ಬಾಲಿವುಡ್ ನ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ನಟಿ ಮಲ್ಲಿಕಾ ಶೆರಾವತ್ ಸದ್ಯ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಅನೇಕ ವರ್ಷಗಳು ಚಿತ್ರರಂಗದಿಂದ ದೂರ ಸರಿದಿದ್ದ ನಟಿ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವೃತ್ತಿ ಜೀವನದಲ್ಲಿ ತರಹೇವಾರಿ ಪಾತ್ರಗಳನ್ನು ನಿರ್ವಹಿಸಿರುವ ಮಲ್ಲಿಕಾ ಸಹ ಕಲಾವಿದರನ್ನು ಕಂಗೆಡಿಸಿದ್ದರು. ಇದೀಗ ನಟಿ ಬಾಲಿವುಡ್ ಕರಾಳ ಮುಖ ಬಿಡಿಸಿಟ್ಟಿದ್ದಾರೆ. ಬಾಲಿವುಡ್ ಎ ಗ್ರೇಡ್ ನಟರ ವಿರುದ್ಧ ಗಂಭೀರ ಆರೋಪ ಮಾಡಿರೋ ನಟಿ. ‘ಬಾಲಿವುಡ್ ನಟರು, ನಟಿಯರನ್ನು ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ’ ಎಂದಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ ಮಾತನಾಡಿ ಮಲ್ಲಿಕಾ ಎಲ್ಲ ಎ ಗ್ರೇಡ್ ನಟರು ನನ್ನೊಟ್ಟಿಗೆ ನಟಿಸಲು ನಿರಾಕರಿಸಿದರು. ಕಾರಣ ನಾನು ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ. ನಟರಿಗೆ ಅವರು ನಿಯಂತ್ರಿಸಬಲ್ಲ ನಟಿಯರುಬೇಕು. ಅವರು ಹೇಳಿದಂತೆ ಕೇಳಬೇಕು, ಅವರೊಟ್ಟಿಗೆ ಕಾಂಪ್ರಮೈಸ್ ಮಾಡಿಕೊಳ್ಳಬೇಕು ಆದರೆ ನಾನು ಅದಕ್ಕೆ ತಯಾರಿರಲಿಲ್ಲ, ನನ್ನ ವ್ಯಕ್ತಿತ್ವ ಅಂಥಹದ್ದಲ್ಲ.’ ಎಂದಿದ್ದಾರೆ ಮುಂದುವರಿದು ‘ನಾಯಕ ಮಧ್ಯ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬಾ ಎಂದರೆ ಹೋಗಬೇಕು. ನೀವು ಆತನೊಟ್ಟಿಗೆ ಸಿನಿಮಾ ಮಾಡುತ್ತಿದ್ದರೆ ನೀವು ಅವನು ಕರೆದಲ್ಲಿಗೆ ಹೋಗಲೇ ಬೇಕು ಇಲ್ಲವಾದರೆ ನಟಿಯನ್ನು ಸಿನಿಮಾದಿಂದ ಹೊರಗೆ ಹಾಕಲಾಗುತ್ತದೆ’ ಎಂದಿದ್ದಾರೆ. ‘ಯಾವ ನಟಿ ತಮ್ಮೊಂದಿಗೆ ಬೆರೆಯುತ್ತಾರೆ, ಯಾವ ನಟಿಯನ್ನು ತಾವು ಕಂಟ್ರೋಲ್ ಮಾಡಬಹುದು ಎಂದು ನೋಡುವ ಮೂಲಕ ನಟರು ಆ ರೀತಿಯ ನಟಿಯರನ್ನು ಇಷ್ಟಪಡುತ್ತಾರೆ. ಆದರೆ ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ಹೀಗಾಗಿ ನನಗೆ ಟಾಪ್ ನಟನರುಗಳ ಜೊತೆ ತೆರೆಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಅವರೊಂದಿಗೆ ಕಾಂಪ್ರಮೈಸ್ ಆಗಲಿಲ್ಲ‘ ಎಂದು ಮಲ್ಲಿಕಾ ಹೇಳಿದ್ದಾರೆ.
2002ರಲ್ಲಿ ಮಲ್ಲಿಕಾ ಶೆರಾವತ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 2004ರ ‘ಮರ್ಡರ್’ ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು. ಈಗ ಮಲ್ಲಿಕಾ ಶೆರಾವತ್ ನಟಿಸಿರುವ ‘ಆರ್‌ಕೆ/ಆರ್ಕೆ’ ಸಿನಿಮಾ ಬಿಡುಗಡೆ ಆಗಲಿದ್ದು, ಈ ಸಂಬಂಧ ಮಾಧ್ಯಮಗಳೊಟ್ಟಿಗೆ ಸಂದರ್ಶನ ನೀಡಿದ್ದಾರೆ.
ಸಂಗ್ರಹಗಳು
- ಏಪ್ರಿಲ್ 2026
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022

