ಬೆಂಗಳೂರು – ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡುತ್ತಿರುವ ಶಿವಾನಂದ ಪಾಟೀಲ್ ಹಲವಾರು ಕಾರಣಗಳಿಗಾಗಿ ರಾಜ್ಯದ ರಾಜಕೀಯ ಆಸಕ್ತರ ಗಮನಸೆಳೆಯುತ್ತಾರೆ.
ಇದರಲ್ಲಿ ಮೊದಲನೇಯ ಕಾರಣ ಅವರ ಸಹಕಾರ ಚಳುವಳಿ ಎರಡನೆಯ ಹಾಗೂ ಅತಿ ಮುಖ್ಯ ಕಾರಣ ಒಳಸಂಚು ಮತ್ತು ರಂಗೋಲಿ ಕೆಳಗೆ ನುಸುಳುವ ರಾಜಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ದ್ರಾಕ್ಷಿ ನಾಡು ಬಿಜಾಪುರ ಸಹಕಾರ ಚಳುವಳಿಗೆ ಹೆಸರುವಾಸಿಯಾದ ಜಿಲ್ಲೆ ಇಂತಹ ಜಿಲ್ಲೆಯ ಸಹಕಾರ ಚಳುವಳಿಯ ಮೂಲಕವೇ ರಾಜಕಾರಣಕ್ಕೆ ಬಂದ ಶಿವಾನಂದ ಪಾಟೀಲ್ ,ಬಿ ಎಲ್ ಡಿ ಶಿಕ್ಷಣ ಸಂಸ್ಥೆಯ ಎಂ ಬಿ ಪಾಟೀಲ್ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರನ್ನು ವಿರೋಧಿಸುತ್ತಲೇ ರಾಜಕೀಯವಾಗಿ ನೆಲೆ ಕಂಡುಕೊಂಡವರು.
ಜನತಾ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದ ಅವರು ಮುಂದಿನ ಪ್ರಭಾವಿ ನಾಯಕ ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ ಪಳಗಿ ಅವರ ಜೊತೆಗೆ ಗುರುತಿಸಿಕೊಂಡಿದ್ದ ರಮೇಶ್ ಜಿಗಜಿಣಗಿ ಎಂಬಿ ಪಾಟೀಲ್ ಅಪ್ಪು ಪಟ್ಟಣಶೆಟ್ಟಿ ಮೊದಲಾದವರನ್ನು ವಿರೋಧಿಸುತ್ತಾ ತಿಕೋಟಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡರು.
ಬದಲಾದ ಕಾಲಮಾನದಲ್ಲಿ ಬಿಜೆಪಿ ಸೇರಿ ಶಾಸಕರಾದ ಅವರು ಅಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸುವ ಮೂಲಕ ತಾವು ಎಂತಹ ರಾಜಕಾರಣಿ ಎಂಬುದನ್ನ ನಾಡಿಗೆ ಪರಿಚಯ ಮಾಡಿಕೊಟ್ಟರು. ಇವರು ಅಂದು ತೋರಿದ ರಾಜಕೀಯ ಜಾಣ್ಮೆ ಅಥವಾ ಒಳಸಂಚಿನ ಪರಿಣಾಮ ಸುಲಭವಾಗಿ ಗೆಲ್ಲಬಹುದಾಗಿದ್ದ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು ಎಂಬ ಆರೋಪವಿದೆ. ಇದರಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಕಾಂಗ್ರೆಸ್ ಸೇರಿ ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದರು.
ಇಂತಹ ಒಳ ಸಂಚಿನ ರಾಜಕಾರಣಿಗೆ ಅದೃಷ್ಟವೂ ಒಲಿದು ಬಂದಿತ್ತು ಎಂದು ಹೇಳಲಾಗುತ್ತದೆ. ಕಾಂಗ್ರೆಸ್ ಸೇರಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದವರಿಗೆ ಅಂದು ನಡೆದ ಕ್ಷೇತ್ರ ಪುನರ್ ವಿಂಗಡಣೆ ವರದಾನವಾಯಿತು. ತಿಕೋಟ ವಿಧಾನಸಭಾ ಕ್ಷೇತ್ರದ ಕೆಲ ಪ್ರದೇಶಗಳನ್ನೊಳಗೊಂಡ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಬಂದಿತು. ಅಲ್ಲಿಂದ ಹೊಸದಾಗಿ ರಾಜಕಾರಣ ಆರಂಭಿಸಿದ ಶಿವಾನಂದ ಪಾಟೀಲ್ ವಿಜಾಪುರ ಜಿಲ್ಲೆಯಲ್ಲಿ ತಮ್ಮದೇ ಆದ ಪಡೆ ಕಟ್ಟಿಕೊಂಡರು ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಇವರನ್ನು ಬಾಗಲಕೋಟೆಯ ಉಸ್ತುವಾರಿ ಯನ್ನಾಗಿ ನೇಮಿಸಿತು. ಅದನ್ನೇ ಚಿಮ್ಮುಹಲಗೆಯಾಗಿ ಮಾಡಿಕೊಂಡ ಶಿವಾನಂದ ಪಾಟೀಲ್ ಬಾಗಲಕೋಟೆ ಜಿಲ್ಲಾ ಸಹಕಾರ ಬ್ಯಾಂಕಿಗೆ ತಮ್ಮ ಪುತ್ರಿ ಸಂಯುಕ್ತ ಪಾಟೀಲ್ ಅವರನ್ನು ನಿರ್ದೇಶಕಿಯಾಗಿ ಆಯ್ಕೆಯಾಗುವಂತೆ ನೋಡಿಕೊಂಡರು. ಅಂದಿನಿಂದ ತಮ್ಮ ಪುತ್ರಿ ಸಂಯುಕ್ತ ಪಾಟೀಲ್ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡುವಲ್ಲಿ ಯಶಸ್ವಿಯಾದರು.ನಂತರ ಕಾಂಗ್ರೆಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಸಂಯುಕ್ತಾ ಪಾಟೀಲ್ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಮಾಡುವ ಲೆಕ್ಕಾಚಾರ ಹಾಕಿದರು.
ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಅಜಯ್ ಕುಮಾರ್ ಸರ್ ನಾಯಕ್, ಆನಂದ ನ್ಯಾಮಗೌಡ, ವೀಣಾ ಕಾಶಪ್ಪನವರ್ ಪ್ರಯತ್ನ ನಡೆಸುತ್ತಿರುವಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯನ ಮಠ ಹಾಗೂ ಇತರೆ ಮುಖಂಡರ ವಿಶ್ವಾಸ ಗಿಟ್ಟಿಸಿದರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಹೊರತಪಡಿಸಿ ಉಳಿದ ಎಲ್ಲಾ ಕಾಂಗ್ರೆಸ್ ಶಾಸಕರನ್ನು ತಮ್ಮ ಪರವಾಗಿರುವಂತೆ ನೋಡಿಕೊಂಡ ಅವರು ಅಭ್ಯರ್ಥಿ ಆಯ್ಕೆಗಾಗಿ ಅಭಿಪ್ರಾಯ ಆಲಿಸಲು ಬಂದ ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದ ತಂಡಕ್ಕೆ ಎಲ್ಲ ಶಾಸಕರು ಮತ್ತು ಮುಖಂಡರು ಸಂಯುಕ್ತ ಪಾಟೀಲ್ ಅವರ ಹೆಸರನ್ನು ಮಾತ್ರ ಹೇಳುವಂತೆ ನೋಡಿಕೊಂಡರು ಎಂದು ಆರೋಪಿಸಲಾಗಿದೆ.
ಹೀಗಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ ಎಲ್ಲಾ ನಾಯಕರು ಬಿಟ್ಟು ನೆರೆಯ ಜಿಲ್ಲೆಯ ಯಾವುದೇ ಅರ್ಜಿ ಸಲ್ಲಿಸದ ಸಂಯುಕ್ತ ಪಾಟೀಲ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.
ಇಲ್ಲಿ ಶಿವಾನಂದ ಪಾಟೀಲ್ ಅವರ ಸಂಚಿನ ರಾಜಕಾರಣ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದೆ .ಆದರೆ ಚುನಾವಣೆಯಲ್ಲಿ ಸಂಯುಕ್ತ ಪಾಟೀಲ್ ಯಶಸ್ವಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಯಾಕೆಂದರೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಸಂಯುಕ್ತಾ ಪಾಟೀಲ ಕ್ಷೇತ್ರಕ್ಕೇ ಹೊಸಬರು. ನಾಲ್ಕಾರು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ, ಕ್ಷೇತ್ರದ ಪರಿಚಯ ಕಡಿಮೆ. ಸಂಯುಕ್ತಾ ಅವರ ತಂದೆ ಶಿವಾನಂದ ಪಾಟೀಲ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಆ ಅನುಭವದ ಆಧಾರದ ಮೇಲೆಯೇ ಪುತ್ರಿಯನ್ನು ಕಣಕ್ಕಿಳಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎನ್ನುವುದು ಕುತೂಹಲದ ಪ್ರಶ್ನೆ
10 ಪ್ರತಿಕ್ರಿಯೆಗಳು
мастерская по ремонту смартфонов мастерская по ремонту смартфонов .
i-tec.ru multimedijnyj-integrator.ru .
i-tec.ru https://multimedijnyj-integrator.ru .
озвучание или озвучивание https://ozvuchivanie-pomeshhenij.ru .
электрические карнизы для штор http://www.elektrokarniz1.ru/ .
гадание индийский пасьянс онлайн бесплатно гадание индийский пасьянс онлайн бесплатно .
электрокарниз двухрядный цена https://www.provorota.su .
вывод. из. запоя. анонимно. ростов. вывод. из. запоя. анонимно. ростов. .
как заработать деньги онлайн как заработать деньги онлайн .
леечка интернет магазин семена почтой http://semenaplus74.ru/ .