ಇಸ್ಲಾಮಾಬಾದ್(ಪಾಕಿಸ್ತಾನ): ಜಕುಬಾಬಾದ್‌ನಲ್ಲಿ ಹಿಂದೂ ಮಹಿಳೆಯೊಬ್ಬರು ಉನ್ನತ ಮಟ್ಟದ ಪೊಲೀಸ್ ಹುದ್ದೆ ಅಲಂಕರಿಸಿದ್ದಾರೆ. ಈ ಮೂಲಕ ಡಿಎಸ್ಪಿಯಾಗಿ ಹುದ್ದೆಗೇರಿದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಮನಿಷಾ ರೂಪೇಟಾ ಅವರು ಸಿಂಧ್ ಪ್ರಾಂತ್ಯದ ಜಕೊಬಾಬಾದ್ ಪ್ರದೇಶದ ಮಧ್ಯಮ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರು ಸಿಂಧ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ 16ನೇ ಸ್ಥಾನ ಪಡೆದು ಡಿಎಸ್ಪಿಗೆ ಆಗಿ ಆಯ್ಕೆಯಾಗಿದ್ದಾರೆ.
ಬಿಬಿಸಿ ಜತೆ ಮಾತನಾಡಿದ ಮನಿಷಾ, ‘ಬಲಿಪಶುಗಳಲ್ಲಿ ಹೆಚ್ಚಿನವರು ಮಹಿಳೆಯರು ಎಂದು ನಾನು ನಂಬುತ್ತೇನೆ. ಆದ್ದರಿಂದ ಅವರನ್ನು ರಕ್ಷಿಸಲು ಮಹಿಳೆಯರೂ ಇರಬೇಕು. ಅದು ನಾನು ಯಾವಾಗಲೂ ಪೊಲೀಸ್ ಪಡೆಯ ಭಾಗವಾಗಲು ಬಯಸುವ ಸ್ಫೂರ್ತಿ’ ಮನೀಶಾ ಕರಾಚಿಯ ಅತ್ಯಂತ ಕಷ್ಟಕರ ಪ್ರದೇಶವಾದ ಲಿಯಾರಿಯಲ್ಲಿ ತರಬೇತಿ ಪಡೆದಿದ್ದಾರೆ. ಈ ಭಾಗದಲ್ಲಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾದ ಮೊದಲ ಮಹಿಳೆ ಮನೀಷಾ ಆಗಿದ್ದಾರೆ.
ಪಾಕಿಸ್ತಾನದ ಡಿಎಸ್ಪಿಯಾಗಿ ಆಯ್ಕೆಯಾದ ಮೊದಲ ಹಿಂದೂ ಮಹಿಳೆ
Previous Articleಸೇತುವೆ ಮೇಲಿಂದ ಹರಿಯುತ್ತಿರುವ ನದಿ ನೀರು: ಜನರ ಹುಚ್ಚಾಟ
Next Article ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಬಂದ್ ಬಿಸಿ