ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಮುಂದಿನ ಸಿನಿಮಾ ರವಿ ಬೋಪಣ್ಣ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆಗಸ್ಟ್ 12 ರಂದು ಆಕ್ಷನ್ ಡ್ರಾಮಾ ತೆರೆಗಪ್ಪಳಿಸಲಿದೆ. , ‘ರವಿ ಬೋಪಣ್ಣ’ ಗೆ ರವಿಂದ್ರನ್ ನಿರ್ದೇಶನ ಜೊತೆಗೆ ಸಂಗೀತ ಸಂಯೋಜನೆ ಕೂಡ ರವಿಚಂದ್ರನ್ ಅವರದೇ ಇರಲಿದೆ. ಈ ಸಿನಿಮಾದಲ್ಲಿ ರವಿಂದ್ರನ್ ಸ್ವತ ನಾಯಕನಾಗಿ ನಟಿಸಲಿದ್ದಾರೆ ಎಂಬುದು ಮತ್ತೊಂದು ವಿಶೇಷ. ರವಿ ಬೋಪಣ್ಣ’ ಸಿನಿಮಾದಲ್ಲಿ ಸುದೀಪ್ ಕೂಡ ಬಣ್ಣ ಹಚ್ಚಲಿದ್ದಾರೆ. ‘ಹೆಬ್ಬುಲಿ’ ಚಿತ್ರದಲ್ಲಿ ಕಮಾಲ್ ಮಾಡಿದ್ದ ರವಿಚಂದ್ರನ್ ಹಾಗೂ ಸುದೀಪ್ ಜೋಡಿ ಈ ಸಿನಿಮಾದಲ್ಲಿ ಮತ್ತೆ ಒಂದಾಗುತ್ತಿದ್ದಾರೆ ಸಿನಿಮಾದಲ್ಲಿ ಸುದೀಪ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕಾವ್ಯಾ ಶೆಟ್ಟಿ ನಾಯಕಿಯಾಗಿದ್ದರೆ. ಅಜಿತ್ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಆಗಸ್ಟ್ 12ಕ್ಕೆ ರವಿ ಬೋಪಣ್ಣ ಬಿಡುಗಡೆ: ಕ್ರೇಜಿಸ್ಟಾರ್ ಅಭಿಮಾನಿಗಳಲ್ಲಿ ಕಾತುರ
Previous Articleಕಟಪಾಡಿಯ ಮಟ್ಟು ಬ್ರಿಡ್ಜ್ ಬಳಿ ಶವ ಪತ್ತೆ
Next Article ಮಕ್ಕಳ ಬಗ್ಗೆ ಆತಂಕಬೇಡ: ಡಿಕೆಶಿ ಪುತ್ರಿ ಪೋಷಕರಿಗೆ ಮನವಿ