ಬೆಂಗಳೂರು
BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ CT Ravi ವಿರುದ್ಧ ಸ್ವ ಪಕ್ಷೀಯರೆ ಬಂಡಾಯ ಸಾರಿದ್ದು, ಅವರ ವಿರುದ್ಧ ಸ್ಪರ್ಧೆಗೆ ಅಣಿಯಾಗಿದ್ದು, Congress ಸೇರ್ಪಡೆಯಾಗಿದ್ದಾರೆ.
CT Ravi ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ BJP ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಎಚ್.ಡಿ. ತಮ್ಮಯ್ಯ (HD Thammaiah) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಸಂಯೋಜಕ ಸ್ಥಾನಕ್ಕೆ ರಾಜೀನಾಮೆ ನೀಡಿ Congress ಸೇರ್ಪಡೆಯಾದರು.

ಬೆಂಗಳೂರಿನ KPCC ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಚ್ ಡಿ ತಮ್ಮಯ್ಯ ಹಾಗೂ ಅವರ ಅಸಂಖ್ಯ ಬೆಂಬಲಿಗರು KPCC ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ KPCC ಉಪಾಧ್ಯಕ್ಷ ಡಾ. ಬಿ.ಎಲ್. ಶಂಕರ್ (BL Shankar), ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಜೆ. ಹುಚ್ಚಯ್ಯ, ಚಿಕ್ಕಮಗಳೂರು ಮುಖಂಡರಾದ ಮಂಜೇಗೌಡ, ಹನೀಫ್, ನಯಾಜ್ ಮತ್ತಿತರರು ಉಪಸ್ಥಿತರಿದ್ದರು.
ಲಿಂಗಾಯತ ಸಮುದಾಯಕ್ಕೆ ಸೇರಿದ ತಮ್ಮಯ್ಯ ಅವರು BJP ಯಲ್ಲಿ 2007ರಿಂದ ಜಿಲ್ಲಾ ವಕ್ತಾರ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ನಗರಸಭೆ ಅಧ್ಯಕ್ಷರೂ ಆಗಿದ್ದರು.


1 ಟಿಪ್ಪಣಿ
Ignite your luck — the fire is already burning – http://calcitriolc.com/mostbet-casino-sk-2026-recenzia-a-skusenosti-z-praxe/ , Where fortune meets fire — and you’re in the middle .