ಬೆಂಗಳೂರು, ಜೂನ್ ೫, – ಬೆಂಗಳೂರಿನ ಜಯನಗರ ಬಡಾವಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ್ ಅವರು ಭಾನುವಾರ ರಾತ್ರಿ ಮೃತ ಪಟ್ಟಿದ್ದಾರೆ. 41 ವರ್ಷ ವಯಸ್ಸಿನ ಮಂಜುನಾಥ್ ಅವರು ಪೊಲೀಸ್ ವೃತ್ತಿಯಲ್ಲಿ ಕಾರ್ಯದಕ್ಷತೆಗೆ ಹೆಸರಾಗಿದ್ದರು. ಅವರು ಕೆಲಸ ಮಾಡಿದಲ್ಲೆಲ್ಲ ಅವರ ಜನಾನುರಾಗಿ ನಡವಳಿಕೆಗೆ ಅವರು ಹೆಸರಾಗಿದ್ದರು. ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿದ್ದ ಅವರು ಜನ ಪರವಾಗಿರುವ ಪೊಲೀಸ್ ಕೆಲಸದ ಬಗ್ಗೆ ಹೆಚ್ಚು ಒಲವು ತೋರಿದ್ದರು. ನಾಗರಿಕರಿಗೆ ಕಿರಿಕಿರಿ ಉಂಟು ಮಾಡುವ ವಿಚಾರಗಳ ಬಗ್ಗೆ ಅವರಿಗೆ ಅಸಹನೆ ಇದ್ದು ನಾಗರೀಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೋಲೀಸರ ಕರ್ತವ್ಯ ಎಂದು ಹೇಳುತ್ತಿದ್ದರು. ಮುಖ್ಯಮಂತ್ರಿಗಳ ಪೊಲೀಸ್ ಪದಕ ಗೌರವ ಪಡೆದಿದ್ದ ಮಂಜುನಾಥ್ ಬಹಳ ದಿನಗಳಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕೆಲವು ತಿಂಗಳುಗಳಿಂದ ಕೆಲಸಕ್ಕೆ ಹಾಜರಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಜುನಾಥ್ ಅವರಿಗೆ ಪತ್ನಿ ಮತ್ತು ಮಗ ಇದ್ದು ಅವರು ತಮ್ಮ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಮೃತದೇಹವನ್ನು ಹಾಸನ ಜಿಲ್ಲೆಗೆ ಕೊಂಡೊಯ್ಯಲಾಗುತ್ತಿದೆ.
Previous Articleರಾಜ್ಯ ಸರ್ಕಾರದ ವಿರುದ್ಧ BJP ಬೀದಿ ಹೋರಾಟ
Next Article ಗೌಡ ಸಂಪ್ರದಾಯದಂತೆ ಅಭಿಷೇಕ್-ಅವೀವಾ ಮದುವೆ