ಚೆನ್ನೈ: ಆಸ್ಪತ್ರೆಗೆ ದಾಖಲಾಗುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದ ನಟ ವಿಕ್ರಮ್ ಅವರು ಈಗ ಸಂಪೂರ್ಣ ಚೇತರಿಸಿಕೊಳ್ಳುವ ಮೂಲಕ ಶೀಘ್ರದಲ್ಲೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.ಶುಕ್ರವಾರ ಸಂಜೆ ವಿಕ್ರಮ್ ನಟನೆಯ ಪೊನ್ನಿಯನ್ ಸೆಲ್ವಂ ಭಾಗ1 ಚಿತ್ರದ ಟೀಸರ್ ಬಿಡುಗಡೆ ಮಾಡಬೇಕಿತ್ತು.
ವಿಕ್ರಮ್ ಅನಾರೋಗ್ಯದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.ಆದರೆ ಅವರ ನಟನೆಯ ಮತ್ತೊಂದು ಚಿತ್ರ ಕೋಬ್ರಾ ಆಡಿಯೋ ಬಿಡುಗಡೆ ವೇಳೆ ವಿಕ್ರಮ್ ಭಾಗಿಯಾಗಲಿದ್ದಾರೆ ಎಂದು ಈ ಚಿತ್ರದ ನಿರ್ದೇಶದ ಅಜಯ್ ಗಣಮುತ್ತು ಹೇಳಿದ್ದಾರೆ.