ಮೈಸೂರು : ಮೈಸೂರು ಜಿಲ್ಲೆ ನಂಜನಗೂಡಿನ ಕಪಿಲಾ ನದಿಗೆ ಕಬಿನಿ ಜಲಾಶಯದಿಂದ 38000 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಟ್ಟ ಹಿನ್ನೆಲೆ ಪ್ರವಾಹ ಭೀತಿ ಎದುರಾಗಿದೆ. ಕೇರಳಾದ ವೈಯನಾಡಿನಲ್ಲಿ ಜೋರು ಮಳೆಯಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು, ಈ ಹಿನ್ನಲೆ ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ನಂಜನಗೂಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಪಿಲಾ ನದಿ ಪಾತ್ರದಲ್ಲಿ ಹೆಚ್ಚಿದ ಪ್ರವಾಹ ಭೀತಿ ಎದುರಾಗಿದೆ .ನದಿಯತ್ತ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡುಗಡೆ ಮಾಡಿರುವ ಹಿನ್ನೆಲೆ ನಂಜುಂಡೇಶ್ವರನ ಭಕ್ತರು, ಸಾರ್ವಜನಿಕರ ನದಿ ಪ್ರವೇಶ ಬಂದ್ ಮಾಡಲಾಗಿದೆ. ನದಿಗೆ ಪ್ರವೇಶ ಮಾಡದಂತೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ನಂಜನಗೂಡಿನಲ್ಲಿ ಕಪಿಲಾ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿ, ಬ್ಯಾರಿಕೇಡ್ ಅಳವಡಿಸಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಏರ್ಪಡಿಸಲಾಗಿದೆ. ಸ್ನಾನಘಟ್ಟ, ಮುಡಿಕಟ್ಟೆ, ಮಂಟಪಗಳು ಭಾಗಶಃ ಮುಳುಗಡೆಯಾಗಿದ್ದು, ಕಪಿಲೆಗೆ ತೆರಳುವ ದಾರಿಗಳನ್ನೆಲ್ಲಾ ಬಂದ್ ಮಾಡಿರುವ ದೇವಸ್ಥಾನದ ಆಡಳಿತ ಮಂಡಳಿ ಸೂಕ್ತ ಬಂದೋಬಸ್ತ್ ಒದಗಿಸಿದೆ.
ಕೇರಳಾದ ವೈಯನಾಡಿನಲ್ಲಿ ಜೋರು ಮಳೆ : ಕಬಿನಿ ಜಲಾಶಯ ಭರ್ತಿ
Previous Articleಸಿನೆಮಾ ರೀತಿಯಲ್ಲಿ ಜ್ಯೋತಿಷಿ ಮನೆಗೆ ನುಗ್ಗಿ ದರೋಡೆ…!!
Next Article ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು, ವ್ಯಕ್ತಿ ಪತ್ತೆ