ಚೆನ್ನೈ( ತಮಿಳುನಾಡು),ಆ.13- ಇಥಿಯೋಪಿಯಾದಿಂದ ನಗರದ ವಿಮಾನದ ಮೂಲಕ ಭಾರಿ ಪ್ರಮಾಣದ
ಮಾದಕ ವಸ್ತು ಹೆರಾಯಿನ್ ಸಾಗಿಸುತ್ತಿದ್ದ ಖದೀಮನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನಿಂದ 100 ಕೋಟಿ
ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ನಗರಕ್ಕೆ ಬಂದಿಳಿದ ಇಥಿಯೋಪಿಯನ್ ಏರ್‌ಲೈನ್ಸ್ ಪ್ರಯಾಣಿಕರನ್ನು ಪರಿಶೀಲಿಸಲಾಯಿತು. ಈ ವೇಳೆ, ಆಫ್ರಿಕನ್ ದೇಶಗಳ ಪ್ರಯಾಣಿಕರನ್ನು ವಿಶೇಷವಾಗಿ ಸೂಕ್ಷ್ಮವಾಗಿ ಗಮನಿಸಲಾಯಿತು. ಆದರೆ, ಅವರಿಂದ ಯಾವುದೇ ಡ್ರಗ್ಸ್ ಪತ್ತೆಯಾಗಲಿಲ್ಲ.
ಆದರೆ ಆಫ್ರಿಕಾದಿಂದ ಚೆನ್ನೈಗೆ ಬಂದಿದ್ದ ಇಕ್ಬಾಲ್ ಪಾಷಾ (38) ಎಂಬ ಭಾರತೀಯ ಪ್ರಯಾಣಿಕನ ಮೇಲೆ ಅಧಿಕಾರಿಗಳು ಅನುಮಾನಗೊಂಡು ಆತನನ್ನು ತಡೆದು ವಿಚಾರಣೆ ನಡೆಸಿದರು. ಆಗ ಆತ ಕಸ್ಟಮ್ ಅಧಿಕಾರಿಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಬಳಿಕ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು.
ಆತನ ಬಟ್ಟೆ, ಒಳ ಉಡುಪು, ಶೂ ಸೇರಿದಂತೆ ವಿವಿಧೆಡೆ ಒಟ್ಟು 9 ಕೆಜಿ 590 ಗ್ರಾಂ ಕೊಕೇನ್ ಮತ್ತು ಹೆರಾಯಿನ್ ಇರುವುದು ಕಂಡು ಬಂತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 100 ಕೋಟಿ ಹೆಚ್ಚಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
1932ರಲ್ಲಿ ಚೆನ್ನೈ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಒಬ್ಬ ಪ್ರಯಾಣಿಕನಿಂದ 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವುದು ಇದೇ ಮೊದಲು. 100 ಕೋಟಿ ಮೌಲ್ಯದ ಈ ಮಾದಕ ವಸ್ತುವನ್ನು ಭಾರತಕ್ಕೆ ತಂದು ಎಲ್ಲೆಂದರಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ.
Previous Articleಮನೆ ಬಾಗಿಲಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ಅಟ್ಯಾಕ್
Next Article Honey Trap ನಲ್ಲಿ ಸ್ಯಾಂಡಲ್ ವುಡ್ ನಟ..