ಬೆಂಗಳೂರು – ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಗಳ ಭರವಸೆಯನ್ನು ಒಂದೊಂದಾಗಿ ಈಡೇರಿಸುತ್ತಾ ಬರಲಾಗುತ್ತಿದೆ.
ಯಾವುದೇ ಸಮುದಾಯ,ವರ್ಗ ಎಂಬ ತಾರತಮ್ಯವಿಲ್ಲದೆ ಮಾಸಿಕ ಸರಾಸರಿ ಇನ್ನೂರು ಯೂನಿಟ್ ವಿದ್ಯುತ್ ಬಳಸುವ ಎಲ್ಲಾ ಗೃಹ ಬಳಕೆ ವಿದ್ಯುತ್ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಜಾರಿಗೆ ಬರುತ್ತಿದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ತರುವ ಈ ಯೋಜನೆ ಅತಿ ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ ವರದಾನವಾಗಲಿದೆ.
ವಾರ್ಷಿಕ ಹದಿಮೂರು ಸಾವಿರ ಕೋಟಿ ರೂಪಾಯಿ ಸರ್ಕಾರಕ್ಕೆ ಹೊರೆಯಾಗಲಿರುವ ಈ ಯೋಜನೆಯಿಂದ ಜನ ಸಾಮಾನ್ಯರಿಗೆ ದೊಡ್ಡ ಲಾಭ ತರಲಿದೆ.ಇದರಿಂದ ಉಳಿಯುವ ಹಣವನ್ನು ಗ್ರಾಹಕರು ಬೇರೆ ವಲಯದಲ್ಲಿ ಹೂಡಿಕೆ ಮಾಡುವುದರಿಂದ ಪರೋಕ್ಷವಾಗಿ ಸರ್ಕಾರದ ಆದಾಯ ಹೆಚ್ಚಳವಾಗಲಿದೆ.
ಇದೆಲ್ಲಾ ಲೆಕ್ಕಾಚಾರ ಒಂದು ಕಡೆ ಇರಲಿ ಈ ಯೋಜನೆಯ ಲಾಭ ಹೇಗೆ ಪಡೆಯಬೇಕು,ಅದಕ್ಕಾಗಿ ಎನು ಮಾಡಬೇಕು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.ಇದಕ್ಕೆ ವಿದ್ಯುತ್ ಇಲಾಖೆ ಅತ್ಯಂತ ಸರಳವಾದ ಪರಿಹಾರ ಕಲ್ಪಿಸಿದೆ.
ಗೃಹ ಜ್ಯೋತಿ ಯೋಜನೆ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಯೋಜನೆಯಾಗಿದೆ, ಕರ್ನಾಟಕ ರಾಜ್ಯದ ಎಲ್ಲಾ ಗೃಹ ವಿದ್ಯುತ್ ಬಳಕೆದಾರರು ಈ ಯೋಜನೆಗೆ ಅರ್ಹರು, ಈ ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆ ಹೇಗೆ? ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ.
ಅರ್ಜಿ ಸಲ್ಲಿಸುವ ಮುನ್ನ ಇದಕ್ಕಾಗಿ ನಿಮಗೆ
ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದರೆ, ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಬಾಡಿಗೆದಾರರ ದಾಖಲಾತಿ, ಬಾಡಿಗೆ ಅಥವಾ ಭೋಗ್ಯದ ಕರಾರು ಪತ್ರ,ಮತದಾರರ ಗುರುತಿನ ಚೀಟಿಯೊಂದಿಗೆ
ಸ್ಮಾರ್ಟ್ ಫೋನ್ ಅಥವಾ ಲಾಪ್ ಟಾಪ್, ಕಂಪ್ಯೂಟರ್ ಮೂಲಕ ಸೇವಾಸಿಂಧು ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಳ್ಳಬೇಕು,
ಇದಕ್ಕೆ ಯಾವುದೇ ಶುಲ್ಕ ಪಾವತಿಯ ಅಗತ್ಯ ಇಲ್ಲ.ಆದರೆ ನೀವು ಸೌಲಭ್ಯ ಪಡೆಯುವ ಮೀಟರ್ ಗೆ ಸಂಬಂಧಿಸಿದಂತೆ ಇರುವ ಬಾಕಿ ಬಿಲ್ ಜೂನ್ 30 ರ ಒಳಗಾಗಿ ಪಾವತಿ ಮಾಡಬೇಕು
ಸೇವಾಸಿಂಧು ಮಾತ್ರವಲ್ಲದೆ ನಾಗರೀಕರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ನಂತರ ಎಸ್ ಎಂ ಎಸ್ ಅಥವಾ ಇಮೇಲ್ ಮೂಲಕ ರಶೀದಿ ಸಿಗಲಿದೆ
ಈ ಯೋಜನೆಯ ಅರ್ಜಿ ನಮೂನೆ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಜೂನ್ 15 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.
ಆಗಸ್ಟ್ 1,2023 ರಿಂದ ಜಾರಿಗೆ ಬರಲಿದೆ.
ಗೃಹಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ?
Previous ArticleLiquor rate ಹೆಚ್ಚಳ ಮಾಡಬೇಡಿ, please!
Next Article ಬಾಡಿಗೆ ಮನೆ ನಿವಾಸಿಗಳಿಗೆ ಸಚಿವ ಜಾರ್ಜ್ ಪರಿಹಾರ