ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸುತ್ತಿದ್ದ ಪತಿರಾಯ ಪತ್ನಿಯ ರುಂಡಮುಂಡ ಬೇರೆ ಮಾಡಿ ಭೀಕರವಾಗಿ ಕೊಲೆ ಮಾಡಿದ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟಮ್ಮ(40) ಮೃತ ದುರ್ದೈವಿ.ಪತಿ ದೇವರಾಜ್ ಬಂಧನಕ್ಕೆ ವರುಣಾ ಪೊಲೀಸರು ಜಾಲ ಬೀಸಿದ್ದಾರೆ.ಮೊದಲ ಹೆಂಡತಿಯನ್ನೂ ಸಹ ಕೊಲೆ ಮಾಡಲು ಯತ್ನಿಸಿ ಜೈಲು ವಾಸ ಅನುಭವಿಸಿದ್ದ ದೇವರಾಜ್ ಎರಡನೇ ಪತ್ನಿಯನ್ನ ಬಲಿ ತೆಗೆದುಕೊಂಡಿದ್ದಾನೆ.ಮೊದಲ ಹೆಂಡತಿಯಿಂದ ದೂರವಾದ ದೇವರಾಜ್ 21 ವರ್ಷಗಳ ಹಿಂದ ಪುಟ್ಟಮ್ಮಳನ್ನ ಎರಡನೇ ವಿವಾಹವಾಗಿದ್ದ.ಎರಡನೇ ಮದುವೆ ಆದರೂ ಪುಟ್ಟಮ್ಮಳ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. 20 ವರ್ಷದ ಮಗಳಿದ್ದರೂ ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ.ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳ ಹೆಚ್ಚಾಗಿತ್ತು.ಮಗಳು ಪವಿತ್ರ ಕಾಲೇಜಿಗೆ ಹೋಗಿದ್ದ ವೇಳೆ ಇದೇ ವಿಚಾರಕ್ಕೆ ಕ್ಯಾತೆ ತೆಗೆದ ದೇವರಾಜ್ ಪತ್ನಿಯನ್ನ ಭೀಕರವಾಗಿ ಕೊಂದಿದ್ದಾನೆ.ರುಂಡ ಮುಂಡವನ್ನ ಬೇರ್ಪಡಿಸಿ ಆಕ್ರೋಷ ತೀರಿಸಿಕೊಂಡಿದ್ದಾನೆ.ದೇವರಾಜ್ ವಿರುದ್ದ ಮಗಳು ಪವಿತ್ರ ದೂರು ನೀಡಿದ್ದಾಳೆ.ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ…