾರ ವಿಷಯದಲ್ಲಿ ಕೇಂದ್ರದ ನೆರವಿಗೆ ಕಾಯದೆ ಸರ್ಕಾರ ಪರಿಹಾರ ನೀಡುವ ನಿರೀಕ್ಷೆ ನಮ್ಮದಾಗಿತ್ತು,ಆದರೆ ದುರಾದೃಷ್ಟವಶಾತ್ ಸರ್ಕಾರ ಕಣ್ಣಿದ್ದು ಕುರಡನಂತೆ , ಕಿವಿಯಿದ್ದು ಕಿವುಡನಂತೆ ವರ್ತಿಸುತ್ತಿದೆ. ಬರಗಾಲದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಪಶು ಆಹಾರದ ಬೆಲೆ ಹೆಚ್ಚಿಸಿದೆ, ಒಂದು ಕಡೆ ಸಾಲದ ಸುಳಿಗೆ ಸಿಲುಕಿ ರೈತರು ಗುಳೆ ಹೋಗುತ್ತಿದ್ದರೆ, ಸುಮಾರು 450 ರೈತರು ಆತ್ಮಹತೆ ಮಾಡಿಕೊಂಡಿದ್ದಾರೆ ಎಂದು ಸದನದ ಗಮನ ಸೆಳೆದರು.
ಸರ್ಕಾರ ರೈತರಿಗೆ 3 ಫೇಸ್ ವಿದ್ಯುತ್ ನ್ನು ದಿನಕ್ಕೆ 7 ಗಂಟೆ ನೀಡಲಿದೆ ಎಂದು ಭಾವಿಸಿದ್ದೇವು ಅದು ಹುಸಿಯಾಗಿದೆ.ರಾಜ್ಯಕ್ಕೆ ಸುಮಾರು 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಈಗ 10 ರಿಂದ 11 ಸಾವಿರ ಮೆಗಾ ವಾಟ್ ಮಾತ್ರ ಉತ್ಪಾದನೆ ಆಗುತ್ತಿದೆ. ಇಂದು 4 ಸಾವಿರ ಮೆಗಾ ವ್ಯಾಟ್ ಕೊರತೆ ಇದೆ. ಇದನ್ನು ಭರಿಸಲು ಆ ರಾಜ್ಯದಿಂದ ಖರೀದಿ ಮಾಡುತ್ತೇವೆ ಈ ರಾಜ್ಯದಿಂದ ಖರೀದಿ ಮಾಡುತ್ತೇವೆ ಕಳೆದ ಮೂರು ತಿಂಗಳಿನಿಂದ ಹೇಳಲಾಗುತ್ತಿದೆ. ಆದರೆ, ಖರೀದಿ ಮಾತ್ರ ಆಗಿಲ್ಲ, ಅದಕ್ಕೆ ಕಾರಣ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ದೂರಿದರು.
ರೈತರ ಮೇಲೆ ಕಾಳಜಿಯಿಲ್ಲದ ಸರ್ಕಾರ ಒಂದು ಕಡೆ ಬೆಲೆ ಏರಿಕೆ ಮತ್ತು ವಿದ್ಯುತ್ತು ಪೂರೈಕೆ ಕೊರತೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.ಇಂತಹ ಸಂದರ್ಭದಲ್ಲಿ ರೈತರ ಸಹಾಯಕೆ ಬರಬೇಕಿದ್ದ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಅಲ್ಲಿಂದ ಪರಿಹಾರ ಬಂದಿಲ್ಲ ಎಂದು ಹೇಳುತಿದೆ. ಅಗಾದರೆ ರಾಜ್ಯ ಸರ್ಕಾರಕ್ಕೆ ಜವಾದ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.
ಬರ ಪರಸ್ಥಿಯನ್ನು ಸರಿದೂಗಿಸಲು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಳ್ಳಬಹುದಿತ್ತು, ಆದರೆ ಸರ್ಕಾರದ ಬಳಿ ರಾಜ್ಯದ ಪಾಲು ತುಂಬಲು ಹಣವಿಲ್ಲದೆ ಎಲ್ಲ ಯೋಜನೆಗಳನ್ನು ಕೈ ಬಿಟ್ಟಿದೆ. ಕೇಂದ್ರದ ಹೊಸ ನೀತಿ ಪ್ರಕಾರ ರಾಜ್ಯದ ಪಾಲು ತುಂಬಿದ ನಂತರವೇ ಕೇಂದ್ರದ ಪಾಲು ಬಿಡುಗಡೆಯಾಗುತ್ತದೆ.ಅದರಿಂದ ಆ ಯೋಜನೆಗಳನ್ನು ಸರ್ಕಾರ ಕೈ ಬಿಟ್ಟಿದೆ ಎಂದು ಆಪಾದಿಸಿದರು.
ಕಬ್ಬು ಬೆಳೆಗಾರರಿಗೆ ವಿಶೇಷ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಒಂದು ಎಕರೆ ಕಬ್ಬು ಬೆಳೆಗೆ 25 ರಿಂದ 30 ಸಾವಿರ, ದ್ರಾಕ್ಷಿ ಬೆಳೆಗಾರರಿಗೆ 45 ರಿಂದ 50 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು