ಹಾಲಿವುಡ್ ಸಾರ್ವಕಾಲಿಕ ಚಿತ್ರಗಳ ಪೈಕಿ ಟೈಟಾನಿಕ್ ಗೆ ಅಗ್ರಸ್ಥಾನ ಇದೆ. 1997ರಲ್ಲಿ ತೆರೆಗೆ ಬಂದ ಟೈಟಾನಿಕ್ ಈಗ ಮತ್ತೆ ರಿಲೀಸ್ ಆಗುತ್ತಿದೆ. ಟೈಟಾನಿಕ್ 2023ರಪ್ರೇಮಿಗಳ ದಿನದಂದು ಇಂದಿನ ತಂತ್ರಜ್ಞಾನಕ್ಕೆ ಅಪ್ ಗ್ರೇಡ್ ಆಗೋದು ರೊಂದಿಗೆ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ. ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಚಲನಚಿತ್ರವು 3D 4K HDR ಮತ್ತು ಹೆಚ್ಚಿನ ಫ್ರೇಮ್-ರೇಟ್‌ನಲ್ಲಿ ಥಿಯೇಟರ್ ಗಳಿಗೆ ಬರಲಿದೆ. ಇದಕ್ಕೆ ರಿಮಾಸ್ಟರ್ಡ್ ಎನ್ನಲಾಗುತ್ತದೆ ಕನ್ನಡದಲ್ಲಿ ನಾಗರಹಾವು, ಗಂಧದ ಗುಡಿ ಸಿನಿಮಾಗಳು ಈ ರೀತಿ ಬಿಡುಗಡೆ ಆಗಿದ್ದವು. ವಿದೇಶಗಳಲ್ಲಿ ಡಿಸ್ನಿ ಸಿನಿಮಾ ಬಿಡುಗಡೆ ಜವಾಬ್ದಾರಿ ಹೊತ್ತಿದೆ ದೇಶೀ ಹಕ್ಕುಗಳನ್ನು ಹೊಂದಿರುವ ಪ್ಯಾರಾಮೌಂಟ್ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸುವ ನಿರೀಕ್ಷೆಯಿದೆ. ಜೇಮ್ಸ್ ಕ್ಯಾಮರೂನ್-ನಿರ್ದೇಶನದ ಆಸ್ಕರ್-ವಿಜೇತ ಡ್ರಾಮಾ ಪ್ರೇಮಿಗಳ ದಿನಕ್ಕೆ ಸಿಗುತ್ತಿರೋ ದೊಡ್ಡ ಗಿಫ್ಟ್ ಎನ್ನಲಾಗ್ತಿದೆ.
Previous Articleಅಪರಾಧದ ಸುತ್ತ ‘ಸ್ಪೂಕಿ’
Next Article ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು