ಶ್ರೀನಗರ,ಜು.27-ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಭಯೋತ್ಪಾದಕರು ಹಾಗು ಭದ್ರತಾ ಪಡೆಗಳ ನಡುವೆ ನಡೆದ ಎನ್‍ಕೌಂಟರ್‌ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಯ ಸಿಬ್ಬಂದಿಯು ಭಯೋತ್ಪಾದಕರಿದ್ದ ಕುಲ್ಗಾಮ್ ಸ್ಥಳಕ್ಕೆ ಪ್ರವೇಶಿಸಿ ಗುಂಡಿನ ದಾಳಿ ಪ್ರಾರಂಭಿಸಿದ್ದು ಎದುರಾಳಿ ಕಡೆಯಿಂದಲೂ ಗುಂಡು ಹಾರಿಸಲಾಗಿದ್ದು, ಈ ವೇಳೆ 34 ಆರ್‌ಆರ್‌ನ ಸೇನಾ ಯೋಧ ಜೈ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಯರಿಪೋರಾದ ಬ್ರೈಹಾರ್ಡ್ ಕಥ್ಪೋರಾ ಪ್ರದೇಶದಲ್ಲಿ ಎನ್‍ಕೌಂಟರ್ ನಡೆಯಿತು. ಈ ವೇಳೆ 2 ರಿಂದ 3 ಉಗ್ರರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.