ಹಮಾಸ್ (Hamas) ಗಾಜಾ ಪಟ್ಟಿಯನ್ನು ಆಳುವ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಉಗ್ರಗಾಮಿ ಗುಂಪು. ಹಮಾಸ್ ಇಸ್ರೇಲ್‌ನ ವಿನಾಶಕ್ಕೆ ಪ್ರತಿಜ್ಞೆ ಮಾಡಿರುವ ಸಂಘಟನೆ. ಅದು 2007 ರಲ್ಲಿ ಗಾಜಾದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇಸ್ರೇಲ್‌ನೊಂದಿಗೆ ಹಲವಾರು ಯುದ್ಧಗಳನ್ನು ಮಾಡಿದೆ.
ಆ ಯುದ್ಧಗಳ ನಡುವೆ, ಹಮಾಸ್ ಇಸ್ರೇಲ್‌ನ ಮೇಲೆ ಆಗಾಗ ಸಾವಿರಾರು ರಾಕೆಟ್‌ಗಳನ್ನು ಹಾರಿಸಿ ದಾಳಿ ಮಾಡಿದೆ. ಇತರ ಅನೇಕ ಉಗ್ರಗಾಮಿ ಗುಂಪುಗಳು ಇಸ್ರೇಲ್ ಮೇಲೆ ದಾಳಿ ಮಾಡಲು ಹಮಾಸ್ ಸಹಕಾರ ನೀಡಿದೆ ಮತ್ತು ಅಂಥಾ ದಾಳಿಗಳಿಗೆ ತನ್ನ ಪ್ರದೇಶದಲ್ಲಿ ಅನುಮತಿ ನೀಡಿದೆ. ಹಾಗೆಯೇ ಇಸ್ರೇಲ್ ಕೂಡ ಹಮಾಸ್ ಮೇಲೆ ವಾಯುದಾಳಿಗಳ ಪದೇ ಪದೇ ನಡೆಸಿದೆ. ಇಸ್ರೇಲ್ ಈಜಿಪ್ಟ್ ಜೊತೆಗೂಡಿ 2007 ರಿಂದ ಗಾಜಾ ಪಟ್ಟಿಯನ್ನು ತನ್ನ ಭದ್ರತೆಗಾಗಿ ದಿಗ್ಬಂಧನ ಮಾಡಿದೆ.
ಇಸ್ರೇಲ್, ಅಮೇರಿಕಾ, ಯುರೋಪಿಯನ್ ಯೂನಿಯನ್, ಯುಕೆ ಮತ್ತು ಇತರ ದೇಶಗಳು ಹಮಾಸ್ ಮತ್ತು ಅದರ ಮಿಲಿಟರಿ ಅಂಗವನ್ನು ಭಯೋತ್ಪಾದಕ ಶಕ್ತಿಗಳು ಎಂದು ಗೊತ್ತುಪಡಿಸಿವೆ. ಹಮಾಸ್ ಇರಾನ್‌ನಿಂದ ಬೆಂಬಲಿಸಲ್ಪಟ್ಟಿದೆ. ಇತ್ತೀಚಿನ ದಾಳಿಯಲ್ಲಿ ಅದಕ್ಕೆ ಸಿರಿಯಾ ಮತ್ತು ಪಾಕಿಸ್ತಾನ ದೇಶಗಳ ಬೆಂಬಲವೂ ದೊರಕಿದೆ.ಇರಾನ್ ದೇಶ ಹಮಾಸ್ ಗೆ ಹಣದ ಸಂಪನ್ಮೂಲ ಒದಗಿಸುವುದು ಮಾತ್ರವಲ್ಲದೆ ಶಸ್ತ್ರಾಸ್ತ್ರ ಮತ್ತು ತರಬೇತಿಯನ್ನೂ ನೀಡುತ್ತಾ ಬಂದಿದೆ.