ಹೈದರಾಬಾದ್- ಆನ್‌ಲೈನ್ ಲೋನ್ ಆ್ಯಪ್‌ಗಳ ಸಂಘಟಕರು ಎರವಲು ಪಡೆದ ಹಣವನ್ನು ಮರುಪಾವತಿಸುವಂತೆ ಕಿರುಕುಳ ನೀಡಿದ್ದರಿಂದ ನಗರದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ.
ನಗರದ ಅಗ್ನಿಶಾಮಕ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಅಗ್ನಿಶಾಮಕ ಸಿಬ್ಬಂದಿ ತ್ವರಿತ ಸಾಲದ ಅಪ್ಲಿಕೇಶನ್‌ಗಳಿಂದ ಸಾಲ ಪಡೆದಿದ್ದರು. ಆದರೆ, ಕೆಲವು ಹಣಕಾಸಿನ ಸಮಸ್ಯೆಗಳಿಂದ ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅವರ ಶವ ನಿನ್ನೆ ರೈಲ್ವೆ ನಿಲ್ದಾಣದ ಬಳಿಯ ಹಳಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದ ಅಗ್ನಿಶಾಮಕ ಸಿಬ್ಬಂದಿಯ ಕುಟುಂಬ ಸದಸ್ಯರ ಪ್ರಕಾರ, ಆ್ಯಪ್‌ಗಳ ಏಜೆಂಟ್‌ಗಳು ಹಣವನ್ನು ಮರುಪಾವತಿ ಮಾಡದಿದ್ದಕ್ಕೆ ಕಿರುಕುಳ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Previous Articleಕೆ.ಜಿಗೆ 450 ಸನಿಹದಲ್ಲಿ ಹೊಸ ಅಡಿಕೆ – ಬೆಲೆ ಏರಿಕೆಯಾದ್ರೂ ವಹಿವಾಟು ಕಡಿಮೆ
Next Article ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ PSI ಅಂತ್ಯ