ಬೆಂಗಳೂರು, ನ.2: ಇಡೀ ದೇಶವನ್ನು ತಲ್ಲಣಗೊಳಿಸುವ ಬಿಟ್ ಕಾಯಿನ್ (Bitcoin) ಆಭರಣದ ತನಿಖೆ ನಡೆಸುತ್ತಿರುವ ವಿಶೇಷ ತಂಕಾದಂಡಕ್ಕೆ ಹಲವು ಸ್ಪೋಟಕ ಮಾಹಿತಿಗಳು ಲಭ್ಯವಾಗಿದೆ. ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ನೇತೃತ್ವದ ಅಕ್ರಮದಲ್ಲಿ ಪ್ರಭಾವಿಗಳೇ ಶಾಮೀಲಾಗಿದ್ದಾರೆ.
ದೇಶದ ಅರ್ಥ ವ್ಯವಸ್ಥೆಗೆ ಸವಾಲೊಡ್ಡುವ ರೀತಿಯಲ್ಲಿ ನಡೆದಿರುವ ಬಿಟ್ ಕಾಯಿನ್ ಹಗರಣದಲ್ಲಿ ಕೆಲವು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಕುರಿತಂತೆ ಮಾಹಿತಿ ವಿಶೇಷ ತನಿಖಾ ತಂಡಕ್ಕೆ ಲಭ್ಯವಾಗಿದೆ.
ಈ ಅಕ್ರಮದ ರೂವಾರಿಗಳು ಮತ್ತು ಅದಕ್ಕೆ ಸಹಕಾರ,ನೆರವು ನೀಡಿದ ಎಲ್ಲರನ್ನೂ ಬಂಧಿಸಿ ಹೆಡೆಮುರಿ ಕಟ್ಟುವಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಆಕ್ರಮದಲ್ಲಿ ಸ್ವಾಮಿ ಗಳ ವಿರುದ್ಧದ ಸಾಕ್ಷಿ ಸಂಗ್ರಹದಲ್ಲಿ ತನಿಖೆ ತಂಡ ತೊಡಗಿದೆ.
ಹಗರಣದ ಪ್ರಮುಖ ಆರೋಪಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು
ಪೊಲೀಸರು ಮಾದಕ ವಸ್ತು ನಿಗ್ರಹ ಕಾಯ್ದೆ ಅಡಿಯಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಈ ವೇಳೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆರ್ಥಿಕತೆಯನ್ನು ಅಲ್ಲೋಲಕಲ್ಲೋಲ ಮಾಡುವಂತಹ ಬಿಟ್ ಕಾಯಿನ್ ಹಗರಣದ ಮಾಹಿತಿ ಬೆಳಕಿಗೆ ಬಂದಿತ್ತು.
ಇದಾದ ನಂತರ ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಇದು ಶ್ರೀ ಕಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಲವಾರು ಅಂಶಗಳ ಕುರಿತು ಮಾಹಿತಿ ನೀಡಿದ್ದಾನೆ.
ನನ್ನನ್ನು ಬೆದರಿಸಿದ್ದ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳು, ನೂರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಎಂದು ಹೇಳಿ ಹಲವಾರು ಮಾಹಿತಿ ನೀಡಿದ್ದಾನೆ ಈ ಮಾಹಿತಿ ಆಧರಿಸಿ ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳು ಸಮಾಜದ ವಿವಿಧ ವಲಯದ ವಿವಿಧ ವಲಯದ ಗಣ್ಯರು ಅಪರಾಧ ಜಗತ್ತಿನ ನಂಟು ಹೊಂದಿರುವವರ ಮಾಹಿತಿ ಸಂಗ್ರಹಣೆಯಲ್ಲಿ ವಿಶೇಷ ತನಿಖಾ ತಂಡ ತೊಡಗಿದೆ.
ಶ್ರೀಕಿಯೊಂದಿಗೆ ಅನೇಕರು ಸಂಪರ್ಕದಲ್ಲಿದ್ದು ಈ ಆಕ್ರಮದಲ್ಲಿ ಶಾಮಿಲಾಗಿರುವ ಕುರಿತಂತೆ ಕೆಲವೊಂದು ಖಚಿತ ಮಾಹಿತಿಗಳು ವಿಶೇಷ ತನಿಕಾ ತಂಡಕ್ಕೆ ಲಭ್ಯವಾಗಿದೆ ಆದರೆ ಈ ಮಾಹಿತಿಗಳನ್ನು ಮುಂದಿಟ್ಟುಕೊಂಡು ಅಗತ್ಯ ಕಾನೂನು ಕ್ರಮ ಜರುಗಿಸಲು ಬೇಕಾದ ಸಾಕ್ಷಿಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಲ್ಲ ಈ ಹಿನ್ನೆಲೆಯಲ್ಲಿ ಪೂರಕ ಸಾಕ್ಷಿಗಳನ್ನ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ವಿಶೇಷ ತನಿಖಾ ತಂಡ ಶ್ರೀ ಕಿ ಜೈಲಿನಲ್ಲಿದ್ದ ವೇಳೆ ಆತನನ್ನು ಯಾರು ಯಾರು ಭೇಟಿ ಮಾಡುತ್ತಿದ್ದರು ಆತನೊಂದಿಗೆ ಯಾರು ಸಂಪರ್ಕದಲ್ಲಿದ್ದರು ವಿಚಾರಣೆಯ ನೆಪದಲ್ಲಿ ಯಾವ ಯಾವ ಅಧಿಕಾರಿಗಳು ಆತನನ್ನು ಜೈಲಿನಲ್ಲಿ ಭೇಟಿಯಾಗಿದ್ದರು ಹಾಗೆಯೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಮಯದಲ್ಲಿ ಸಂಪರ್ಕಿಸಲು ಯತ್ನಿಸಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಕುರಿತಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲು ಅಧೀಕ್ಷಕರಿಗೆ ಪತ್ರ ಬರೆದಿರುವ ವಿಶೇಷ ತನಿಖಾ ತಂಡ ಶ್ರೀ ಕಿಯನ್ನು ಭೇಟಿ ಮಾಡಿದ ಎಲ್ಲರ ವಿವರ ಸಿಸಿ ಕ್ಯಾಮರಾಗಳ ದೃಶ್ಯಾವಳಿ ನೀಡುವಂತೆ ಕೋರಿದೆ.ಹೀಗಾಗಿ ಒಟ್ಟಾರೆ ವಿದ್ಯಮಾನ ರೋಚಕ ಘಟ್ಟ ತಲುಪಿದೆ.