ಚಿತ್ರದುರ್ಗ,ಜೂ.28-ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಬರಿಗಾಲಲ್ಲಿ ಚಿತ್ರದುರ್ಗದ ಕಲ್ಲಿನ ಗೋಡೆ ಏರಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಮೀಷನರ್ ಶಶಿಕುಮಾರ್ ಕೋತಿರಾಜನ ಮಾದರಿಯಲ್ಲಿ ಚಿತ್ರದುರ್ಗದ ಕಲ್ಲಿನ ಗೋಡೆ ಏರಿ ಗಮನ ಸೆಳೆದಿದ್ದು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಕಲ್ಲಿನ ಗೋಡೆ ಏರಿದ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಿಟ್ಲಾಲಿ ಗ್ರಾಮದ ನಿವಾಸಿ ಆಗಿದ್ದಾರೆ. ಇವರು ಕೋತಿರಾಜ್ ಸಲಹೆಯೊಂದಿಗೆ ಕೋಟೆ ಏರಿದ್ದಾರೆ.
ಇದೀಗ ಕೋಟೆ ಏರಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ಎಂಬ ಬರಹದೊಂದಿಗೆ ಕಮೀಷನರ್ ಶಶಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಹಾಕಿಕೊಂಡಿದ್ದಾರೆ.