ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ನಟ ಕಿಚ್ಚ ಸುದೀಪ್ ಗೆ ವಿಶೇಷ ಉಡುಗೊರೆ ಕಳಿಸಿದ್ದಾರೆ.
1983ರಲ್ಲಿ ವಿಶ್ವಕಪ್ ಆಡಿದ್ದ ಟೀಂ ಇಂಡಿಯಾ ಆಟಗಾರರ ಹೆಸರು ಮತ್ತು ಆಟೋಗ್ರಾಫ್ ಇರೋ ಸ್ಪೆಷಲ್ ಬ್ಯಾಟನ್ನು ಕಿಚ್ಚನಿಗಾಗಿ ಕಪಿಲ್ ಗಿಫ್ಟ್ ನೀಡಿದ್ದಾರೆ.
“ವಾವ್! ಇದೆಂಥಾ ಭಾನುವಾರ ಇದೊಂದು ಕ್ಲಾಸಿಕ್ ಉಡುಗೊರೆ ಈ ಸರ್ಪ್ರೈಸ್ ಅನ್ನು ನಾನು ನಿರೀಕ್ಷಿಸಿರಲಿಲ್ಲ, ಥ್ಯಾಂಕ್ಯೂ ಕಪಿಲ್ ಸರ್” ಅಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ