ಒಟ್ಟೋವಾ: ಕೆನಡಾದ ಒಂಟಾರಿಯೋ ರಿಚ್ಮಂಡ್ ನಗರದಲ್ಲಿರುವ ಗಾಂಧಿ ಪ್ರತಿಮೆ ಹಾಗು ವಿಷ್ಣು ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ.
ಕೆನಡಾದಲ್ಲಿರುವ ಯಾಂಗ್ ಸ್ಟ್ರಿಂಟ್ ಹಾಗು ಗಾರ್ಡನ್ ಅವೆನ್ಯೂ ಪ್ರದೇಶದಲ್ಲಿರುವ ವಿಷ್ಣು ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಹಾಗೆಯೇ ಗಾಂದಿ ಪ್ರತಿಮೆಯ ಕೆಳಗೆ ಅವಾಚ್ಯ ಶಬ್ದವನ್ನು ಬಳಸಿ ಹಾನಿಗೊಳಿಸಿದ್ದಾರೆ. ಈ ಕೃತ್ಯವನ್ನು ಎಸಗಿದವರ ವಿರುದ್ಧ ಕ್ರಮವನ್ನು ಕೂಡಲೇ ತೆಗೆದುಕೊಳ್ಳುವಂತೆ ಭಾರತವು ಒತ್ತಡವನ್ನು ಹೇರಿದೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.