Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಂಡ್ಯ ಮುಸ್ಕಾನ್ ಬೆಂಬಲಿಸಿದ್ದ ಅಲ್-ಖೈದಾ ಮುಖ್ಯಸ್ಥ ಜವಾಹಿರಿ ಇನ್ನಿಲ್ಲ
    ಅಂತಾರಾಷ್ಟ್ರೀಯ

    ಮಂಡ್ಯ ಮುಸ್ಕಾನ್ ಬೆಂಬಲಿಸಿದ್ದ ಅಲ್-ಖೈದಾ ಮುಖ್ಯಸ್ಥ ಜವಾಹಿರಿ ಇನ್ನಿಲ್ಲ

    vartha chakraBy vartha chakraಆಗಷ್ಟ್ 2, 2022Updated:ಮಾರ್ಚ್ 20, 2023ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿರುವ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಕೊಲೆಯಾಗಿದ್ದಾರೆ ಎಂದು ಸೋಮವಾರ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವಿಟ್ಟರ್‌ನಲ್ಲಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ. ‘ಜುಲೈ 31ರಂದು ಕಾಬೂಲ್ ನಗರದ ಶೇರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಲಾಯಿತು,’ ಎಂದು ಹೇಳಿದ್ದಾರೆ. ಇತ್ತ  ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ  ಕುರಿತು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನಡೆಸಿದ ವೈಮಾನಿಕ ದಾಳಿಯಲ್ಲಿ ಶನಿವಾರ ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ ಸಾವನ್ನಪ್ಪಿದ್ದಾನೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ‘ಶನಿವಾರ, ನನ್ನ ನಿರ್ದೇಶನದ ಮೇರೆಗೆ, ಯುನೈಟೆಡ್ ಸ್ಟೇಟ್ಸ್ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ವೈಮಾನಿಕ ದಾಳಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು ಮತ್ತು ಅಲ್ ಖೈದಾದ ಅಮೀರ್ ಅಯ್ಮಾನ್ ಅಲ್-ಜವಾಹಿರಿಯನ್ನು ಕೊಂದಿತು’ ಎಂದು ಬೈಡನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
    ಇನ್ನು ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕದಲ್ಲಿದ್ದಾಗ ಇದೇ ಅಲ್ ಖೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಪ್ರತಿಕ್ರಿಯಿಸಿ ಭಾರತೀಯ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದ ಮಾತ್ರವಲ್ಲದೆ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮುಸ್ಕಾನ್ ಖಾನ್‍ನ್ನು ಹೊಗಳಿದ್ದ.
    9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರರ ದಾಳಿಯ ಮಾಸ್ಟರ್ ಮೈಂಡ್‌ ಈತನೇ ಎಂದು ಹೇಳಲಾಗಿತ್ತು. ಹತ್ತಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜವಾಹಿರಿ, ಕೀನ್ಯಾ, ತಾಂಜೇನಿಯಾದ ಅಮೆರಿಕ ರಾಯಭಾರ ಕಚೇರಿಗಳ ಮೇಲೆಯೂ ದಾಳಿ ಸಂಘಟಿಸಿದ್ದ. ಜವಾಹಿರಿ ಹತ್ಯೆಗೆ ಕಳೆದ 6 ತಿಂಗಳುಗಳಿಂದ ಅಮೆರಿಕ ಗೌಪ್ಯವಾಗಿ ಯೋಜನೆ ರೂಪಿಸಿತ್ತು. ಜವಾಹಿರಿಗೆ ತಾಲಿಬಾನ್​ ನಾಯಕ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್​ನಲ್ಲಿ ಆಶ್ರಯ ನೀಡಿದ್ದ. ಹಲವು ಮೂಲಗಳಿಂದ ಮಾಹಿತಿ ಕಲೆಹಾಕಿದ್ದ ಅಮೆರಿಕ ಡ್ರೋಣ್ ಮೂಲಕ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಅಲ್​ ಜವಾಹಿರಿಯನ್ನು ಹತ್ಯೆ ಮಾಡಿದೆ.

    alkhaida chief jawahiri Internantional News ಉಗ್ರ ಕಲೆ ಕೊಲೆ ವಾಣಿಜ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಗೃಹ ಸಚಿವರಿಗಾಗಿ ತುಮಕೂರು ನಗರದಲ್ಲಿ ಜೀರೋ ಟ್ರಾಫಿಕ್ : ಕಾಟಾಚಾರಕ್ಕೆ ಹಾನಿ ಪ್ರದೇಶಗಳಿಗೆ ಭೇಟಿ
    Next Article ಅಂಗನವಾಡಿಯಲ್ಲಿ ಕುಕ್ಕರ್ ಸ್ಫೋಟ : ಕಾರ್ಯಕರ್ತೆಗೆ ಗಾಯ
    vartha chakra
    • Website

    Related Posts

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಜನವರಿ 4, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    ಜನವರಿ 4, 2026

    ಪರಪ್ಪನ ಅಗ್ರಹಾರದಲ್ಲಿ ಉಗ್ರ ಚಟುವಟಿಕೆ

    ಜನವರಿ 3, 2026

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?

    Alcohol ಇಲ್ಲದೆ ಪಾರ್ಟಿ ನಡೆಯುತ್ತಾ?

    ಐಪಿಎಲ್‌ಗೂ ತಟ್ಟಿದ ಬಾಂಗ್ಲಾ ಸಂಘರ್ಷದ ಕಿಚ್ಚು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Stanleyusema ರಲ್ಲಿ ಜನರ ನಡುವೆ ಕೆಲಸ ಮಾಡಲು ‘ಸಮೂಹಶಕ್ತಿ’ ಸಂಕಲ್ಪ | Samooha Shakti
    • Robertrag ರಲ್ಲಿ ಗುರಪ್ಪ ನಾಯ್ಡುಗೆ ಕೆಪಿಸಿಸಿ ಗೇಟ್ ಪಾಸ್.
    • nohu90 ರಲ್ಲಿ ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    Latest Kannada News

    ಸಿನಿಮಾ ಥಿಯೇಟರ್ Toilet ಬಗ್ಗೆ ಹುಷಾರ್!

    ಜನವರಿ 6, 2026

    ಬಳ್ಳಾರಿ ಎಸ್. ಪಿ. Suspend ಆಗಿದ್ದು ಯಾಕೆ ಗೊತ್ತಾ?

    ಜನವರಿ 6, 2026

    Alcohol ಇಲ್ಲದೆ ಪಾರ್ಟಿ ನಡೆಯುತ್ತಾ?

    ಜನವರಿ 5, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.