ಮುಂಬೈ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾದ ನಟಿ ಸಮಂತಾ ತಮ್ಮ ವಿಚ್ಛೇದನದ ವಿಚಾರವಾಗಿ ಮಾತನಾಡಿದ್ದಾರೆ. ನಿಮ್ಮ ಪತಿ ನಾಗಚೈತನ್ಯ ಎಂದು ಹೇಳಿದ ಕರಣ್‌ಗೆ ಪತಿಯಲ್ಲ ಮಾಜಿ ಪತಿ ಎಂದು ಸಮಂತಾ ಉತ್ತರ ನೀಡಿದ್ದಾರೆ.
ನಮ್ಮಿಬ್ಬರ ನಡುವೆ ಖಂಡಿತವಾಗಿಯೂ ಸ್ನೇಹ ಉಳಿದಿಲ್ಲ. ಭವಿಷ್ಯದಲ್ಲಿ ಇದು ಬದಲಾಗುತ್ತೋ ಗೊತ್ತಿಲ್ಲ. ನಾವು ಖುಷಿಯಿಂದ ಅಂತೂ ವಿಚ್ಛೇದನ ಪಡೆದಿಲ್ಲ. ನೋವಿನಿಂದಲೇ ನಾನು ಈ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳಿದರು.
ಡಿವೋರ್ಸ್ ಅನೌನ್ಸ್ ಮಾಡುವಾಗ ತುಂಬಾನೇ ಭಯವಿತ್ತು. ಆದರೆ ಈಗ ಗಟ್ಟಿಯಾಗಿದ್ದೇನೆ. ಅನೇಕರು ನಾನು ವಿಚ್ಛೇದನದ ಬಳಿಕ ಅಪ್ಸೆಟ್ ಆಗಿದ್ದೇನೆ ಅಂತಿದ್ದಾರೆ. ಒಂದು ವೇಳೆ ಡಿವೋರ್ಸ್ ಸಿಗದಿದ್ದರೆ ಖಂಡಿತವಾಗಿಯೂ ಅಪ್ಸೆಟ್ ಆಗ್ತಿದ್ದೆ ಎಂದು ಹೇಳಿದರು.
ನಿಮ್ಮನ್ನು ನಾಗಚೈತನ್ಯರನ್ನೂ ಒಂದೇ ರೂಮನಲ್ಲಿಟ್ಟರೆ ಏನು ಮಾಡ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಂತಾ, ರೂಮಿನಲ್ಲಿರುವ ಎಲ್ಲಾ ಮೊನಚಾದ ವಸ್ತುಗಳನ್ನು ಅಡಗಿಸಿ ಇಡಬೇಕಾಗಬಹುದು ಎಂದು ಹೇಳಿದ್ದಾರೆ.
ನಮ್ಮಿಬ್ಬರನ್ನೂ ಒಂದೇ ರೂಮ್‌ನಲ್ಲಿ ಬಿಟ್ಟರೆ ಭಾರೀ ಕಷ್ಟ: ನಟಿ ಸಮಂತಾ
Previous Articleರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಕಾನ್ ಸ್ಟೇಬಲ್…!
Next Article ದೇಶದಲ್ಲಿ ಚಿನ್ನ, ಬೆಳ್ಳಿ ದುಬಾರಿ